Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಳ್ಳಾರಿ :  ಸುತ್ತಿಗೆಯಿಂದ ಹೊಡೆದು ಪತ್ನಿ, 7 ತಿಂಗಳ ಮಗುವನ್ನು ಕೊಂದು ಪತಿ ಪರಾರಿ!

---Advertisement---

ಬಳ್ಳಾರಿ.ಜುಲೈ.31: ಕೌಟುಂಬಿಕ ಜಗಳ ವಿಕೋಪಕ್ಕೆ ಹೋಗಿ, ತನ್ನ ಏಳು ತಿಂಗಳ ಮಗು ಹಾಗೂ ಪತ್ನಿಯನ್ನು ಪತಿಯೊಬ್ಬ ಸುತ್ತಿಗೆಯಿಂದ ಹೊಡೆದು ಅತ್ಯಂತ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಅಂದ್ರಾಳ್ ಪ್ರದೇಶದಲ್ಲಿ ನಡೆದಿದೆ.

ಅಂದ್ರಾಳ್‌ನಲ್ಲಿ ವಾಸವಾಗಿದ್ದ ಹೊನ್ನೂರಸ್ವಾಮಿ ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಆರೋಪಿ. ಈತನ ಪತ್ನಿ ರಾಜೇಶ್ವರಿ ಹಾಗೂ ಏಳು ತಿಂಗಳ ಹೆಣ್ಣು ಮಗು ಅಶ್ವಿನಿ ಕೊಲೆಯಾದ ದುರ್ದೈವಿಗಳು.

ದಂಪತಿ ನಡುವೆ ಇದ್ದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಾಗ ಆಕ್ರೋಶಗೊಂಡ ಹೊನ್ನೂರಸ್ವಾಮಿ, ಮನೆಯಲ್ಲಿದ್ದ ಸುತ್ತಿಗೆಯನ್ನು ತೆಗೆದುಕೊಂಡು ಪತ್ನಿ ಮತ್ತು ಮಗುವಿನ ತಲೆಗೆ ಬಲವಾಗಿ ಬೀಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ತಾಯಿ-ಮಗು ಇಬ್ಬರೂ ತೀವ್ರ ರಕ್ತಸ್ರಾವದಿಂದಾಗಿ ಘಟನಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ದುಷ್ಕೃತ್ಯ ಎಸಗಿದ ತಕ್ಷಣವೇ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಬಳ್ಳಾರಿ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

Join WhatsApp

Join Now

Join Telegram

Join Now