Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಳ್ಳಾರಿ ಬ್ಯಾನರ್ ಗಲಾಟೆ : ಮೃತ ರಾಜಶೇಖರ್ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿದ ಜಮೀರ್

---Advertisement---

 

ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕುಟುಂಬಕ್ಕೆ ಆಸರೆಯಾಗಿದ್ದ ಯುವಕ ಸಾವನ್ನಪ್ಪಿದ. ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಮೃತ ರಾಜಶೇಖರ್ ಕುಟುಂಬಕ್ಕೆ ಪರಿಹಾರವನ್ನ ನೀಡಿದ್ದಾರೆ. 25 ಲಕ್ಷ ರೂಪಾಯಿ ಹಣ ನೀಡಿ, ಸಾಂತ್ವಾನ ಹೇಳಿ ಬಂದಿದ್ದಾರೆ.

ಮೃತ ರಾಜಶೇಖರ್ ಮನೆಗೆ ಭೇಟಿ ನೀಡಿದ ಜಮೀರ್ ಅಹ್ಮದ್ ಖಾ‌ನ್, ರಾಜಶೇಖರ್ ರೆಡ್ಡಿ ತಾಯಿ ಹಾಗೂ ಸಹೋದರಿ ತಮ್ಮ ಕಷ್ಟಗಳನ್ನ ಹೇಳಿಕೊಂಡರು. ಅವರ ತಂದೆಯೂ ಹೋಗ್ಬಿಟ್ಟಿದ್ದಾರೆ ಸರ್ ಅಂತ ಮಗ ಹಾಗೂ ಗಂಡನ ಸಾವಿನ ಬಗ್ಗೆ ಆ ತಾಯಿ ನೋವಲ್ಲಿ ಹೇಳಿಕೊಂಡರು. ಇತ್ತ ಸಹೋದರಿ ಇರುವ ಜವಾಬ್ದಾರಿಯ ಬಗ್ಗೆ ಹೇಳಿಕೊಂಡರು. ಬಳಿಕ ಮಾಧ್ಯಮದವರನ್ನೆಲ್ಲಾ ಹೊರಗೆ ಕಳುಹಿಸಿದ ಜಮೀರ್, ಮೃತ ರಾಜಶೇಖರ್ ಕುಟುಂಬಕ್ಕೆ ಪರಿಹಾರ ನೀಡಿದ್ರು.

ಒಂದಷ್ಟು ತಿನಿಸುಗಳನ್ನು ನೀಡಿದರು ಎನಿಸುತ್ತೆ. ಬಳಿಕ ನಿಮ್ಮ ಜೊತೆಗೆ ನಮ್ಮ ಸರ್ಕಾರ ಸದಾ ಜೊತೆಗೆ ಇರಲಿದೆ. ನಮ್ಮ ಶಾಸಕರು ಇಲ್ಲಿನೇ ಇದ್ದಾರೆ ಎಂದು ಧೈರ್ಯ ತುಂಬಿದ್ದಾರೆ. ಜಮೀರ್ ಅಹ್ಮದ್ ಖಾನ್ ಅವರ ಜೊತೆಗೆ ಶಾಸಕ ಭರತ್ ರೆಡ್ಡಿ ಹಾಗೂ ಗಣೇಶ್ ಅವರು ಸಾಥ್ ನೀಡಿದ್ದರು. ಮನೆಯವರಿಗೆ ಮಗನ ಸಾವಿನ ನೋವನ್ನು ಮರೆಯುವ ಶಕ್ತಿ ನೀಡಲೆಂದು ಪ್ರಾರ್ಥಿಸಿ, ಕುಟುಂಬಸ್ಥರ ಜೊತೆಗೆ ಇನ್ನಷ್ಟು ಸಮಯ ಕಳೆದು ಸಮಾಧಾನ ಮಾಡಿ ಬಂದರು. ಬ್ಯಾನರ್ ಕಟ್ಟುವ ಗಲಾಟೆಯ ಸಂದರ್ಭದಲ್ಲಿ ಗಾಳಿಯಲ್ಲಿ ಹಾರಿದ ಗುಂಡು ರಾಜಶೇಖರ್ ದೇಹಕ್ಕೂ ಹೊಕ್ಕಿತ್ತು. ಇಡೀ ಸಂಸಾರದ ಹೊಣೆ ಹೊತ್ತಿದ್ದ ರಾಜಶೇಖರ್ ಸಾವನ್ನಪ್ಪಿದ್ದಾರೆ. ಸಹೋದರಿ, ತಾಯಿ ದಿಕ್ಕೆ ಕಾಣದಂತೆ ಕಣ್ಣೀರಿಡುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...