Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BBK12: ಗಿಲ್ಲಿಗೆ ಎರಡು ಬಾರಿ ಹೊಡೆದ ರಿಷಾ ಗೌಡ : ಮುಂದೇನು..?

---Advertisement---

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ ನಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳು ರೌದ್ರವತಾರ ತಾಳುತ್ತಿದ್ದಾರೆ. ಅದರಲ್ಲೂ ವೈಲ್ಡ್ ಕಾರ್ಡ್ ಮೂಲಕ ಬಂದಂತ ರಿಷಾ ಬಂದಾಗಿನಿಂದಲೂ ರೌದ್ರವತಾರದಲ್ಲಿಯೇ ಇದ್ದಾರೆ. ಬಂದ ದಿನವೇ ಎಲ್ಲರ ಮುಖವಾಡ ಕಳಚುತ್ತೀನಿ ಅಂದ್ರು. ಆದ್ರೆ ಅವರೇನು ಅನ್ನೋದು ಇನ್ನು ಅರ್ಥವಾಗುತ್ತಿಲ್ಲ. ಎಲ್ಲರ ಜೊತೆಗೂ ಜಗಳಕ್ಕೆ‌ ನಿಲ್ಲುತ್ತಾರೆ. ಅದರಲ್ಲೂ ಗಿಲ್ಲಿ, ರಕ್ಷಿತಾ ಜೊತೆಗೆ ಜೋರು ಜಗಳವಾಡುತ್ತಾರೆ. ಇಂದು ಬಿಗ್ ಬಾಸ್ ಮನೆಯಲ್ಲಿ ನಡೆಯಬಾರದ್ದೇ ನಡೆದು ಹೋಗಿದೆ.

 

ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ನಿಯಮಗಳು ಇದೆ. ಯಾರ ಮೇಲೂ ಕೈ ಮಾಡಬಾರದು, ಹೊಡೆಯಬಾರದು ಎಂಬುದು. ಮ್ಯಾನ್ ಹ್ಯಾಂಡ್ಲಿಂಗ್ ಮಾಡಿದ್ರೆ ಮನೆಯಿಂದ ತಕ್ಷಣವೇ ಹೊರಗೆ ಕಳುಹಿಸುತ್ತಾರೆ. ಇವತ್ತಿನ ಪ್ರೋಮೋದಲ್ಲಿ ಮ್ಯಾನ್ ಹ್ಯಾಂಡ್ಲಿಂಗ್ ಮಾಡಿರೋದು ಗೊತ್ತಾಗ್ತಾ ಇದೆ. ಈ ಪ್ರೋಮೋ ನೋಡಿದ ಮೇಲೆ ರಿಷಾ ಗೌಡರ ಮುಂದಿನ ಭವಿಷ್ಯ ಏನಾಗಬಹುದು ಎಂಬ ಪ್ರಶ್ನೆ ಎದುರಾಗಿದೆ. ರಿಷಾ ಗೌಡ ಮುಂದುವರೆಯುತ್ತಾರಾ ಅಥವಾ ಮನೆಯಿಂದ ಹೊರಗೆ ಬರ್ತಾರಾ ಎಂಬ ಕುತೂಹಲವಿದೆ.

ಹಾಗಾದ್ರೆ ರಿಷಾ ಗೌಡ ಏನ್ಮಾಡಿದ್ರು ಎಂಬ ವಿಚಾರ ಇಲ್ಲಿದೆ ನೋಡಿ. ಇವತ್ತಿನ ಪ್ರೋಮೋದಲ್ಲಿ ರಿಷಾ ಸ್ನಾನಕ್ಕೆ ಹೋಗಿರ್ತಾರೆ. ತಡ ಮಾಡಿದ್ದಕ್ಕೆ ಗಿಲ್ಲಿ ಕೇಳ್ತಾರೆ. ಬೇಗ ಬಾ ಅಂತಾನು ಹೇಳ್ತಾರೆ. ಆದರೆ ರಿಷಾ ಬರೋದಿಲ್ಲ. ತಮಾಷೆ ಮಾಡೋಕೆ ಅಂತ ಹೇಳಿ ರಿಷಾರ ಕಬೋಡ್ ನಲ್ಲಿರುವ ಬಟ್ಟೆಯನ್ನೆಲ್ಲಾ ತಂದು ಹೊರಗೆ ಹಾಕ್ತಾರೆ ಗಿಲ್ಲಿ. ಇಲ್ಲಿಂದ ಇಬ್ಬರ ನಡುವೆ ಜೋರು ಜಗಳ ಹತ್ತಿಕೊಳ್ಳುತ್ತೆ. ಗಿಲ್ಲಿ ಮೇಲೆ ರಿಷಾ ಕೈ ಕೂಡ ಮಾಡ್ತಾರೆ. ಒಮ್ಮೆ ಅಲ್ಲ ಎರಡು ಬಾರಿ. ಎರಡನೇ ಬಾರಿ ತಳ್ಳಲು ಹೋದಾಗ ರಕ್ಷಿತಾ ಅಡ್ಡ ಬಂದು ತಡೆಯುತ್ತಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now