Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೂಲಭೂತ ಸೌಲಭ್ಯಗಳು ಪ್ರತಿಯೊಬ್ಬರ ಹಕ್ಕು : ಬಿ.ಕೆ.ಗಿರೀಶ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಮೊ : 78998 64552

ಚಿತ್ರದುರ್ಗ: ಸಂವಿಧಾನದ ಆಶಯದಂತೆ ಶಿಕ್ಷಣ, ವಸತಿ, ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳು ಪ್ರತಿಯೊಬ್ಬರ ಹಕ್ಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ಗಿರೀಶ್ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ನಿರ್ಗತಿಕರ ಮತ್ತು ಮಕ್ಕಳ ಹಿತರಕ್ಷಣಾ ಸಮಿತಿ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಕವಾಡಿಗರಹಟ್ಟಿ ಆಶ್ರಯ ಬಡಾವಣೆ ಎರಡನೆ ಹಂತದಲ್ಲಿ ಶುಕ್ರವಾರ ನಡೆದ ನಿರ್ಗತಿಕರ ಮತ್ತು ಬಡ ಕುಟುಂಬಗಳ ಉಚಿತ ಆರೋಗ್ಯ ತಪಾಸಣೆ, ಶಿಕ್ಷಣ ಕುರಿತ ಕಾನೂನು ಅರಿವು ನೆರವು, ಬಡ ಕುಟುಂಬಗಳಿಗೆ ಉಚಿತ ಉಳಿತಾಯ ಸೇವಾ ಕಾರ್ಡ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇರುವುದೇ ನಿಮಗಾಗಿ ನಿಮ್ಮ ಸಮಸ್ಯೆಗಳು, ಕುಂದುಕೊರತೆಗಳೇನಾದರೂ ಇದ್ದರೆ ಪ್ರಾಧಿಕಾರಕ್ಕೆ ಅರ್ಜಿ ಕೊಡಿ ಪ್ರಾಮಾಣಿಕವಾಗಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರವಿದೆ. ಸದುಪಯೋಗಪಡಿಸಿಕೊಳ್ಳಿ ಎಂದು ಕವಾಡಿಗರ ಹಟ್ಟಿ ಎರಡನೆ ಹಂತದ ನಿವಾಸಿಗಳಿಗೆ ತಿಳಿಸಿದರು.

ಬಡವ-ಸಿರಿವಂತ ಎನ್ನುವ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ಮೂಲಭೂತ ಸೌಲಭ್ಯಗಳು ಸಿಗಬೇಕು. ಸಂವಿಧಾನದಡಿ ಎಲ್ಲರೂ ಆರೋಗ್ಯವಂತರಾಗಿರಬೇಕಾಗಿರುವುದರಿಂದ ಉಚಿತ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಬಿದ್ದವರಿಗೆ ಚಿಕಿತ್ಸೆ ನೀಡಬೇಕು. ಅದೇ ರೀತಿ ಶಿಕ್ಷಣ ಮತ್ತು ವಸತಿ ಅತ್ಯವಶ್ಯಕವಾಗಿ ಬೇಕು ಎಂದು ಹೇಳಿದ ನ್ಯಾಯಾಧೀಶ ಬಿ.ಕೆ.ಗಿರೀಶ್‍ರವರು ನಗರಸಭೆ ಪೌರಾಯುಕ್ತರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ರಾತ್ರಿ ವೇಳೆ ಇಲ್ಲಿ ಕತ್ತಲೆಯಿರುವುದರಿಂದ ಬೀದಿ ದೀಪಗಳನ್ನು ಅಳವಡಿಸಿ ಕುಡಿಯಲು ಶುದ್ದವಾದ ನೀರು ಪೂರೈಸಿ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಇಲ್ಲಿನ ನಿವಾಸಿಗಳಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಎಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಅವಕಾಶ ಕೊಡಬಾರದು ಎಂದು ಸೂಚಿಸಿದರು.

ರಸ್ತೆಗಳು ಎಲ್ಲೆಲ್ಲಿ ಒತ್ತುವರಿಯಾಗಿದೆ ಎನ್ನುವುದನ್ನು ಗುರುತಿಸಿ ಕೂಡಲೆ ತೆರವುಗೊಳಿಸುವಂತೆ ನಗರಸಭೆ ಪೌರಾಯುಕ್ತರಿಗೆ ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್ ಮಾತನಾಡಿ ಗಾಂಜ, ಅಪೀಮು, ಮದ್ಯ ಮಾರಾಟ ಮೊದಲಿನಿಂದಲೂ ನಡೆಯುತ್ತಿದೆ. ಯಾವ ಅಧಿಕಾರಿ ಬಂದರೂ ಹತೋಟಿಗೆ ತರಲು ಆಗುತ್ತಿಲ್ಲ. ಮನೆಯ ಯಜಮಾನ ದುಡಿದ ಹಣವನ್ನೆಲ್ಲಾ ದುಶ್ಚಟಕ್ಕೆ ಹಾಕಿದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಇಡಿ ಕುಟುಂಬವೇ ನಾಶವಾಗುತ್ತದೆ. ಧರ್ಮ ಜಾತಿ ಹೆಸರಿನಲ್ಲಿ ಗಲಭೆಗಳು ನಡೆಯುತ್ತಿದೆ. ಬುದ್ದ, ಬಸವ, ಅಂಬೇಡ್ಕರ್ ಇವರುಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು. ವಿಶೇಷವಾಗಿ ಪೊಲೀಸ್ ಠಾಣೆಗಳಲ್ಲಿಯೇ ಮಾನವ ಹಕ್ಕುಗಳ ಉಲ್ಲಂಘನೆ ಜಾಸ್ತಿಯಾಗುತ್ತಿದೆ ಎಂದು ಹೇಳಿದರು.

ನಿಮ್ಮ ನಿಜವಾದ ಸಮಸ್ಯೆಗಳೇನಾದರೂ ಇದ್ದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಕೊಡಿ ನ್ಯಾಯಾಧೀಶರಾದ ಬಿ.ಕೆ.ಗಿರೀಶ್‍ರವರು ನಿಮ್ಮ ಕುಂದುಕೊರತೆಗಳನ್ನು ನೀಗಿಸುತ್ತಾರೆಂಬ ಭರವಸೆಯಿದೆ ಎಂದರು.

ವಕೀಲರ ಸಂಘದ ಉಪಾಧ್ಯಕ್ಷ ಜಿ.ಸಿ.ದಯಾನಂದ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾಗಿದ್ದರೂ ಬಡತನ ಇನ್ನು ನಿರ್ಮೂಲನೆಯಾಗಿಲ್ಲ. ಮೂಢನಂಬಿಕೆ ಈಗಲೂ ಆಚರಣೆಯಲ್ಲಿದೆ. ಬಡವರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಎಲ್ಲರಿಗೂ ಇದೆ. ಚುನಾವಣೆಯಲ್ಲಿ ಹಣದ ಆಮಿಷಕ್ಕೆ ಬಲಿಯಾಗದೆ ಯೋಗ್ಯರನ್ನು ಆಯ್ಕೆ ಮಾಡಿ ಎಂದು ಕವಾಡಿಗರಹಟ್ಟಿ ಎರಡನೆ ಹಂತದ ನಿವಾಸಿಗಳಲ್ಲಿ ಮನವಿ ಮಾಡಿದರು.

ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡುತ್ತ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಈ ನೆಲದ ಕಟ್ಟ ಕಡೆಯ ವ್ಯಕ್ತಿಗೂ ಮೂಲಭೂತ ಸೌಲಭ್ಯಗಳು ಸಿಗುವಂತಾಗಬೇಕು. ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು.

ಬಡವರು, ನಿರ್ಗತಿಕರು, ಅಸಂಘಟಿತ ಕಾರ್ಮಿಕರು, ಅಬಲೆಯರು, ಮಹಿಳೆಯರು, ಅಪೌಷ್ಠಿಕತೆಯಿಂದ ನರಳುತ್ತಿರುವವರಿಗೆ ಉಚಿತ ಆರೋಗ್ಯ, ಶಿಕ್ಷಣ ವಸತಿ ಸಿಗಬೇಕು.
ಸರ್ಕಾರದಿಂದ ಏನೇನು ಸೌಲತ್ತುಗಳು ಇವೆ ಎನ್ನುವುದರ ಬಗ್ಗೆ ಇನ್ನು ಬಹಳಷ್ಟು ಜನರಿಗೆ ತಿಳಿದಿಲ್ಲ. ಶಿಕ್ಷಣವಂತರಾಗುವ ಮೂಲಕ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಆರ್.ಪ್ರಭಾಕರ ಮಾತನಾಡಿ ಕರ್ನಾಟಕ ರಾಜ್ಯ ನಿರ್ಗತಿಕರ ಮತ್ತು ಮಕ್ಕಳ ಹಿತರಕ್ಷಣಾ ಸಮಿತಿಯಿಂದ ಬಡ ಮಕ್ಕಳಿಗೆ ಶಿಕ್ಷಣ ಸಿಗಬೇಕು. ಅದೇ ರೀತಿ ಬಡವರಿಗೆ ಮೂಲಸೌಲಭ್ಯಗಳು ದೊರಕಬೇಕು. ಶಾಲೆ ಬಿಟ್ಟ ಮಕ್ಕಳ ಮಾಹಿತಿಯನ್ನು ನಮಗೆ ನೀಡಿದರೆ ಪುನಃ ಶಾಲೆಗೆ ಸೇರಿಸುತ್ತೇವೆ. ಬಡತನವನ್ನು ಕಾರಣವಾಗಿಟ್ಟುಕೊಂಡು ಪೋಷಕರುಗಳು ಮಕ್ಕಳನ್ನು ಕೆಲಸಕ್ಕೆ ಕಳಿಸುವುದು ಅಪರಾಧ. ಅಂತಹ ಮಕ್ಕಳಿಗೆ ಸರ್ಕಾರದಿಂದ ಪುನರ್ವಸತಿ ಕಲ್ಪಿಸುವುದಾಗಿಯೂ ಹೇಳಿದರು.

ಸಂಪನ್ಮೂಲ ಕ್ಷೇತ್ರ ಶಿಕ್ಷಣಾಧಿಕಾರಿ ಸಂಪತ್‍ಕುಮಾರ್ ಮಾತನಾಡಿ ನಿರ್ಗತಿಕರು. ಬಡವರು, ಶೋಷಿತರನ್ನು ಗುರಿಯಾಗಿರಿಸಿಕೊಂಡು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಬಳಸಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕಷ್ಟೆ. ಎಲ್ಲದಕ್ಕೂ ಸರ್ಕಾರವನ್ನು ಅವಲಂಭಿಸುವುದು ಸರಿಯಲ್ಲ. ಯಾವ ಮಗುವು ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವುದು ಸರ್ಕಾರದ ಉದ್ದೇಶ. ಪ್ರತಿ ಪೋಷಕರುಗಳು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರ ಬಡತನ, ಶೋಷಣೆಯಿಂದ ಹೊರಬರಲು ಸಾಧ್ಯ ಎಂದು ಕವಾಡಿಗರಹಟ್ಟಿ ನಿವಾಸಿಗಳಿಗೆ ತಿಳಿಸಿದರು.

ಕೋಟೆ ಠಾಣೆಯ ಇನ್ಸ್‍ಪೆಕ್ಟರ್ ರಮೇಶ್‍ರಾವ್ ಮಾತನಾಡುತ್ತ ಬಡವರು ದುಶ್ಚಟಕ್ಕೆ ಬಲಿಯಾದರೆ ಇಡಿ ಕುಟುಂಬವೇ ನಾಶವಾಗುತ್ತದೆ. ಶಿಕ್ಷಣ ಮೂಲಭೂತ ಹಕ್ಕಾಗಿರುವುದರಿಂದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಇಸ್ಪಿಟ್, ಮಟ್ಕ, ಕುಡಿತದಿಂದ ದೂರವಿದ್ದು, ಸಂವಿಧಾನದಡಿ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ನಿರ್ಗತಿಕರ ಮತ್ತು ಮಕ್ಕಳ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಮಂಜುನಾಥ್ ಹೆಚ್.ಹೆಚ್.ಅಧ್ಯಕ್ಷತೆ ವಹಿಸಿದ್ದರು.
ಜಾನಪದ ಹಾಡುಗಾರ ಹೆಚ್.ಪ್ಯಾರೆಜಾನ್ ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ : ವಿದ್ಯಾಭ್ಯಾಸ ಶ್ರೀ ಮಠದ ಜವಾಬ್ದಾರಿ : ಮಾದಾರ ಚನ್ನಯ್ಯ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಮೇ. 10 : ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ ಮಾಡಲಾಗಿದೆ.  ಇವರ ವಿದ್ಯಾಭ್ಯಾಸವನ್ನು

ಚಿತ್ರದುರ್ಗ | ಬಸವೇಶ್ವರರ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552   ಸುದ್ದಿಒನ್, ಚಿತ್ರದುರ್ಗ, ಮೇ. 10 : ರಕ್ತದಾನ ಆರೋಗ್ಯಕ್ಕೆ ಪೂರಕ. ಮಾರಕವಲ್ಲ ಎಂದು ಕಲ್ಕೆರೆ ಮಠದ ಬಸವಲಿಂಗಸ್ವಾಮಿ

ಅಕ್ಷಯ ತೃತೀಯದಂದು ರಿಲೀಸ್ ಆಯ್ತು ‘ಡೆವಿಲ್’ ಮೇಕಿಂಗ್ ವಿಡಿಯೋ: ದರ್ಶನ್ ಫ್ಯಾನ್ಸ್ ದಿಲ್ ಖುಷ್

ಹೇಳಿ ಕೇಳಿ ದರ್ಶನ್ ಮಾಸ್ ಹೀರೋ. ಅವರಿಗಿರುವ ಆಲ್ಮೋಸ್ಟ್ ಅಭಿಮಾನಿಗಳು ಮಾಸ್ ಎಲಿಮೆಂಟ್ನೇ ಹೆಚ್ಚು ಇಷ್ಟ ಪಡುತ್ತಾರೆ. ಅವರಿಗೆ ಇಷ್ಟವಾಗುವಂತ ಸಿನಿಮಾ ಡೆವಿಲ್. ಸಿಕ್ಕಾಪಟ್ಟೆ ನಿರೀಕ್ಷೆ‌ ಇದೆ. ಇದೀಗ ರಿಲೀಸ್ ಆಗಿರುವಂತ ಮೇಕಿಂಗ್ ವಿಡಿಯೋ

error: Content is protected !!