ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 14 : ಶೈಕ್ಷಣಿಕ ವರ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಬಾಪೂಜಿ ಪಬ್ಲಿಕ್ ಸ್ಕೂಲ್‍ನ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಮಿನಿಗುವ ನಕ್ಷತ್ರ(ಸ್ಟಾರ್ ಆಫ್ ದ ಈಯರ್) ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಒಂದನೆ ತರಗತಿಯ ಸುಕೇತನ ಎಂ.ಎಸ್, 2 ನೇ ತರಗತಿಯ ಅಧ್ಯ ಜಿ.ಎನ್. ಮೂರನೆ ತರಗತಿಯ ತನ್ಮಯಿ ನಾಯ್ಕ, 4 ನೆ ತರಗತಿಯ ಗಮನ ಈ.ಆರ್. ಐದನೆ ತರಗತಿಯ ತನುಶ್ರಿ, ಆರನೆ ತರಗತಿಯ ಗೌತಮಿ, ಏಳನೆ ತರಗತಿಯ ಭೂಮಿಕ ಜಿ.ಎಸ್. ಎಂಟನೆ ತರಗತಿಯ ಸುಹಾಸ್ ಎನ್. ಒಂಬತ್ತನೆ ತರಗತಿಯ ಜೀವನ್‍ಕುಮಾರ್ ಬಿ.ಎ. ಇವರುಗಳಿಗೆ ಬಾಪೂಜಿ ಪಬ್ಲಿಕ್ ಸ್ಕೂಲ್‍ನಲ್ಲಿ ಶನಿವಾರ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಬಾಪೂಜಿ ಪಬ್ಲಿಕ್ ಸ್ಕೂಲ್‍ನ ನಿರ್ದೇಶಕ ಕೆ.ಎಂ.ಚೇತನ್, ವಿಶೇಷ ಆಡಳಿತಾಧಿಕಾರಿ ಹನುಮಂತರೆಡ್ಡಿ, ಉಪ ಪ್ರಾಂಶುಪಾಲರಾದ ಹೆಚ್.ಎಂ.ಶಿವಕುಮಾರ್, ಮುಖ್ಯೋಪಾಧ್ಯಾಯರು, ಬೋಧಕ ಮತ್ತು ಬೋಧಕೇತರ ವರ್ಗದವರು, ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.














