Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಾಗಲಕೋಟೆ ಉಪಚುನಾವಣೆ : ಮೇಟಿ ಕುಟುಂಬಸ್ಥರಿಂದ ಟಿಕೆಟ್ ಲಾಬಿ..!

---Advertisement---

ಬೆಂಗಳೂರು: ಸದ್ಯ ರಾಜ್ಯದಲ್ಲಿ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ಒಂದು ಬಾಗಲಕೋಟೆ ಮತ್ತೊಂದು ದಾವಣಗೆರೆ. ಶಾಮನೂರು ಶಿವಶಂಕರಪ್ಪ ಅವರಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಅವರ ಕುಟುಂಬದವರು ಟಿಕೆಟ್ ಗಾಗಿ ಲಾಬಿ ಮಾಡ್ತಿದ್ರೆ, ಇದೀಗ ಹೆಚ್.ವೈ.ಮೇಟಿ ಅವರಿಂದ ತೆರವಾದ ಬಾಗಲಕೋಟೆ ಕ್ಷೇತ್ರಕ್ಕೆ ಇದೀಗ ಮೇಟಿ ಕುಟುಂಬಸ್ಥರೇ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಸಂಬಂಧ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಟಿಕೆಟ್ ಗಾಗಿ ಲಾಬಿ ಮಾಡಿದ್ದಾರೆ.

ಅದರಲ್ಲೂ ಹೊರಗಿನವರ ನಡುವೆ ಸ್ಪರ್ಧೆ ಇರಲಿ, ಮೇಟಿ ಅವರ ಮಕ್ಕಳ ನಡುವೆಯೇ ಟಿಕೆಟ್ ಗಾಗಿ ಸ್ಪರ್ಧೆ ನಡೆಯುತ್ತಿದೆ. ಮೇಟಿ ಅವರ ಮಗ ಮಲ್ಲಿಕಾರ್ಜುನ ಹಾಗೂ ಉಮೇಶ್ ನಡುವೆ ತೀವ್ರ ಪೈಪೋಟಿ ಉಂಟಾಗಿದೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಒಟ್ಟಿಗೆ ಕೆಲಸ ಮಾಡುತ್ತೀವಿ ಎಂದು ಸುದ್ದಿಗೋಷ್ಟಿ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದರು. ಆದರೆ ಮೇಟಿ ಅವರ ಮಕ್ಕಳು ಇದಕ್ಕೆ ಸುತರಾಂ ಒಪ್ಪಿಲ್ಲ.

ಮೇಟಿ ಅವರ ಪುತ್ರಿ ಮಹಾದೇವಿ, ನಾನು ಚುನಾವಣೆ ನಡೆಸಿಯೇ ನಡೆಸುತ್ತೀನಿ ಎಂದು ಅಲ್ಲಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಮೂವರು‌ ಮಕ್ಕಳು ಒಂದು ಕಡೆ ಆದರೆ ಮಹಾದೇವಿಯೇ ಪ್ರತ್ಯೇಕವಾಗಿದ್ದಾರೆ. ಹೀಗಾಗಿ ಸ್ಪರ್ಧೆ ಮಾಡಿನೇ ಮಾಡ್ತೀನಿ ಎಂಬ ಹಠವನ್ನು ಕೂಡ ತೊಟ್ಟಿದ್ದಾರೆ. ಇದೇ ಸಭೆ ವೇಳೆ ಕುಟುಂಬದೊಳಗೆ ನಿಮ್ಮ ನಿಮ್ಮಲ್ಲೇ ಟಿಕೆಟ್​ಗಾಗಿ ಕಿತ್ತಾಡಿಕೊಂಡ್ರೆ ಬೇರೆಯವರಿಗೆ ಟಿಕೆಟ್ ಹೋಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಈಗ ಎರಡು ಕ್ಷೇತ್ರದಲ್ಲೂ ಟಿಕೆಟ್ ಯಾರಿಗೆ ನೀಡಬೇಕು ಎಂಬುದೇ ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now