ಚಿತ್ರದುರ್ಗ,(ಏ.14) : ಬಾಬ ಸಾಹೇಬ್ ಅಂಬೇಡ್ಕರ್ ದೇಶದ ಭವಿಷ್ಯವನ್ನು ಬದಲಾಯಿಸಿದ ಆಧುನಿಕ ಬ್ರಹ್ಮ ಎಂದರೆ ತಪ್ಪಾಗಲಾರದು ಎಂದು ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು.
ನಗರದ ಹೊರವಲಯದ ಬೋವಿ ಗುರುಪೀಠದ ಆಶ್ರಯದಲ್ಲಿ ಇಂದು ನಡೆದ ಡಾ.ಬಿ.ಆರ್. ಅಂಬೇಡ್ಕರ್‍ರವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಶ್ರೀಗಳು, ಅನೇಕ ಮಜಲುಗಳಲ್ಲಿ ಚಿಂತಿಸುವ ಆಲೋಚಿಸುವ ಕಾರ್ಯವನ್ನು ಮಾಡಿದ ಮಹಾನ್ ವ್ಯಕ್ತಿ ಅಂಬೇಡ್ಕರ್ ರಾಗಿದ್ದಾರೆ.ಹುಟಿದ ಮಗು ದರಿದ್ರನಾಗಿದ್ದರು ಸಹಾ ಸಾಯುವ ವೇಳೆಗೆ ಯಾವ ರೀತಿ ಉತ್ತಮವಾದ ವ್ಯಕ್ತಿಯಾಗುತ್ತಾನೆ ಎಂದು ಸಂವಿಧಾನದಲ್ಲಿ ಹೇಳುವುದರ ಮೂಲಕ ನೀಡಿದ್ದಾರೆ. ಅಂಬೇಡ್ಕರ್ರ ಮೇಲು ಮತ್ತು ಕೀಳು ಎಂಬ ಬೇಧ ಬಾವವನ್ನು ಆಳಿದು, ಸರ್ವರು ಸಮಾನರು ಸರ್ವರಿಗಾಗಿ ಸಂವಿಧಾನ ಸಂವಿಧಾನದ ಅಡಿಯಲ್ಲಿ ಸಮಬಾಳು ಮತ್ತು ಸಮಪಾಲು ಎನ್ನುವಂತ ಧ್ಯೇಯವನ್ನು ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
ಬಾಬ ಸಾಹೇಬ್ ಅಂಬೇಡ್ಕರ್ ಅವರ ನಿಜವಾದ ಸ್ವಾತಂತ್ರ್ಯ ಇನ್ನೂ ಕೂಡ ಭಾರತಕ್ಕೆ ಸಿಕ್ಕಿಲ್ಲ, ಅಂಬೇಡ್ಕರ್ ರವರ ನಿಜವಾದ ಸ್ವಾತಂತ್ರ್ಯದ ಪರಿಕಲ್ಪನೆ ಎಂದರೆ ದೇಶದಲ್ಲಿನ ಪ್ರತಿಯೊಬ್ಬ ಪ್ರಜೆಯೂ ಸಾಮಾಜಿಕ, ಶೈಕ್ಷಣಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ಸಮಾನವಾದ ಹಕ್ಕು ಉಳ್ಳುವರದೂ ಆಗುತ್ತಾರೆ ಆದು ಭಾರತ ದೇಶ ನಿಜವಾದ ಸ್ವಾತಂತ್ರ್ಯವನ್ನು ಪಡೆದುಕೊಂಡಂತೆ ಆಗುತ್ತದೆ ಎಂಬ ಭಾವನೆ ಇದೆ. ಸಂವಿಧಾನದ ಆಶಯಗಳನ್ನು ಸರಿಯಾದ ರೀತಿಯಲ್ಲಿ ಸರ್ಕಾರಗಳು ಜನರಿಗೆ ತಲುಪಿಸುವಂತಂಹ ಆಶಯಗಳನ್ನು ಪೂರೈಸುವ ಕೆಲಸವನ್ನು ಮಾಡೆಬೇಕಿದೆ ಕೆಲವು ವರ್ಗಗಳಿಗೆ ಮಾತ್ರ ಮೀಸಲಾತಿಯನ್ನು ನೀಡಿದ್ದಾರೆ ಎಂಬ ತಪ್ಪು ಗ್ರಹಿಕೆ ಬಹಳಷ್ಟು ಜನರಿಗೆ ಇದೆ ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಣ್ಣ ಸಮುದಾಯ ವ್ಯಕ್ತಿಯಾಗಿದ್ದರು ಸಹಾ ಎಲ್ಲರಿಗೂ ಸೇರಿಸಿ ಶೇ.50 ರಷ್ಠು ಮೀಸಲಾತಿ ತಂದಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಈ ಮೀಸಲಾತಿಯಲ್ಲಿ ಬರೀ ದಲಿತರು ಮಾತ್ರವಲ್ಲ ಎಲ್ಲಾ ವರ್ಗದವರಿಗೂ ಎಂಬ ಮನವರಿಕೆಯನ್ನು ಮಾಡಬೇಕಿದೆ ಸ್ತ್ರಿಯರ ಸಮಾನತೆಗಾಗಿ ವ್ಯಕ್ತಿತ್ವ, ವಿಶಾಲವಾದ ಭಾವನೆಯಿಂದ ನೋಡುವ ದೃಷ್ಟಿಯಲ್ಲಿ ಸಂಸತ್‍ಗೆ ರಾಜೀನಾಮೆಯನ್ನು ನೀಡಿದ್ದಾರೆ ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಮಾತ್ರ ಸ್ರ್ತೀ ವಿಮೋಚನಾ ಮಹಾ ಮಹಿಮರಾಗಿದ್ದಾರೆ.
ಇಷ್ಠಾದರೂ ಸಹಾ ಸ್ರೀಯರಿಗೆ ನೀಡಬೇಕಾದ ಶೇ.33 ರಷ್ಟು ಮೀಸಲಾತಿ ಲೋಕಸಬೆಯಲ್ಲಿ ಬಾಕಿ ಇದೆ. ಅದನ್ನು ಪೂರ್ಣ ಮಾಡುವುದರ ಮೂಲಕ ಬಾಬಾ ಸಾಹೇಬ್ ರವರ ವಿಚಾರಗಳನ್ನು ಜಾರಿ ಮಾಡಬೇಕಿದೆ ಎಂದು ಸರ್ಕಾರವನ್ನು ಮತ್ತು ವಿವಿಧ ಪಕ್ಷಗಳನ್ನು ಒತ್ತಾಯಿಸಿ ಬಾಬ ಸಾಹೇಬ್ ಅಂಬೇಡ್ಕರ್ ದೇಶದ ಭವಿಷ್ಯವನ್ನು ಬದಲಾಯಿಸಿದ ಆಧುನಿಕ ಬ್ರಹ್ಮ ಎಂದರೆ ತಪ್ಪಾಗಲಾರದು ಎಂದರು.
ಈ ಸಂದರ್ಭದಲ್ಲಿ ಬೋವಿ ಸಮಾಜದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಸಿಇಓ ಗೋವಿಂದಪ್ಪ, ಕಾರ್ಯದರ್ಶಿ ಲಕ್ಷ್ಮಣ್, ಬೋವಿ ಗುರು ಪೀಠದ ವಿದ್ಯಾ ಸಂಸ್ಥೆಯ ಬೋಧಕ ಬೋದಕೇತರ ವರ್ಗದವರು ಹಾಜರಿದ್ದರು.