ಇಂದು ಚಿತ್ರದುರ್ಗಕ್ಕೆ ಬಿ.ವೈ. ವಿಜಯೇಂದ್ರ ಜಿಲ್ಲಾ ಪ್ರವಾಸ : ಎಲ್ಲೆಲ್ಲಿಗೆ ಭೇಟಿ ನೀಡಲಿದ್ದಾರೆ ? ಇಲ್ಲಿದೆ ಮಾಹಿತಿ…!

1 Min Read

ಸುದ್ದಿಒನ್. ಚಿತ್ರದುರ್ಗ. ನ.16 : ನೂತನ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಅವರು  ಬುಧವಾರ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ನವೆಂಬರ್ 16 ರಂದು ಚಿತ್ರದುರ್ಗ ಜಿಲ್ಲಾ ಪ್ರವಾಸ  ಹಮ್ಮಿಕೊಂಡಿದ್ದಾರೆ.

ನವೆಂಬರ್ 16 ರಂದು ಬೆಳಿಗ್ಗೆ 8:30 ಕ್ಕೆ  ಬೆಂಗಳೂರುನಿಂದ ಹೊರಟು ಚಿತ್ರದುರ್ಗಕ್ಕೆ ಆಗಮಿಸುವರು.

ಜಿಲ್ಲೆಯಾದ್ಯಂತ ಅವರ ಪ್ರವಾಸದ ವಿವರ ಈ ಕೆಳಗಿನಂತಿದೆ.

ಬೆಳಿಗ್ಗೆ 11 ಗಂಟೆಗೆ : ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿಯವರ ಮನೆಗೆ ಭೇಟಿ.

ಬೆಳಿಗ್ಗೆ 11 : 30 ಕ್ಕೆ ಶ್ರೀ ಮುರುಘ ರಾಜೇಂದ್ರ ಮಠಕ್ಕೆ ಭೇಟಿ,

ಬೆಳಿಗ್ಗೆ 11:45 ಕ್ಕೆ  ಶ್ರೀ ಕೃಷ್ಣ ಯಾದವನಂದ ಮಹಾ ಸಂಸ್ಥಾನ ಮಠಕ್ಕೆ ಭೇಟಿ,

ಮಧ್ಯಾನ್ಹ 12 ಕ್ಕೆ ಶ್ರೀ ಜಗದ್ಗುರು ಮಾದಾರ ಚನ್ನಯ್ಯ ಮಠಕ್ಕೆ ಬೇಟಿ.

ಮಧ್ಯಾನ್ಹ 12 : 30 ಕ್ಕೆ  ಶ್ರೀ ಜಗದ್ಗುರು ಸಿದ್ದರಾಮೇಶ್ವರ ಸಂಸ್ಥಾನ ಭೋವಿ ಗುರುಪೀಠಕ್ಕೆ ಭೇಟಿ

ಮಧ್ಯಾನ್ಹ 1 ಗಂಟೆಗೆ ಶ್ರೀ ಸಿರಿಗೆರೆ ಬಹನ್ಮಠಕ್ಕೆ ಭೇಟಿ.

ಮಧ್ಯಾನ್ಹ 3:30 ಕ್ಕೆ ಶ್ರೀ ಚಿನ್ಮೂಲಾದ್ರಿ ಭಗೀರಥ ಗುರುಪೀಠ, ಹೊಸದುರ್ಗ,

ಮಧ್ಯಾನ್ಹ 4:00 ಕ್ಕೆ ಶ್ರೀ ತರಳಬಾಳು ಬೃಹನ್ಮಠ ಶಾಖ ಮಠ, ಸಾಣೆಹಳ್ಳಿ ಹೊಸದುರ್ಗ,

ಮಧ್ಯಾನ್ಹ 4:30 ಕ್ಕೆ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ, ಹೊಸದುರ್ಗ,

ಮಧ್ಯಾನ್ಹ 5 : 15 ಕ್ಕೆ ಶ್ರೀ ಕನಕ ಗುರು ಪೀಠ ಶಾಖಾಮಠ, ಹೊಸದುರ್ಗ

ಈ ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತರ
ಹೊಸದುರ್ಗ – ಹುಳಿಯಾರು – ಶಿರಾ ಮಾರ್ಗವಾಗಿ ಕೇಂದ್ರ ಸ್ಥಾನ ಬೆಂಗಳೂರಿಗೆ 8:30 ಕ್ಕೆ ತೆರಳುವರು ಎಂದು ರಾಜ್ಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಸಿದ್ದು ಪುಂಡಿಕಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *