ಮನಮಿಡಿಯೋ ‘ಕನ್ನೇರಿ’ ವೀಡಿಯೋ ಸಾಂಗ್ ಗೆ ಕರಗಿದ ಸಿನಿಪ್ರಿಯರು

1 Min Read

ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಸಿನಿಮಾ ‘ಕನ್ನೇರಿ’ ರಿಲೀಸ್ ಗೆ ರೆಡಿಯಾಗ್ತಿದ್ದು, ಚಿತ್ರತಂಡ ಒಂದೊಂದೇ ಹಾಡು,ಪೋಸ್ಟರ್ ಅಂತ ರಿಲೀಸ್ ಮಾಡ್ತಾ ಎಲ್ಲರ ಗಮನ ತನ್ನತ್ತ ಸೆಳೆಯುತ್ತಿದೆ. ಕೊಟಿಗಾನಹಳ್ಳಿ ರಾಮಯ್ಯ ಬರೆದಿರುವ ಕಥೆಗೆ ನಿರ್ದೇಶಕ ನೀನಾಸಂ ಮಂಜು ಆ್ಯಕ್ಷನ್ ಕಟ್ ಹೇಳಿದ್ದಾರೆ. ನೀನಾಸಂ ಮಂಜು ಚಿತ್ರಕಥೆಯ ಜೊತೆಗೆ ಕಲಾ ನಿರ್ದೇಶನ ಕೂಡ ನಿಭಾಯಿಸಿದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ.

ಚಿತ್ರದಿಂದ ಮನ ಮಿಡಿಯೋ ಹೆಣ್ಣು ಮಗಳೊಬ್ಬಳ ಕೂಲಿ ಮಾಡಿ ಬದುಕುವ ಜೀವನದ ಚಿತ್ರಣವಿರೋ ಹಾಡೋಂದು ರಿಲೀಸ್ ಆಗಿದೆ. ಕೊಟಿಗಾನಹಳ್ಳಿ ರಾಮಯ್ಯ ಅವರ ಸಾಹಿತ್ಯವಿರುವ ಕಾಣದ ಊರಿಗೆ ಕೂಲಿಗೆ ಹೊರಟೋಳೆ ಎಂಬ ಸಾಹಿತ್ಯದಿಂದ ಶುರುವಾಗೋ ಈ ವೀಡಿಯೋ ಸಾಂಗ್ ಎಂಥವರನ್ನೂ ಒಮ್ಮೆ ಕರಗುವಂತೆ ಮಾಡತ್ತೆ. ಮಣಿಕಾಂತ್ ಕದ್ರಿ ಅವರ ಸಂಗೀತ ಸಂಯೋಜನೆ, ಇಂದು ನಾಗಾರಾಜ್,ಕೀರ್ತನ್ ಹೊಳ್ಳ ಧ್ವನಿ, ಹಾಡಿನಲ್ಲಿ ಬರುವ ದೃಶ್ಯ ಚಿತ್ರಣ ಎಲ್ಲವೂ ಮೂಕ ವಿಸ್ಮಿತರನ್ನಾಗಿ ಮಾಡುವಂತಿದೆ.

ಚಿತ್ರದ ಕುರಿತು ಹೇಳೋದಾದ್ರೆ, ಪ್ರಕೃತಿಯ ಮಡಿಲಿನಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನರನ್ನು, ಅರಣ್ಯ ಇಲಾಖೆ ಒಕ್ಕಲೆಬ್ಬಿತು. ಇದರಿಂದ ಅವರ ಬದುಕು ಸಂಕಷ್ಟಕ್ಕೆ ಸಿಲುಕಿತು. ಹೆಣ್ಣುಮಕ್ಕಳು ಪಟ್ಟಣದಲ್ಲಿ ಮನೆಗೆಲಸಕ್ಕೆ ಸೇರಿ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ರೀತಿ ಪಟ್ಟಣಕ್ಕೆ ಬಂದ ಬುಡಕಟ್ಟು ಜನಾಂಗದ ಹೆಣ್ಣುಮಗಳೊಬ್ಬಳ ಸುತ್ತ ಹೆಣಯಲಾದ ಮಹಿಳಾ ಪ್ರಧಾನ ಚಿತ್ರ ಕನ್ನೇರಿ. ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಪ್ರತಿಭಾನ್ವಿತ ಕಲಾವಿದರ ತಂಡ ಚಿತ್ರದಲ್ಲಿದೆ.


ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ಎಸ್ ನಾಯಕ್ ಸಂಕಲನ ‘ಕನ್ನೇರಿ’ ಚಿತ್ರಕ್ಕಿದೆ

 

Share This Article
Leave a Comment

Leave a Reply

Your email address will not be published. Required fields are marked *