Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಸ್ಕಾಂ ಗ್ರಾಹಕರ ಗಮನಕ್ಕೆ ; 21 ದಿನ ಈ 20 ಪಟ್ಟಣಗಳಲ್ಲಿ ಆನ್‌ ಲೈನ್ ಸೇವೆ ಬಂದ್, ಬಿಲ್ ಪಾವತಿ ಸೇರಿ ಹಲವು ಸೌಲಭ್ಯ ಸ್ಥಗಿತ

---Advertisement---

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ ಹಲವು ಪಟ್ಟಣಗಳ ಗ್ರಾಹಕರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಹೊಸ ತಂತ್ರಾಂಶ ಅಳವಡಿಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸುಮಾರು 21 ದಿನಗಳ ಕಾಲ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ಪ್ರಕಟಿಸಿದೆ. ಈ ಅವಧಿಯಲ್ಲಿ ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಹಲವು ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.

ಹೊಸ ಸಾಫ್ಟ್‌ವೇರ್ ಅಳವಡಿಕೆಗೆ ಬೆಸ್ಕಾಂ ನಿರ್ಧಾರ

ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (IPDS) ಹಂತ-2ರಡಿ, ನಗರ ಪ್ರದೇಶಗಳಲ್ಲಿ ಬಳಸಲಾಗುತ್ತಿರುವ ಐಪಿಡಿಎಸ್ ಐಟಿ ಅಪ್ಲಿಕೇಶನ್ ಅನ್ನು ಬೆಸ್ಕಾಂ ವ್ಯಾಪ್ತಿಯ 20 ಐಪಿಡಿಎಸ್ ಪಟ್ಟಣಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ.ಈ ತಂತ್ರಾಂಶ ವರ್ಗಾವಣೆಗೆ ಅಗತ್ಯವಾದ ದತ್ತಾಂಶ ವರ್ಗಾವಣೆ ಕಾರ್ಯ ನಡೆಯಲಿರುವುದರಿಂದ, ಜೂನ್ 10ರಿಂದ ಜೂನ್ 30ರವರೆಗೆ ಆನ್‌ಲೈನ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಯಾವ ಸೇವೆಗಳು ಲಭ್ಯವಿರುವುದಿಲ್ಲ?

ಪ್ರಸ್ತುತ ಬಳಸಲಾಗುತ್ತಿರುವ ಟಿಆರ್‌ಎಮ್ (TRM) ಸಾಫ್ಟ್‌ವೇರ್ ಬದಲಿಗೆ ಹೊಸ ಐಪಿಡಿಎಸ್ ಐಟಿ ವ್ಯವಸ್ಥೆ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೆಳಕಂಡ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.

ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಕೆ

ಹೆಸರು ಬದಲಾವಣೆ ಅಥವಾ ವರ್ಗಾವಣೆ

ಲೋಡ್ ಹೆಚ್ಚಳಕ್ಕೆ ಸಂಬಂಧಿಸಿದ ಸೇವೆಗಳು

ಬೆಸ್ಕಾಂನ ಅಧಿಕೃತ ಆನ್‌ ಲೈನ್ ಬಿಲ್ ಪಾವತಿ ವ್ಯವಸ್ಥೆ

ಇತರೆ ಆನ್‌ ಲೈನ್ ಗ್ರಾಹಕ ಸೇವೆಗಳು

ಗೂಗಲ್ ಪೇ, ಫೋನ್ ಪೇ ಮೂಲಕ ಬಿಲ್ ಪಾವತಿಗೆ ಅವಕಾಶ

ಆದರೆ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ. Google Pay, PhonePe ಸೇರಿದಂತೆ ತೃತೀಯ ಪಕ್ಷದ ಪಾವತಿ ವೇದಿಕೆಗಳ ಮೂಲಕ ವಿದ್ಯುತ್ ಬಿಲ್ ಪಾವತಿಯನ್ನು ಮುಂದುವರಿಸಬಹುದು ಎಂದು ಬೆಸ್ಕಾಂ ತಿಳಿಸಿದೆ.

ಯಾವ ಪಟ್ಟಣಗಳಲ್ಲಿ ಸೇವೆ ಸ್ಥಗಿತವಾಗಲಿದೆ?

ಕೆಳಕಂಡ 20 ಪಟ್ಟಣಗಳ ಗ್ರಾಹಕರು ಈ ಬದಲಾವಣೆಯ ಪರಿಣಾಮ ಎದುರಿಸಲಿದ್ದಾರೆ:

ಬಾಗೇಪಲ್ಲಿ
ದೇವನಹಳ್ಳಿ
ಗುಡಿಬಂಡೆ
ಮಾಗಡಿ
ಮಾಲೂರು
ನೆಲಮಂಗಲ
ಶ್ರೀನಿವಾಸಪುರ
ವಿಜಯಪುರ
ಚನ್ನಗಿರಿ
ಚಿಕ್ಕನಾಯಕನಹಳ್ಳಿ
ಗುಬ್ಬಿ
ಹೊಳಲ್ಕೆರೆ
ಹೊನ್ನಾಳಿ
ಹೊಸದುರ್ಗ
ಜಗಳೂರು
ಕೊರಟಗೆರೆ
ಮಧುಗಿರಿ
ಮೊಳಕಾಲ್ಮೂರು
ಪಾವಗಡ
ತುರುವೇಕೆರೆ
ಬೆಸ್ಕಾಂ ಮನವಿ
ಹೊಸ ತಂತ್ರಾಂಶ ಅಳವಡಿಕೆಯಿಂದ ಸೇವೆಗಳಲ್ಲಿ ತಾತ್ಕಾಲಿಕ ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಸಂಬಂಧಿತ ಪಟ್ಟಣಗಳ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಮೋದಿ ಸರ್ಕಾರಕ್ಕೆ 12 ವರ್ಷ ಪೂರ್ಣ: ಚಿತ್ರದುರ್ಗದ ನೀಲಕಂಠೇಶ್ವರ ಸನ್ನಿಧಿಯಲ್ಲಿ ನಮೋ ಹೆಸರಲ್ಲಿ ವಿಶೇಷ ಪೂಜೆ

ದೇಹದ ಸದೃಢತೆಗೆ ಸಸ್ಯಾಹಾರಿಗಳು ಸೇವಿಸಬೇಕಾದ ಪ್ರೋಟೀನ್ ಯುಕ್ತ ಆಹಾರಗಳಿವು

ವಿಶ್ವ ನಾಯಕ ನರೇಂದ್ರ ಮೋದಿಯವರ 12 ವರ್ಷಗಳ ಸೇವೆಗೆ ಬಿಜೆಪಿ ಕಾರ್ಯಕರ್ತರಿಂದ ಸಿಹಿ ಹಂಚಿ ಸಂಭ್ರಮ

ಜೂನ್ 21ರಂದು ಕೋಟೆನಾಡಿನಲ್ಲಿ 12ನೇ ಅಂತರರಾಷ್ಟೀಯ ಯೋಗ ದಿನಾಚರಣೆ : ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಒತ್ತಡ ಮುಕ್ತ ಜೀವನಕ್ಕೆ ಯೋಗ ಪ್ರಸ್ತುತ

ಗಣಿಬಾಧಿತ ಗ್ರಾಮಗಳ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಹೈನುರಾಸು ಕಾರ್ಯಕ್ರಮದಡಿ ಆರ್ಥಿಕ ನೆರವು : ಜೂನ್ 22 ರವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಅತಿ ದೀರ್ಘಾವಧಿ ಪ್ರಧಾನಿ ಹೆಗ್ಗಳಿಕೆ: ದಾವಣಗೆರೆಯಲ್ಲಿ ನರೇಂದ್ರ ಮೋದಿ ಹೆಸರಲ್ಲಿ ವಿಶೇಷ ಪೂಜೆ