ಕರ್ನಾಟಕದಲ್ಲಿರುವುದು ಎಟಿಎಂ ಸರ್ಕಾರ : ಚಿತ್ರದುರ್ಗದಲ್ಲಿ ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಹೇಳಿಕೆ

3 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

 

ಸುದ್ದಿಒನ್, ಚಿತ್ರದುರ್ಗ. ಮಾ.07 : ಕರ್ನಾಟಕದಲ್ಲಿರುವುದು ಎಟಿಎಂ ಸರ್ಕಾರವಿದ್ದು ಇಲ್ಲಿ ಹಣಗಳಿಸಿ ತನ್ನ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಕಳಿಸುತ್ತಿದ್ದಾರೆ. ಅವರಿಗೆ ಕರ್ನಾಟಕದಿಂದಲೇ ಅತೀ ಹೆಚ್ಚು ಹಣ ಸಂದಾಯ ಆಗುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಆರೋಪಿಸಿದ್ದಾರೆ.

ನಗರದ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬೂತ್ ಪ್ರಮುಖರ  ಸಮಾವೇಶ ಹಾಗೂ ಪ್ರಬುದ್ಧರ ಸಭೆಯ ಉದ್ಘಾಟಿಸಿ ಮಾತನಾಡಿದ ಅವರು 10 ವರ್ಷದ ಹಿಂದೆ ಬಿಜೆಪಿ ಗೆದ್ದ ನಂತರ ಮೋದಿ ಎಲ್ಲಾ ಗ್ಯಾರೆಂಟಿ 100% ಪೂರೈಸಿದೆ. ಕಾಂಗ್ರೆಸ್ ಗ್ಯಾರೆಂಟಿ ಪೂರೈಸಲು ಸಾಧ್ಯವೇ ಇಲ್ಲ. ಕಾರಣ ಮೊದಲಿನಿಂದಲೂ ಸಿದ್ದರಾಮಯ್ಯ ನುಡಿದಂತೆ ನಡೆದುಕೊಂಡಿಲ್ಲ. 5000 ಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ನ್ಯಾಯ ಕೊಡಲು ಸಿದ್ದರಾಮಯ್ಯ ಅವರಿಗೆ ಆಗಿಲ್ಲ. ಮೋದಿ ಅವರು ರೈತರಿಗೆ ನೀಡಿದ ಹಣ ನೇರವಾಗಿ ಖಾತೆಗೆ ಬರುತ್ತಿದೆ. ಆದರೆ ಇಲ್ಲಿ ರಾಜ್ಯ ಸರ್ಕಾರ ನೀಡದ ಕಾರಣ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದರು.

ಈ ಕ್ಷೇತ್ರದಲ್ಲಿ ಬಂದಿರೋದು ಮೋದಿ ಸರ್ಕಾರ ಮತ್ತೊಮ್ಮೆ ತರಬೇಕಿದೆ.  ಮಹಿಳೆಯರ ಸಬಲೀಕರಣ ಆಗಬೇಕಿದೆ. ಹೆಣ್ಣು ಗಂಡು ಒಂದೇ ಎಂದು ಸಾರಲು ಯೋಜನೆಗಳನ್ನು ರೂಪಿಸಿದರು. ಎಲ್ಲಾ ಮನೆಗಳಿಗೆ ನೀರು ಕುಡಿಸಲು ಯೋಜನೆ. ಎಲ್ಲಾ ಮನೆಗಳಿಗೂ ವಿದ್ಯುತ್ ಸೌಲಭ್ಯ ಕಲ್ಪಸಿದ್ದಾರೆ. ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಮುದ್ರಾ ಯೋಜನೆಯಿಂದ ಸಣ್ಣ ಕೈಗಾರಿಕೆ ಸಾಲ ಸೌಲಭ್ಯ ಪಡೆಯಲು ಅನುವು ಮಾಡಿದ್ದಾರೆ ಅದು ಯಾವುದೇ ಗ್ಯಾರೆಂಟಿ ಪಡೆಯದೆ. ಕಮಲ ಪಿಎಂ ವಿಶ್ವಕರ್ಮ ಯೋಜನೆಯಿಂದ ಸಾಲ ಸೌಲಭ್ಯ. ಮುಸ್ಲಿಂ ಮಹಿಳೆಯರಿಗೆ ನ್ಯಾಯಾ ಕೊಡಿಸಲು ತಲಾಖ್ ರದ್ದು ಮಾಡಿದ್ದಾರೆ ಎಂದರು.

ಕ್ಲೀನ್ ಇಂಡಿಯಾದಿಂದ ದೇಶವನ್ನು ಸ್ವಚ್ಚ ಮಾಡಿದ್ದಾರೆ. ಅದೇ ರೀತಿ ಸ್ಕಿಲ್ ಇಂಡಿಯಾ ರೂಪಿಸಿದ್ದಾರೆ.
ಬಡವರಿಗೆ ಮುಂದಿನ 5 ವರ್ಷಗಳ ವರೆಗೆ 5 ಕೆಜಿ ಅಕ್ಕಿ ನೀಡುವ ಯೋಜನೆಯನ್ನು ಮುಂದುವರೆಸಿದ್ದಾರೆ.
ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ 10 ಕೆಜಿ. ಅಕ್ಕಿನೀಡುತ್ತೇನೆ ಎಂದು ಹೇಳಿ 5 ಕೆಜಿ ಅಕ್ಕಿನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಯಾವ ಯೋಜನೆ ಜನರಿಗೆ ತಲುಪಿದೆ ಏಂಬುದರ ಬಗ್ಗೆ ತಿಳಿಸಲಿ ಇದನ್ನಾ ನಾನು ಎಲ್ಲಿ ಯಾವ ಚಾನಲ್‍ನಲ್ಲಿ ಆದರೂ ವಾದಕ್ಕೆ ಸಿದ್ದನಿದ್ದೆನೆ. ಈ ಸವಾಲನ್ನು ಸ್ವಕರಿಸುವಿರಾ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಹಲವಾರು ಜನ ಸಿಎಂಗಳಿದ್ದಾರೆ ಇದರಲ್ಲಿ ಉಪ ಮುಖ್ಯಮಂತ್ರಿ ಡಿಕೆಶಿ, ಪರಮೇಶ್ವರ್, ಕುರ್ಚಿ ಕಿತ್ತಾಕಲು ಹೊಡೆದಾಟ. ನಂತರ ಸತೀಶ್ ಜಾರಕೀ ಹೊಳಿ ಆಟ ಆಡುತ್ತಿದ್ದಾರೆ. ನಂತರ ಸೂಪರ್ ಸಿಎಂ ಎಂದು ಪ್ರಿಯಾಂಕ ಖರ್ಗೆ ಆಗಿದ್ದಾರೆ. ಶಾಡೋ ಸಿಎಂ ಯತೀಂದ್ರ ಆಗಿದ್ದಾರೆ. ಇದೇ ರೀತಿ 5-6 ಸಿಎಂ ಹೊಂದಿದೆ ರಾಜ್ಯ ಸರ್ಕಾರ. ಈ ತರಾ 5 ಸಿಎಂ ಗಳಿಂದ ಅಭಿವೃದ್ದಿ ಸಾಧ್ಯವಿಲ್ಲ ಎಂದು ತಿಳಸಿದರು.

ಪ್ರಧಾನ ಮಂತ್ರಿ ಆರೋಗ್ಯ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಜನರೋಗ್ಯಾ ಕಾರ್ಡ್. 1.80 ಲಕ್ಷ ರೈತರಿಗೆ ಸೌಲಭ್ಯ 4 ಲಕ್ಷ ಜನರಿಗೆ ಮೋದಿಯ ಜನಾರೋಗ್ಯ ಕಾರ್ಡ್ ಸಿಕ್ಕಿದೆ. ಇದು ಇಲ್ಲಿ ಲೋಕಸಭಾ ಕ್ಷೇತ್ರದ ಯೋಜನೆ. ಇದೇ ರೀತಿ ರಾಜ್ಯ, ದೇಶದಲ್ಲಿ ಬಹಳಷ್ಟು ಜನರು ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.

ಕಾಂಗ್ರೇಸ್ ಅಂದರೆ ಸ್ಕ್ಯಾಮ್, ಹೊರಗಡೆ ಇರುವ ಬಹಳಷ್ಟು ಜನರು ಶೀಘ್ರವೇ ಜೈಲಿಗೆ ಹೋಗಲಿದ್ದಾರೆ.
ವೈದ್ಯಕೀಯ ಕಾಲೇಜುಗಳನ್ನು ಹೆಚ್ಚಿಸಲಾಗಿದೆ.

ಎಲ್ಲಾ ಯೋಜನೆಗಳನ್ನು ಹೆಚ್ಚು ಮಾಡಲಾಗಿದೆ. ಬಡವರಿಗೆ 0 ಅಕೌಂಟ್ ಮಾಡಿಸಿ ಜನರಿಗೆ ಗಣ ಉಳಿತಾಯ ಮಾಡುವ ರೀತಿ ಮಾಡಿದ್ದಾರೆ. ನಾವೆಲ್ಲಾ ಮೋದಿ ಅವರ ಸೇವಕಾರಗಿದ್ದು, ನಾವೆಲ್ಲಾ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಪಣ ತೊಡಬೇಕಿದೆ. ನವ ಭಾರತ, ವಿಕಸಿತ ಭಾರತ ಮುಂದಿನ 50 ವರ್ಷಗಳ ಚಿಂತನೆಯ ಭಾರತವನ್ನು ನಿರ್ಮಾಣ ಮಾಡಲು ಕೈ ಜೋಡಿಸಬೇಕು. ನಾವೆಲ್ಲಾ ಮೋದಿಜಿ ಅವರ ಕುಟುಂಬ. ಮೋದಿ ಅವರಂತೆ ನಾವು ಕೂಡ ಹೆಚ್ಚಿನ ಸಮಯ ಕೆಲಸ ಮಾಡಿ ಗೆಲ್ಲಿಸಬೇಕು ಎಂದು ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಕರೆ ನೀಡಿದರು.

ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಜಿಹೆಚ್ ತಿಪ್ಪಾರೆಡ್ಡಿ ,ಪರಿಷತ್ ಶಾಸಕ ಕೆ ಎಸ್ ನವೀನ್ ಚಿದಾನಂದ ಗೌಡ, ಅನಿಲ್ ಕುಮಾರ್, ಶಿವಮೊಗ್ಗ ಶಾಸಕ ಚನ್ನಬಸಪ್ಪ, ಮಾಜಿ ಸಚಿವ ಭೈರತಿ ಬಸವರಾಜು, ಮಾಜಿ ಶಾಸಕರಾದ ನೇರ್ಲಗುಂಟೆ ತಿಪ್ಪೇಸ್ವಾಮಿ, ಜಿಲ್ಲಾದ್ಯಕ್ಷ ಎ ಮುರಳಿ ಭಾಗವಹಿಸಿದ್ದರು. ಮೂರಾರ್ಜಿ ಪ್ರಾರ್ಥಿಸಿದರೆ ಸಿದ್ದಾಪುರದ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *