ಉಡುಪಿ: ಎಲ್ಲರ ಚಿತ್ತ ಸದ್ಯ ಚಂದ್ರಯಾನ 3 ಕಡೆ ನೆಟ್ಟಿದೆ. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗುವುದಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ನಿಗದಿತ ಸಮಯದಂತೆ ವಿಕ್ರಂ ಲ್ಯಾಂಡರ್ ಇಳಿದರೆ ನಾಳೆ ಸಂಜೆ 6 ಗಂಟೆಯ ನಂತರ ಚಂದ್ರ ಮೇಲೆ ಸೇಫ್ ಲ್ಯಾಂಡಿಂಗ್ ಆಗಲಿದೆ. ಈ ಕುತೂಹಲದ ಘಟ್ಟದಲ್ಲಿಯೇ ಎಲ್ಲರೂ ಇರುವಾಗಲೇ ಉಡುಪಿ ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಇದೀಗ ಚಂದ್ರಯಾನ 3 ಭವಿಷ್ಯ ನುಡಿದಿದ್ದಾರೆ.
ಜ್ಯೋತಿಷ್ಯ ಹಾಗೂ ವಿಜ್ಞಾನ ಎರಡೂ ಲೆಕ್ಕಚಾರಗಳು ಒಂದೇ. ಚಂದ್ರಯಾನ 3 ನೌಕೆಯನ್ನು ತುಲಾ ಲಗ್ನದಲ್ಲಿ ಕಳುಹಿಸಲಾಗಿದೆ. ಅದು ಕುಂಭ ಲಗ್ನದಲ್ಲಿಯೇ ಇಳಿಯಬೇಕು. ಅಂದ್ರೆ ಆಗಸ್ಟ್ 23ರ ಸಂಜೆ 6.30ರ ನಂತರ ಇಳಿಯಬೇಕಾಗುತ್ತದೆ. ಅಲ್ಲದೆ ಭಾರತೀಯ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ, ಆಶೀರ್ವಾದ ಪಡೆದು ಉಡಾವಣೆ ಮಾಡಿದ್ದಾರೆ. ಹೀಗಾಗಿ ಅದಹ ಯಶಸ್ವಿಯಾಗಲೇಬೇಕು. ಸಂಜೆ 6.30ರ ನಂತರ ಚಂದ್ರನ ಮೇಲೆ ಇಳಿಯಬೇಕು ಎಂದಿದ್ದಾರೆ.
ಇನ್ನು ಇದೇ ವೇಳೆ ರಷ್ಯಾದ ಲೂನಾ 25 ವಿಫಲವಾಗುವುದಕ್ಕೂ ಕಾರಣ ತಿಳಿಸಿದ್ದಾರೆ. ರಷ್ಯಾ ಮಿಥುನ ಲಗ್ನದಲ್ಲಿ ಉಡಾವಣೆ ಮಾಡಿದೆ. ಕುಜದ ಪರಿಣಾಮ ಯಾಂತ್ರೀಕೃತ ದೋಷದಿಂದ ರಷ್ಯಾ ಉಪಗ್ರಹ ವಿಫಲವಾಗಿದೆ ಎಂದು ರಷ್ಯಾದ ಉಪಗ್ರಹ ವಿಫಲತೆಗೆ ಕಾರಣ ತಿಳಿಸಿದ್ದಾರೆ.