Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಕ್ರಂ ಲ್ಯಾಂಡರ್ ಎಷ್ಟು ಗಂಟೆಗೆ ಚಂದ್ರನ ಮೇಲೆ ಇಳಿಯಬೇಕು..? ಉಡುಪಿ ಮೂಲದ ಜ್ಯೋತಿಷಿಗಳಿಂದ ಚಂದ್ರಯಾನ 3 ಭವಿಷ್ಯ..!

Facebook
Twitter
Telegram
WhatsApp

 

 

ಉಡುಪಿ: ಎಲ್ಲರ ಚಿತ್ತ ಸದ್ಯ ಚಂದ್ರಯಾನ 3 ಕಡೆ ನೆಟ್ಟಿದೆ. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗುವುದಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ನಿಗದಿತ ಸಮಯದಂತೆ ವಿಕ್ರಂ ಲ್ಯಾಂಡರ್ ಇಳಿದರೆ ನಾಳೆ ಸಂಜೆ 6 ಗಂಟೆಯ ನಂತರ ಚಂದ್ರ ಮೇಲೆ ಸೇಫ್ ಲ್ಯಾಂಡಿಂಗ್ ಆಗಲಿದೆ. ಈ ಕುತೂಹಲದ ಘಟ್ಟದಲ್ಲಿಯೇ ಎಲ್ಲರೂ ಇರುವಾಗಲೇ ಉಡುಪಿ ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಇದೀಗ ಚಂದ್ರಯಾನ 3 ಭವಿಷ್ಯ ನುಡಿದಿದ್ದಾರೆ.

ಜ್ಯೋತಿಷ್ಯ ಹಾಗೂ ವಿಜ್ಞಾನ ಎರಡೂ ಲೆಕ್ಕಚಾರಗಳು ಒಂದೇ. ಚಂದ್ರಯಾನ 3 ನೌಕೆಯನ್ನು ತುಲಾ ಲಗ್ನದಲ್ಲಿ ಕಳುಹಿಸಲಾಗಿದೆ. ಅದು ಕುಂಭ ಲಗ್ನದಲ್ಲಿಯೇ ಇಳಿಯಬೇಕು. ಅಂದ್ರೆ ಆಗಸ್ಟ್ 23ರ ಸಂಜೆ 6.30ರ ನಂತರ ಇಳಿಯಬೇಕಾಗುತ್ತದೆ. ಅಲ್ಲದೆ ಭಾರತೀಯ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ, ಆಶೀರ್ವಾದ ಪಡೆದು ಉಡಾವಣೆ ಮಾಡಿದ್ದಾರೆ. ಹೀಗಾಗಿ ಅದಹ ಯಶಸ್ವಿಯಾಗಲೇಬೇಕು. ಸಂಜೆ 6.30ರ ನಂತರ ಚಂದ್ರನ ಮೇಲೆ ಇಳಿಯಬೇಕು ಎಂದಿದ್ದಾರೆ.

ಇನ್ನು ಇದೇ ವೇಳೆ ರಷ್ಯಾದ ಲೂನಾ 25 ವಿಫಲವಾಗುವುದಕ್ಕೂ ಕಾರಣ ತಿಳಿಸಿದ್ದಾರೆ. ರಷ್ಯಾ ಮಿಥುನ ಲಗ್ನದಲ್ಲಿ ಉಡಾವಣೆ ಮಾಡಿದೆ. ಕುಜದ ಪರಿಣಾಮ ಯಾಂತ್ರೀಕೃತ ದೋಷದಿಂದ ರಷ್ಯಾ ಉಪಗ್ರಹ ವಿಫಲವಾಗಿದೆ ಎಂದು ರಷ್ಯಾದ ಉಪಗ್ರಹ ವಿಫಲತೆಗೆ ಕಾರಣ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curry Leaves Juice : ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ?

ಸುದ್ದಿಒನ್ : ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಸಾಮಾನ್ಯವಾಗಿ ಬಳಸುತ್ತೇವೆ. ವಿವಿಧ ರೀತಿಯ ಅಡುಗೆಗೆ ಅವಶ್ಯವಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳನ್ನು ಹಾಕುವುದರಿಂದ ಉತ್ತಮ ರುಚಿ ಮತ್ತು ಪರಿಮಳ ಹೆಚ್ಚುತ್ತದೆ. ರುಚಿ ಮತ್ತು ವಾಸನೆ ಮಾತ್ರವಲ್ಲದೆ ತುಂಬಾ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ, ಈ ರಾಶಿಯವರು ಆಸ್ತಿ ಉಡುಗೊರೆಯಾಗಿ ಪಡೆಯುವಿರಿ, ಶನಿವಾರ ರಾಶಿ ಭವಿಷ್ಯ -ಜುಲೈ-27,2024 ಸೂರ್ಯೋದಯ: 05:58, ಸೂರ್ಯಾಸ್ತ : 06:47

ಹೊಳಲ್ಕೆರೆ | ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಸುದ್ದಿಒನ್, ಹೊಳಲ್ಕೆರೆ, ಜುಲೈ. 26 : ನಮ್ಮ ರಾಷ್ಟ್ರಧ್ವಜವು ಗಾಳಿಯಿಂದ ಹಾರುತ್ತಿಲ್ಲ ಬದಲಾಗಿ ಅದು ಹಾರುತ್ತಿರುವುದು ಈ ದೇಶಕ್ಕಾಗಿ ಮಡಿದ ವೀರ ಯೋಧರ ಸೈನಿಕರ ಉಸಿರಿನಿಂದ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್. ವಸಂತ್ ಹೇಳಿದರು.

error: Content is protected !!