Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಶ್ರೀಮತಿ ಇಂದಿರಾಗಾಂಧಿಯವರ 106ನೇ ಜನ್ಮ ದಿನಾಚರಣೆ ಕಾರ್ಯಕ್ರಮ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 9886295817

ಸುದ್ದಿಒನ್, ಚಿತ್ರದುರ್ಗ.ನ. 19 : ಇಂದಿರಾಗಾಂಧಿಯವರು ತಮ್ಮ ಆಧಿಕಾರದ ಅವಧಿಯಲ್ಲಿ ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡುವುದರ ಮುಲಕ ಬಡವರು, ರೈತರು, ಕಾರ್ಮಿಕರು, ಸಾಮಾನ್ಯ ಜನತೆ ಬ್ಯಾಂಕ್‍ನ ವ್ಯವಹಾರದಲ್ಲಿ ಭಾಗವಹಿಸವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರ್ಲಗುಂಟೆ ರಾಮಪ್ಪ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರ 106ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಪ್ಷ ನಮನ ಸಲ್ಲಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಬ್ಯಾಂಕ್ ಎಂದರೆ ಶ್ರೀಮಂತರಿಗಾಗಿಯೇ ಇತ್ತು ಅಲ್ಲಿ ಬಡವರು ರೈತರು ಕಾರ್ಮೀಕರು ಸೇರಿದಂತೆ ಇತರೆ ವರ್ಗದವರು ಹೋಗದ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಮಯದಲ್ಲಿ ಇಂದಿರಾಗಾಂಧಿಯವರು 1959ರಲ್ಲಿ 14 ಮತ್ತು 1969ರಲ್ಲಿ 6 ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡುವುದರ ಮೂಲಕ ಬಡವರು ಸೇರಿದಂತೆ ಎಲ್ಲಾ ವರ್ಗದವರು ಸಹಾ ಬ್ಯಾಂಕ್‍ನ ಉಪಯೋಗ ಪಡೆಯುವ ಸೌಲಭ್ಯವನ್ನು ಕಲ್ಪಿಸಿದರು ಎಂದರು.

ಇಂದಿರಾಗಾಂಧಿಯವರು ತಮ್ಮ ಆಡಳಿತದ ಅವಧಿಯಲ್ಲಿ ಹಲವಾರು ಜನಪರವಾದ ಕಾರ್ಯಕ್ರಮಗಳನ್ನು ಬಡವರಿಗಾಗಿ ನೀಡುವುದರ ಮೂಲಕ ಉತ್ತಮವಾದ ಆಡಳಿತವನ್ನು ನೀಡಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮವಾದ ಸಚಿವ ಸಂಪುಟವನ್ನು ಹೊಂದಿದ್ದ ಅವರು, ಉತ್ತಮವಾದ ನಿರ್ಣಯಗಳನ್ನು ತೆಗೆದುಕೊಳ್ಳುವುದರ ಮೂಲಕ ಜನ ಸ್ನೇಹಿ ಆಡಳಿತವನ್ನು ನೀಡಿದರು.

ಚುನಾವಣೆಯ ಸಮಯದಲ್ಲಿ ವಾಜಿಪೇಯಿಯವರ ವಿರುದ್ದ ಕಾಂಗ್ರೆಸ್ ಪಕ್ಷದಿಂದ ವೀಕ್ ಅಭ್ಯರ್ಥಿಯನ್ನು ಹಾಕುವುದರ ಮೂಲಕ ಅವರನ್ನು ಪಾರ್ಲಿಮೆಂಟ್‍ಗೆ ಆಯ್ಕೆ ಮಾಡಿ ಅಲ್ಲಿ ಸರ್ಕಾರದ ತಪ್ಪುಗಳನ್ನು ತಿಳಿಸುವಂತ ಕಾರ್ಯವನ್ನು ಮಾಡಿದರು. ಅಂದಿನ ದಿನಮಾನದಲ್ಲಿ ರಾಜಕೀಯ ಎಂದರೆ ಉತ್ತಮವಾದ ಬಾಂಧವ್ಯವನ್ನು ಹೊಂದಿತ್ತು ಎಂದರು.

ಇಂದಿನ ದಿನಮಾನದಲ್ಲಿ ರಾಜಕೀಯ ಎಂದರೆ ದ್ವೇಷದ ರಾಜಕಾರಣ ಎಂಬಂತೆ ಆಗಿದೆ, ಒಂದು ಪಕ್ಷದವರನ್ನು ಕಂಡರೆ ಮತ್ತೊಂದು ಪಕ್ಷದವರಿಗೆ ಆಗುವುದಿಲ್ಲ. ಅವರು ಮಾಡಿದ ಸಣ್ಣ ತಪ್ಪನ್ನು ಸಹಾ ದೊಡ್ಡದಾಗಿ ಬಿಂಬಿಸುವುದರ ಮೂಲಕ ದ್ವೇಷವನ್ನು ಸಾಧಿಸಿ ಅವರ ತೇಜೋವಧೆಗೆ ಮುಂದಾಗುತ್ತಿದ್ದಾರೆ. ಇದರಿಂದ ಮತದಾರರ ದಿಕ್ಕನ್ನು ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇವರು ಈ ರೀತಿ ಮಾಡುವುದರಿಂದ ನಮ್ಮ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಇದನ್ನು ನಮ್ಮ ಪಕ್ಷದವರು ಸಹಾ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದ ಅವರು ಸರ್ಕಾರ ಚುನಾವಣೆ ಸಮಯದಲ್ಲಿ ನೀಡಿದ ಮಾತಿನಂತೆ ಜನರಿಗೆ ಭಾಗ್ಯಗಳನ್ನು ಜಾರಿ ಮಾಡಿದೆ, ಇದನ್ನು ಪಕ್ಷದ ಕಾರ್ಯಕರ್ತರು ಸರಿಯಾದ ರೀತಿಯಲ್ಲಿ ಜನತೆಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮಗೆ ಶ್ರೀರಕ್ಷೆಯಾಗಲಿದೆ ಎಂದು ರಾಮಪ್ಪ ತಿಳಿಸಿದರು.

ಕಾಂಗ್ರೆಸ್ ಸರ್ಕಾರ ನೀಡಿರುವ ಭಾಗ್ಯಗಳ ಬಗ್ಗೆ ದೇಶದಲ್ಲಿಯೇ ಚರ್ಚೆಯಾಗುತ್ತಿದೆ, ಮುಂದಿನ ಎಲ್ಲಾ ಚುನಾವಣೆಯಲ್ಲಿಯೂ ಸಹಾ ಇದನ್ನು ಅನುಸರಿಸುವ ಕಾರ್ಯವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದೇ ರೀತಿ ಸಂವಿಧಾನವನ್ನು ಫಾಲನೆ ಮಾಡುತ್ತಾ ಆಡಳಿತವನ್ನು ನಡೆಸುತ್ತಿದ್ದಾರೆ. ಬಿಜೆಪಿಯವರು ಸಂವಿಧಾನದಲ್ಲಿ ನಂಬಿಕೆ ಇಲ್ಲದೆ ಅದನ್ನು ತೆಗಳುವ ಮಾತುಗಳನ್ನಾಡುತ್ತಿದ್ದಾರೆ ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರಾದ ಶ್ರೀಮತಿ ಗೀತಾನಂದಿನಿಗೌಡರವರು ಮಾತನಾಡಿ, ಇಂದಿರಾಗಾಂಧಿಯವರು ದೇಶದ ಎಲ್ಲಾ ಮಹಿಳೆಯರಿಗೆ ಆದರ್ಶವಾಗಿದ್ದಾರೆ. ಇಲ್ಲಿ ಪಕ್ಷದ ಮುಖಂಡರು ಹೇಳುವ ಮಾತುಗಳನ್ನು ಕೇಳಿಸಿಕೊಂಡು ಬೇರೆಯವರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ. ಇಂದಿರಾಗಾಂಧಿಯವರ ಆಡಳಿತ ಉತ್ತಮವಾಗಿದ್ದು ಅಂದು ಆವರು ಹಾಕಿ ಕೊಟ್ಟ ವಿವಿಧ ಕಾರ್ಯಕ್ರಮಗಳು ಇಂದಿಗೂ ಸಹಾ ಧಾರಿ ದೀಪವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಅಧ್ಯಕ್ಷರಾದ ತಾಜ್‍ಪೀರ್ ಮಾತನಾಡಿ, ಇಂದಿರಾಗಾಂಧಿಯಂತಹ ಮಾಹಾನ್ ನಾಯಕಿ ಇದ್ದ ಪಕ್ಷದಲ್ಲಿ ನಾವುಗಳು ಇರುವುದು ನಮ್ಮ ಸೌಭಾಗ್ಯವಾಗಿದೆ. ನಿಜಲಿಂಗಪ್ಪ ಮತ್ತು ಇಂದಿರಾಗಾಂಧಿಯವರ ಬಾಂಧವ್ಯ ಉತ್ತಮವಾಗಿತ್ತು ಅವರನ್ನು ಇಂದಿರಾಗಾಂಧಿಯವರು ಚಿಕ್ಕಪ್ಪ ಎಂದು ಕರೆಯುತ್ತಿದ್ದರು. ಅವರನ್ನು ನಾನು ಚಿಕ್ಕ ವಯಸ್ಸಿನಲ್ಲಿ ನೋಡಿದ್ದು ಅವರ ಭಾಷಣವನ್ನು ಸ್ವಲ್ಪ ದೂರದಿಂದ ಕೇಳುವ ಸೌಭಾಗ್ಯ ನನಗೆ ಸಿಕ್ಕಿತು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಾಂಗ್ರೆಸ್ ಹಿರಿಯವರಾದ ಜಮೀರ್,   ಮೈಲಾರಪ್ಪ, ಸಂಪತ್ ಕುಮಾರ್. ಕೆಡಿಪಿ ಸದಸ್ಯರಾದ ನಾಗರಾಜ್ ಇಂದಿರಾಗಾಂಧಿಯವರ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಓ ಶಂಕರ್, ಎನ್.ಡಿ.ಕುಮಾರ್, ರವಿ, ಮುದಸಿರ್, ಸಂದೀಪ್, ಭಾಗ್ಯಮ್ಮ, ತುಳಸಿ, ಮಹಾಂತೇಶ್, ಸುನಿಲ್‍ಕುಮಾರ್ ಶ್ರೀಮತಿ ಮೋಕ್ಷಾ ರುದ್ರಸ್ವಾಮಿ, ಶ್ರೀಮತಿವೀಣಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
——————————————————————-

ಮಾಜಿ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರ 106 ನೇ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಇಂದಿರಾ ಕ್ಯಾಂಟಿನ್‍ನಲ್ಲಿ ಇಂದು ಮಧ್ಯಾಹ್ನ  ಉಚಿತವಾಗಿ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.

ಜಿಲ್ಲಾ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷರಾದ ಶ್ರೀಮತಿ ಗೀತಾ ನಂದಿನಿ ಗೌಡ ರವರು ಇದರ ಸಾರಥ್ಯವನ್ನು ವಹಿಸಿದ್ದು, ನೆರೆದಿದ್ದ ಜನತೆಗೆ ಇಂದಿರಾಜೀರವರ ಜನ್ಮ ದಿನಾಚರಣೆಯ ಅಂಗವಾಗಿ ಉಪ್ಪಿಟ್ಟು ಮತ್ತು ಕೇಸರಿಬಾತ್ ನ್ನು ವಿತರಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಪಕ್ಷದ ಕಾರ್ಯಕರ್ತರು ಸಾರ್ವಜನಿಕರು ಸೇರಿದಂತೆ ನೂರಾರು ಜನ ಭಾಗವಹಿಸಿ ಉಪಹಾರವನ್ನು ಸೇವಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದಲ್ಲಿ ಅಕ್ಕ-ತಂಗಿಯರ ಸಂಭ್ರಮದ ಭೇಟಿ, ಸಂಭ್ರಮಿಸಿದ ಜನತೆ : ತಿಪ್ಪಿನಘಟ್ಟಮ್ಮ, ಬರಗೇರಮ್ಮ ದೇವಿಯ ಭೇಟಿಗೆ ಕಾತರದಿಂದ ಕಾದ ಭಕ್ತರು

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಮೇ. 07 :  ನಗರ ದೇವತೆಗಳಾದ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ಮತ್ತು ಬರಗೇರಮ್ಮ ದೇವಿ ಭೇಟಿ ಉತ್ಸವ

ಸಂಜೆ ವೇಳೆಗೆ ಹಿರಿಯೂರಿನಾದ್ಯಂತ ಗುಡುಗು ಸಹಿತ ಬಾರಿ ಮಳೆ..!

ಹಿರಿಯೂರು: ಮಳೆಯಿಲ್ಲದೆ ಕಂಗಲಾಗಿದ್ದ ಹಿರಿಯೂರಿನ ಮಂದಿಗೆ ವರುಣಾರಾಯ ತಂಪೆರೆದಿದ್ದಾನೆ. ಸಂಜೆ ವೇಳೆ ಜೋರು ಮಳೆ ಬಂದಿದ್ದು, ಜನ ಫುಲ್ ಖುಷಿಯಾಗಿದ್ದಾರೆ. ಕಳೆದ ಬಾರಿ ಹಿಂಗಾರು-ಮುಂಗಾರು ಮಳೆಯಿಲ್ಲದೆ ಬಿಸಿ ಗಾಳಿಯನ್ನು ಅನುಭವಿಸಿ ಅನುಭವಿಸು ಜನ ಸುಸ್ತಾಗಿ

ಅಣು ಬೋಧನೆ ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಸೂಕ್ಷ್ಮವಾಗಿ ಪಾಠ ಮಾಡುವ ಒಂದು ವಿಧಾನ :  ಉಪನ್ಯಾಸಕಿ ಅರ್ಚನ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 07 : ಅಣು ಬೋಧನೆ ಎನ್ನುವುದು ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಸೂಕ್ಷ್ಮವಾಗಿ ಪಾಠ ಮಾಡುವ ಒಂದು

error: Content is protected !!