ಬೆಂಗಳೂರು: ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಸಿನಿಮಾ ಸಲಗ ಇದೇ 14ರಂದು ತೆರೆಗೆ ಬರೋದಕ್ಕೆ ಸಿದ್ಧತೆ ನಡೆಸಿದೆ. ಈ ಮಧ್ಯೆ ಪ್ರಿರಿಲೀಸ್ ಕಾರ್ಯಕ್ರಮವನ್ನು ಸಲಗ ಟೀಂ ಇಟ್ಕೊಂಡಿತ್ತು. ಅದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಗಣ್ಯಾತೀಗಣ್ಯರು ಭಾಗಿಯಾಗಿದ್ರು.. ಪುನೀತ್, ಶಿವಣ್ಣ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಸೇರಿದ್ರು.
ಈ ವೇಳೆ ಡಿ ಕೆ ಶಿವಕುಮಾರ್ ಮಾತನಾಡಿ, ಬಣ್ಣದ ಜಗತ್ತಿನ ಬಗ್ಗೆ ಒಂದಷ್ಟು ಮೆಲುಕು ಹಾಕಿದ್ರು.. ಅವರು ಕೂಡ ಸಿನಿಮಾದ ಜಗತ್ತಿನಲ್ಲಿ ಒಂದಷ್ಟು ಕೆಲಸಗಳನ್ನ ಮಾಡಿದ್ರು. ಆ ಬಗ್ಗೆ ಸ್ವಾರಸ್ಯಕರ ವಿಚಾರವನ್ನು ಹಂಚಿಕೊಂಡರು.
ರಾಜಕೀಯಕ್ಕೂ ಬರೋ ಮುನ್ನ ನಾನು ಎಗ್ಸಿಬ್ಯೂಟರ್ ಆಗಿ ಕೆಲಸ ಮಾಡಿದ್ದೇನೆ. ಗಾಂಧಿನಗರದಲ್ಲಿ ರೀಲ್ಸ್ ಬಾಕ್ಸ್ ಗಳನ್ನ ಹೊರುತ್ತಿದೆ. ಈ ಮಧ್ಯೆ ಸಿನಿಮಾ ರಂಗದಿಂದ ದೂರವಾಗಿದ್ದೆ.. ಈಗ ಮತ್ತೆ ಅದಕ್ಕೆ ಹತ್ತಿರವಾಗಿದ್ದೇನೆ. ಮತ್ತೆ ಸಿನಿಮಾರಂಗದತ್ತ ಮನಸ್ಸು ಮಾಡಿದ್ದೇನೆ. ನೀವೆಲ್ಲಾ ಬಣ್ಣ ಹಚ್ಚಿ ನಾಟಕ ಮಾಡಿದ್ರೆ ನಾವೂ ಹಚ್ಚದೇ ಮಾಡ್ತೇವೆ ಅಂತ ನೆರೆದಿದ್ದವರನ್ನ ನಗಿಸಿದ್ರು.