ಇದು ಸ್ಮಾರ್ಟ್ ಫೋನ್ ಗಳ ಯುಗ. ವಯಸ್ಸಿನ ವರ್ಗವೇ ಇಲ್ಲದೇ ಮೊಬೈಲ್ ಉಪಯೋಗಿಸುವ ಕಾಲವಾಗಿದೆ. ಈಗಂತು ಮಕ್ಕಳಿಗೂ ಸ್ಮಾರ್ಟ್ ಫೋನ್ ಅನಿವಾರ್ಯವಾಗಿದೆ. ಮಕ್ಕಳಿಗೆ ಕ್ಲಾಸನ್ನು ಮೊಬೈಲ್ ನಲ್ಲೇ ಮಾಡಪಾಗುತ್ತಿದೆ. ಹೀಗಾಗಿ ಮೊಬೈಲ್ ಅಡಿಕ್ಷನ್ ಸರ್ವೇ ಸಾಮಾನ್ಯವಾಗಿದೆ. ಆದ್ರೆ ಅಲ್ಲೊಂದು ಶಿಕ್ಷಕ ವರ್ಗ ಮಕ್ಕಳು ಮೊಬೈಲ್ ಉಪಯೋಗಿಸುವುದನ್ನು ಖಂಡಿಸಿದೆ, ಮೊಬೈಲ್ ಗಳಿಗೆ ಬೆಂಕಿ ಹಾಕಿದೆ.

https://www.instagram.com/reel/CaM9pgfM3VN/?utm_medium=copy_link

ಶಾಲಾ ಕಾಲೇಜಿನೊಳಗೆ ಮೊಬೈಲ್ ತರಲು ಅನುಮತಿ ಇಲ್ಲ. ಆನ್ಲೈನ್ ಕ್ಲಾಸ್ ಇದ್ದಾಗ, ಮನೆಯಲ್ಲಿದ್ದಾಗ ಉಪಯೋಗಿಸಬಹುದು. ಆದ್ರೆ ಕ್ಲಾಸ್ ರೂಂನೊಳಗೆ ಮೊಬೈಲ್ ತಂದ ವಿದ್ಯಾರ್ಥಿಗಳ ಬಳಿ ಮೊಬೈಲ್ ಕಸಿದುಕೊಂಡು ಬೆಂಕಿಗೆ ಹಾಕಿದ್ದಾರೆ. ವಿದ್ಯಾರ್ಥಿಗಳು ಎಷ್ಟೇ ಗೋಗರೆದರು ಬಿಟ್ಟಿಲ್ಲ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
https://www.instagram.com/reel/CaM9pgfM3VN/?utm_medium=copy_link
ಈ ಘಟನೆ ನಡೆದಿರೋದು ಇಂಡೋನೇಷ್ಯಾದಲ್ಲಿ. ಮೊಬೈಲ್ ಗಳನ್ನ ಬೆಂಕಿಗೆ ಹಾಕುವಾಗ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಬೆಂಕಿ ಹೊತ್ತಿಸುವುದನ್ನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೂ ಶಿಕ್ಷಕರು ಆ ಕಡೆ ಗಮನಕೊಟ್ಟಿಲ್ಲ. ಎಲ್ಲರ ಬಳಿಯಿದ್ದ ಸ್ಮಾರ್ಟ್ ಫೋನ್ ಗಳನ್ನು ತೆಗೆದು ಬೆಂಕಿಗೆ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಓಡಾಡುತ್ತಿದೆ.


