Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಏಷ್ಯನ್ ಗೇಮ್ಸ್ 2026: ಭಾರತಕ್ಕೆ ಮೊದಲ ಪದಕ : ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡಕ್ಕೆ ಬೆಳ್ಳಿ

---Advertisement---

ನಗೋಯಾ (ಜಪಾನ್): ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತನ್ನ ಪದಕದ ಖಾತೆಯನ್ನು ತೆರೆದಿದೆ. ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಭಾರತದ ಇಳವೇನಿಲ್ ವಲರಿವನ್, ಸೋನಮ್ ಮಸ್ಕರ್ ಮತ್ತು ವಿದರ್ಶಾ ವಿನೋದ್ ಅವರನ್ನೊಳಗೊಂಡ ತ್ರಿವಳಿ ತಂಡವು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದೆ.

ಭಾರತೀಯ ತಂಡವು ಒಟ್ಟು 1898 ಅಂಕಗಳನ್ನು ಕಲೆಹಾಕಿ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು. ಚೀನಾ ಅಗ್ರಸ್ಥಾನ ಗಳಿಸಿದರೆ, ಜಪಾನ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ ಇಳವೇನಿಲ್ ವಲರಿವನ್ 633.5 ಅಂಕಗಳೊಂದಿಗೆ ಮಿಂಚಿದ್ದಲ್ಲದೆ, ವೈಯಕ್ತಿಕ ವಿಭಾಗದ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಸೋನಮ್ ಮಸ್ಕರ್ ಕೂಡ ವೈಯಕ್ತಿಕ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತೊಂದೆಡೆ, ಶುಕ್ರವಾರ ನಡೆದ ಮಹಿಳೆಯರ ಸಾಂಪ್ರದಾಯಿಕ 60 ಕೆಜಿ ಎಂಎಂಎ (MMA) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಸುಚಿಕಾ ತರಿಯಾಲ್, ಮಂಗೋಲಿಯಾದ ಅಲ್ತಾನ್‌ಚಿಮೆಗ್ ಬೈಗಲ್ಮಾ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಅವರು ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಎರಡನೇ ಸುತ್ತಿನಲ್ಲಿ ಎದುರಾಳಿಯ ತೀವ್ರ ಆಕ್ರಮಣವನ್ನು ದಿಟ್ಟವಾಗಿ ಎದುರಿಸಿದ ಸುಚಿಕಾ, ಅಮೋಘ ಕೌಂಟರ್ ಅಟ್ಯಾಕ್ ಮೂಲಕ ಪಂದ್ಯವನ್ನು ತಮ್ಮ ಪರವಾಗಿಸಿಕೊಂಡರು.

Join WhatsApp

Join Now

Join Telegram

Join Now