Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಾ. ಪುನೀತ್ ರಾಜಕುಮಾರ್ ಗೆ ಮರಣೋತ್ತರವಾಗಿ ಬಸವಶ್ರೀ ಪ್ರಶಸ್ತಿ ಪ್ರದಾನ : ಪ್ರಶಸ್ತಿ ಸ್ವೀಕರಿಸಿದ ಅಶ್ವಿನಿ ಪುನೀತ್ ರಾಜಕುಮಾರ್

Facebook
Twitter
Telegram
WhatsApp

ಚಿತ್ರದುರ್ಗ, (ಮೇ. 02):  ಹೆಸರಾಂತ ನಟ ಮತ್ತು ಸಾಂಸ್ಕೃತಿಕ ರಾಯಭಾರಿ ಡಾ. ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ಪ್ರದಾನ ಮಾಡಲಾಯಿತು.

ಪ್ರಶಸ್ತಿಯು ಐದುಲಕ್ಷ ರೂ. ನಗದು ಮತ್ತು ಸ್ಮರಣ ಫಲಕವನ್ನೊಳಗೊಂಡಿದೆ.
ಬಸವ ಜಯಂತಿ ಅಂಗವಾಗಿ ಸರ್ವಶರಣ, ಸಂತ ಮತ್ತು ದಾರ್ಶನಿಕರ ಸ್ಮರಣೆ ಕಾರ್ಯಕ್ರಮದಲ್ಲಿ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಾ. ಶಿವಮೂರ್ತಿ ಮುರುಘಾ ಶರಣರು, ಅಶ್ವಿನಿ ಅವರಿಗೆ ಬಸವಶ್ರೀ ಕೊಡುವುದರ ಮೂಲಕ ಅವರ ಕುಟುಂಬಕ್ಕೆ ಗೌರವ ಸಲ್ಲಿಸಲಾಗುತ್ತಿದೆ.

ಪುನೀತ್ ಅವರು ನಟರಾಗಿ, ನಿರ್ಮಾಪಕರಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ ಮಾನವೀಯ ಕಳಕಳಿಯ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಬಸವಸಂಸ್ಕೃತಿ ಸರ್ವರ ಸಂಸ್ಕೃತಿ. ಅದು ಲಿಂಗಾಯತರಿಗೆ ಮಾತ್ರ ಸಂಬಂಧಿಸಿದ ಸಂಸ್ಕೃತಿಯಲ್ಲ. ಅದು ಎಲ್ಲರೊಳಗೊಳ್ಳುವ ಸಮಗ್ರ ಸಂಸ್ಕೃತಿ ಎಂದು ಹೇಳಿದರು.
ಒಂದೊಂದು ಕಾಲದಲ್ಲಿ ಒಬ್ಬೊಬ್ಬರು ಮಿಂಚಿ ಹೋಗಿದ್ದಾರೆ. ಬಸವಣ್ಣನವರದು ವಿಶಾಲ ಹೃದಯ. ಬಸವಣ್ಣನವರು ಜಾತಿಯ ಉದ್ಧಾರಕರಲ್ಲ. ಅವರು ಮಾನವಕುಲದ ಉದ್ಧಾರಕರು. ಮಾದಾರಚೆನ್ನಯ್ಯ, ಡೋಹರ ಕಕ್ಕಯ್ಯ, ಮೋಳಿಗೆಮಾರಯ್ಯ, ಸಿದ್ಧರಾಮೇಶ್ವರ ಮೊದಲಾದವರು ಕೆಳಸ್ತರದಿಂದ ಬಂದವರನ್ನು ಸಮಾನವಾಗಿ ಮೇಲೆತ್ತಿದರು.

ಜಾತಿರಹಿತ ಸಮಾಜ ರಚನೆಗೆ ಬಲಿದಾನ ಮಾಡಿದವರಲ್ಲಿ ಹರಳಯ್ಯ ಮತ್ತು ಮಧುವಯ್ಯರು, ಅವರ ಮಕ್ಕಳು ಪ್ರಾಣತ್ಯಾಗ ಮಾಡಿದರು. ಆದರ್ಶ ಜೀವನ ಬಯಸಿ ಸಕಲ ಸಾಮ್ರಾಜ್ಯವನ್ನು ತೊರೆದು ಸೇವೆಗಾಗಿ ಬಂದವರು ಮೋಳಿಗೆ ಮಾರಯ್ಯ ದಂಪತಿಗಳು. ಮಾನವ ಹಕ್ಕುಗಳಿಗಾಗಿ ಮನೆಬಿಟ್ಟು ಬಂದ ಧೀರ ಶರಣರೆಂದರೆ ಬಸವಣ್ಣನವರು. ತ್ಯಾಗದ ಮೇಲಿನ ಬದುಕು ಸುಭದ್ರ. ಭೋಗದ ಮೇಲಿನ ಬದುಕು ಅಭದ್ರ ಎಂದು ನುಡಿದರು.

ಹಿರಿಯ ಸಾಹಿತಿ ನಾಟಕಕಾರ ಡಾ. ರಾಜಪ್ಪ ದಳವಾಯಿ ಮಾತನಾಡಿ, ಈ ದೇಶ ಕಂಡ ಮಹಾನ್ ಕಲಾವಿದ. ಹುಟ್ಟತ್ತಲೇ ಕಲಾವಿದರಾಗಿ ಅಭಿನಯಿಸಿ ಜನಮಾನಸವನ್ನು ಆವರಿಸಿಕಂಡವರು ಪುನೀತ್. ನಾಡಿನ ಮಠ ಪರಂಪರೆಯಲ್ಲಿ ಮುರುಘಾಮಠದ್ದು ದೊಡ್ಡ ಕೊಡುಗೆ. ಹಾಗೆಯೇ ಡಾ. ರಾಜ್ ಕುಟುಂಬವು ಸಹ ಚಲನಚಿತ್ರರಂಗಕ್ಕೆ ದೊಡ್ಡ ಕೊಡುಗೆಯಾಗಿದೆ. ನಮ್ಮೆಲ್ಲರ ಆಕಾಶ ಪುನೀತ್. ಅಭಿಮಾನಿಗಳೇ ನನ್ನ ಕಾಲದ ದೇವರು ಎಂದವರು ಪುನೀತ್. ಈ ನಾಡು ಅಭಿಮಾನ ಶೂನ್ಯವಲ್ಲ. ಇನ್ನೊಬ್ಬರ ಕೂಡಿಸಿ ಬದುಕಿದ ಕುಟುಂಬ ಡಾ. ರಾಜ್ ಕುಟುಂಬ ಎಂದು ಹೇಳಿದರು.

ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಅದೆಷ್ಟು ಶಕ್ತಿ ಇದೆ. ಹುಟ್ಟು ಮತ್ತು ಸಾವಿನ ಮಧ್ಯೆ ಅವರು ಸಾಧಿಸಿದ ಸಾಧನೆ ದೊಡ್ಡದು. ಪುನೀತ್ ಅವರ ನಟನೆ ಅಚ್ಚಳಿಯದೆ ನಿಂತಿದೆ. ಇಂದು ಬಸವಶ್ರೀ ಪ್ರಶಸ್ತಿಗೆ ದೊಡ್ಡ ಗೌರವ. ಈ ಕಾರ್ಯಕ್ರಮ ಅರ್ಥಪೂರ್ಣವಾದುದು ಎಂದರು.

ಶಾಸಕ ತಿಪ್ಪಾರೆಡ್ಡಿ ಮಾತನಾಡಿದರು. ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಮನ್ನಿಕೇರಿ, ಜಿ.ಪಂ. ಸಿಇಓ ಡಾ. ನಂದಿನಿದೇವಿ, ಶ್ರೀಮತಿ ಮಂಗಳಾ ರಾಘವೇಂದ್ರ ರಾಜಕುಮಾರ್, ಚಿತ್ಯೋದ್ಯಮಿ ಚಿನ್ನೇಗೌಡರು, ಪಟೇಲ್ ಶಿವಕುಮಾರ್, ಎಸ್ಪಿ ಪರುಶುರಾಂ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ವಾಸು ಮೊದಲಾದವರು ವೇದಿಕೆಯಲ್ಲಿದ್ದರು.

ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಸ್ವಾಗತಿಸಿದರು. ಶ್ರೀಮತಿ ಸುರೇಖಾ ಸುರೇಶ್ ಕರ‍್ಯಕ್ರಮ ನಿರೂಪಿಸಿದರು.

ನಂತರ ನಡೆದ ಸಹಪಂಕ್ತಿ ಭೋಜನದಲ್ಲಿ ವಿವಿಧ ಧರ್ಮಗುರುಗಳು ಭಾಗವಹಿಸಿದ್ದರು.

ಬಸವಶ್ರೀ ಪ್ರಶಸ್ತಿ -2021

ಕನ್ನಡ ಚಲನಚಿತ್ರ ರಂಗದಲ್ಲಿ ‘ಅಪ್ಪು’ ಎಂದೇ ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರರಾಗಿರುವ ನಟ, ಹಿನ್ನೆಲೆಗಾಯಕ, ನಿರ್ಮಾಪಕ, ನಾಡು-ನುಡಿಯ ಸಂರಕ್ಷಕ; ಸಾಂಸ್ಕೃತಿಕ ರಾಯಭಾರಿ; ಕಲೋಪಾಸಕ; ಸಾಮಾಜಿಕ ಸೇವಾಕರ್ತ ಡಾ. ಪುನೀತ್ ರಾಜಕುಮಾರ್‌ರವರು 1975ನೆ ಮಾರ್ಚ್ 17ರಂದು ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಮತ್ತು ಡಾ. ರಾಜಕುಮಾರ್ ದಂಪತಿಗಳಿಗೆ ಐದನೆಯ ಪುತ್ರರಾಗಿ ಜನಿಸಿದರು. ಕಿರಿವಯಸ್ಸಿನಲ್ಲೆ ತನ್ನ ತಂದೆಯ ಜತೆ ವಸಂತಗೀತೆ, ಚಲಿಸುವ ಮೋಡಗಳು, ಎರಡುನಕ್ಷತ್ರಗಳು, ಭಕ್ತಪ್ರಹ್ಲಾದ ಮತ್ತು ಬೆಟ್ಟದ ಹೂವು ಸೇರಿದಂತೆ 10ಕ್ಕು ಹೆಚ್ಚು ಚಿತ್ರಗಳಲ್ಲಿ ತಂದೆಗೆ ಸರಿಸಾಟಿಯೆನಿಸುವಂಥ ಅಭಿನಯದಿಂದ ಚಿತ್ರ ಜಗತ್ತಿಗೆ ಚಿರಪರಿಚಿತರಾದರು.

2002ರಲ್ಲಿ ‘ಅಪ್ಪು’ ಚಿತ್ರದಲ್ಲಿ ನಾಯಕ ನಟರಾಗಿ ಪ್ರಯಾಣ ಆರಂಭಿಸಿ, 31 ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ಅಭಿನಯ ಪ್ರತಿಭೆಯನ್ನು ಮೆರೆದಿದ್ದಾರೆ. ‘ರಾಜಕುಮಾರ’ ಚಿತ್ರದಲ್ಲಿನ ಚಿರಸ್ಮರಣೀಯ ಅಭಿನಯವು ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಹಿನ್ನೆಲೆ ಗಾಯಕರಾಗಿ 29 ಚಲನಚಿತ್ರ ಗೀತೆಗಳಿಗೆ ಧ್ವನಿ ನೀಡಿದ್ದಾರೆ. ಕಿರುತೆರೆಯಲ್ಲಿ ‘ಕನ್ನಡ ಕೋಟ್ಯಾಧಿಪತಿ’ ಮತ್ತು ‘ಫ್ಯಾಮಲಿ ಪವರ್’ ಕರ‍್ಯಕ್ರಮಗಳ ನಿರೂಪಕರಾಗಿ ನಾಡಿನೆಲ್ಲೆಡೆ ಮನೆ ಮಾತಾಗಿದ್ದಾರೆ. ಒಂದೇ ಕುಟುಂಬದಲ್ಲಿ 3-4ಜನ ನಟರು ಎದ್ದುಬಂದಾಗ್ಯು, ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಹೊಂದಾಣಿಕೆ ಮಾಡಿಕೊಂಡು ಕನ್ನಡ ಚಿತ್ಯೋದ್ಯಮದ ತೇರನ್ನು ಸಮರ್ಪಕವಾಗಿ ಎಳೆಯುತ್ತ ಬಂದಿದ್ದಾರೆ. ಇಂಥ ಪ್ರತಿಭಾವಂತರನ್ನು ಪಡೆದ ಕನ್ನಡವೇ ಮಾನ್ಯ; ನಾವೇ ಧನ್ಯ.
ಸಮಾಜಸೇವಾ ಕರ‍್ಯಗಳಿಂದ ಸರ್ವಪ್ರಿಯವಾಗಿದ್ದ ಪುನೀತ್ ಅವರದು ಹಿರಿಮೆ, ಅಹಂಕಾರ, ಲೋಭ, ಐಶ್ವರ್ಯಗಳ ಅವ್ಯಾಹತ ಆಕ್ರಮಣಗಳಿಗೆ ನಿಲುಕದ, ಮಹೋನ್ನತ ಆದರ್ಶ, ಮೌಲ್ಯ, ಧ್ಯೇಯಗಳನ್ನನುಸರಿಸಿದ ವಿನಮ್ರ ವ್ಯಕ್ತಿತ್ವ. ಅವರ ಮುಗ್ಧ, ಗಾಂಭೀರ್ಯ, ಹಸನ್ಮುಖಿಯ ವ್ಯಕ್ತಿತ್ವ ಜನರ ಹೃದಯದಲ್ಲಿ ಹಚ್ಚೊತ್ತಿದೆ. ಶ್ರೀಯುತರ ಕಲಾ ಸಾಧನೆಗೆ ರಾಷ್ಟಿçÃಯ ಅತ್ಯುತ್ತಮ ಬಾಲನಟ, ಫಿಲಂಫೇರ್ ಪ್ರಶಸ್ತಿ, ದಕ್ಷಿಣಭಾರತ ಸಿನೆಮಾ ಪ್ರಶಸ್ತಿ, ಸುವರ್ಣ ಫಿಲಂ ಪ್ರಶಸ್ತಿ, ಕರ್ನಾಟಕ ರತ್ನ ಪುರಸ್ಕಾರಗಳು ಸಂದಿವೆ.

ಕಾಯಕ, ದಾಸೋಹ ಮತ್ತು ಸಮಾನತೆಗೆ ಒತ್ತಾಸೆಯಾಗಿರುವ ಇವರ ಒಟ್ಟು ಜೀವಿತಾವಧಿಯ ಕಾರ್ಯಚಟುವಟಿಕೆಗಳು 12ನೇ ಶತಮಾನದ ಬಸವಾದಿ ಶರಣರ ಚಳವಳಿಯ ಆಶಯಗಳಿಗೆ ಅನುಗುಣವಾಗಿರುವುದನ್ನು ಗುರುತಿಸಿ, ಶ್ರೀ ಮುರುಘಾಮಠ ತನ್ನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಮರಣೊತ್ತರವಾಗಿ ನೀಡಿ ಗೌರವಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದು ಜಾಮೀನು ಸಿಕ್ಕರೂ ರೇವಣ್ಣ ನಾಳೆ ಜೈಲಿಂದ ರಿಲೀಸ್..!

    ಬೆಂಗಳೂರು: ಮಹಿಳೆಯ ಕಿಡ್ನ್ಯಾಪ್ ಕೇಸಿನಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಪರಪ್ಪನ ಅಗ್ರಹಾರ ಸೇರಿದ್ದರು. ಇಂದು ಕಡೆಗೂ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆದರೆ ಜಾಮೀನು ಸಿಕ್ಕಿದರು ಮನೆಗೆ

ಸಿ.ಬಿ.ಎಸ್.ಇ 10ನೇ ತರಗತಿ ಫಲಿತಾಂಶ : ದಿ ಸ್ಟೆಪ್ಪಿಂಗ್ ಸ್ಟೋನ್ಸ್ ಸ್ಕೂಲ್ ಸತತ 7ನೇ ವರ್ಷವೂ ಶೇಕಡ 100 ರಷ್ಟು ಫಲಿತಾಂಶ…!

ಸುದ್ದಿಒನ್, ಚಿತ್ರದುರ್ಗ, ಮೇ. 13 :  ನಗರದ ಪ್ರತಿಷ್ಠಿತ ಶಾಲೆ ದಿ ಸ್ಟೆಪ್ಪಿಂಗ್ ಸ್ಟೋನ್ಸ್ ಸ್ಕೂಲ್ ಸತತ 7ನೇ ವರ್ಷವೂ 2023-24ನೇ ಸಾಲಿನ ಸಿ.ಬಿ.ಎಸ್.ಇ 10ನೇ ತರಗತಿಯ ಫಲಿತಾಂಶದಲ್ಲಿ ಶೇಕಡ 100% ಫಲಿತಾಂಶ ಸಾಧಿಸಿದೆ.

ರೇವಣ್ಣಗೆ ಸಿಕ್ತು ಷರತ್ತು ಬದ್ಧ ಜಾಮೀನು..!

    ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಮಹಿಳೆಯಿಬ್ಬರನ್ನು ಕಿಡ್ನ್ಯಾಪ್ ಮಾಡಿದ್ದ ಪ್ರಕರಣದಲ್ಲಿ ರೇವಣ್ಣ ಅರೆಸ್ಟ್ ಆಗಿದ್ದು, ಇಂದು ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು ಕೋರ್ಟ್ ನಲ್ಲಿ ರೇವಣ್ಣ

error: Content is protected !!