ಚಿತ್ರದುರ್ಗ ಲೋಕಸಭಾ ಚುನಾವಣೆಗೆ ವೀಕ್ಷಕರ ನೇಮಕ : ಜಿಲ್ಲಾಧಿಕಾರಿ ಮಾಹಿತಿ

1 Min Read

 

ಚಿತ್ರದುರ್ಗ : ಮಾರ್ಚ್ 26 : ಭಾರತ ಚುನಾವಣಾ ಆಯೋಗವು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮೂವರು ಹಿರಿಯ ಶ್ರೇಣಿ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ಈ ಚುನಾವಣೆಯ ಸಾಮಾನ್ಯ ವೀಕ್ಷಕರಾಗಿ ಹಿರಿಯ ಐಎಎಸ್ ಅಧಿಕಾರಿ ಮನೋಹರ್ ಮರಾಂಡಿ,  ಚುನಾವಣಾ ವೆಚ್ಚ ವೀಕ್ಷಕರಾಗಿ ಪ್ರಜಕ್ತ ಪಿ.ಠಾಕೂರ್ ಹಾಗೂ  ಕಾನೂನು ಸುವ್ಯವಸ್ಥೆ(ಪೊಲೀಸ್)ಯ ವೀಕ್ಷಕರಾಗಿ ನಜ್ಮಲ್ ಹೊಡ ಅವರನ್ನು  ನೇಮಿಸಿ ಆದೇಶ ಹೊರಡಿಸಿದೆ.

ಈ  ಎಲ್ಲ ವೀಕ್ಷಕರಿಗೆ ಸಹಾಯಕ ಅಧಿಕಾರಿಗಳಾಗಿ
ಸಾಮಾನ್ಯ ವೀಕ್ಷಕರಿಗೆ ಸಹಾಯಕರಾಗಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ ಬಿ.ಕೆ., ಮೊಬೈಲ್ ನಂ. 9591442646,  ವೆಚ್ಚವೀಕ್ಷಕರಿಗೆ ಸಹಾಯಕರಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕಾಂತರಾಜು ಕೆ. ಮೊಬೈಲ್ ನಂ. 9008072602 ಹಾಗೂ ಪೊಲೀಸ್ ವೀಕ್ಷಕರಿಗೆ ಸಹಾಯಕರಾಗಿ ಚಿತ್ರಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಥಮ ದರ್ಜೆ ಸಹಾಯಕ ಚೇತನ್ ಕುಮಾರ್ ಇ.  ಮೊಬೈಲ್ ನಂ.9380554548 ಇವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *