ಬಿಜೆಪಿ ಗೆಲ್ಲುತ್ತಾ ಹೋದಂತೆ, ಕಾಂಗ್ರೆಸ್ ಸೋಲುತ್ತಾ ಹೋಗುತ್ತದೆ : ಅರುಣ್‍ಸಿಂಗ್

 

ವರದಿ ಮತ್ತು ಫೋಟೋ
                       ಸುರೇಶ್ ಪಟ್ಟಣ್,                         
ಮೊ : 87220 22817

ಚಿತ್ರದುರ್ಗ, (ನ.09) ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಠೇವಣಿ ಕಳೆಯುವ ಕೆಲಸ ಪ್ರತಿಯೊಬ್ಬರು ಮಾಡುವ ಮೂಲಕ ಬಿಜೆಪಿಯನ್ನು ಗೆಲ್ಲಿಸಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ಪಕ್ಷ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ನಗರದ ಎಸ್‍ಎಸ್ ಕೆ ಸಮುದಾಯ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಯಲ್ಲಿ ಬೂತ್ ಕಾರ್ಯಕರ್ತರೆ ನಮ್ಮ ನಾಯಕರು, ಮಾಲೀಕರು. ಅವರ ಆಧಾರದ ಮೇಲೆ ನಮ್ಮ ಸಂಘಟನೆ ಬಲಿಷ್ಟವಾಗಿದೆ. ದೇಶದಲ್ಲಿ ಎಲ್ಲೆಲ್ಲಿ ಚುನಾವಣೆ ನಡೆದಿದೆಯೋ ಅಲ್ಲಿ ಬಿಜೆಪಿ ಜಯಗಳಿಸುತ್ತಾ ಮುನ್ನುಗ್ಗುತ್ತಿದೆ. ಉಪ ಚುನಾವಣೆಗಳಲ್ಲೂ ಕಾಂಗ್ರೆಸ್ ಗೆದ್ದಿಲ್ಲ. ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ತಿಂಗಳು ಸಮಯ ಕಾಯಿರಿ, ಗುಜರಾತ್ ನಲ್ಲಿ ಬಿಜೆಪಿ ಗೆದ್ದು ದಾಖಲೆ ಬರೆಯಲಿದೆ. ಅದೇ ರೀತಿ ಮುಂದೆ ಕರ್ನಾಟಕದಲ್ಲೂ ಕೂಡ ಬಿಜೆಪಿ ಗೆದ್ದು ದಾಖಲೆ ಬರೆಯಲಿದೆ. ಬಿಜೆಪಿ ಗೆಲ್ಲುತ್ತಾ ಹೋದಂತೆ, ಕಾಂಗ್ರೆಸ್ ಸೋಲುತ್ತಾ ನೆಲ ಕಚ್ವುತ್ತಿದೆ ಎಂದರು.

ಹಿಂದೂ, ಹಿಂದುತ್ವಕ್ಕೆ ಅಪಮಾನ ಮಾಡುವುದೆ ಕಾಂಗ್ರೇಸ್ ಕೆಲಸವಾಗಿದೆ. ಕಾಂಗ್ರೇಸ್ ಅಧ್ಯಕ್ಷರೆ ಹೇಳಿ, ಸತೀಶ್ ಜಾರಕೀಹೊಳಿ ಅವರ ಹೇಳಿಕೆ ಸರಿಯೇ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಇತಿಹಾಸ ಬಗ್ಗೆ ತಿಳಿದು ಕೊಳ್ಳಬೇಕಿದೆ. ಕಾಂಗ್ರೇಸ್ ದೇಶದ ಸಂಸ್ಕೃತಿಯನ್ನು ಆಳು ಮಾಡಿದರೆ, ಮೋದಿ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಬಡವರಿಗೆ ಏನು ಮಾಡಿಕೊಟ್ಟಿಲ್ಲ. ಕಿಸಾನ್ ಸಮ್ಮನ್ ನಲ್ಲಿ ಪ್ರತಿ ರೈತರಿಗೆ 3 ಲಕ್ಷ ಹಣ ನೀಡಲಾಗುತ್ತಿದೆ. ಇದನ್ನು ಕಾಂಗ್ರೇಸ್ ಗೆ ಕೇಳಿ 1 ರೂ ಯಾವತ್ತಾದ್ರೂ ಹಣ ಕೊಟ್ಟಿದ್ದಿರಾ ಎಂದು ಸವಾಲು ಹಾಕಿದ ಅವರು, ಎಲ್ಲಾ ದೇಶಗಳಲ್ಲಿ ಆರ್ಥಿಕ ವ್ಯವಸ್ಥೆ ಕೆಳಗೆ ಬಿದ್ದಿದೆ. ಆದರೆ ಭಾರತದಲ್ಲಿ ಮಾತ್ರ ಏರಿಕೆ ಆಗುತ್ತಿದೆ. ಇದಕ್ಕೆ ಮೋದಿ ಅಂತಹ ನಾಯಕನಿಂದ ಮಾತ್ರ ಸಾಧ್ಯವಾಗಿದೆ ಎಂದರು.

ಚಿತ್ರದುರ್ಗದಲ್ಲಿ ಮನೆಗಳ ಹಕ್ಕುಪತ್ರ ನೀಡುವಾಗ ಜನರಲ್ಲಿನ ನಗು ನಮಗೆ ಸಂತಸವನ್ನು ತಂದಿತು. ಆಗ ಅವರೇ ಹೇಳಿದರು ಕಾಂಗ್ರೇಸ್ 60 ವರ್ಷ ಆಳ್ವಿಕೆ ಮಾಡಿಯೂ ನೀಡಲಿಲ್ಲ. ನೀವು ನೀಡಿದ್ದಿರಾ ಎಂದು ಪ್ರಶ್ನಿಸಿ ಎಂದು ಹೇಳಿದರು.

ಜಿಲ್ಲೆಯಲ್ಲೇ ಸಿಸಿ ರಸ್ತೆ ಪೂರ್ಣ ಮಾಡಿರುವ ತಾಲ್ಲೂಕು ಚಿತ್ರದುರ್ಗ. ಚಿತ್ರದುರ್ಗದಲ್ಲಿ ಕಾರ್ಯಕ್ರಮ ಎಂದಾಗ ನಾನು  ಚಿತ್ರದುರ್ಗ ಯಾಕೆ ಕಾರ್ಯಕ್ರಮ ಆಯೋಜನೆ ಮಾಡಿದ್ದಿರಾ ? ಅಲ್ಲಿ ತಿಪ್ಪಾರೆಡ್ಡಿ ಅವರು ಇದ್ದು, ಬಿಜೆಪಿ ಪೂರ್ಣವಾಗಿ ಬಲಿಷ್ಟವಾಗಿದೆ. ಹಿಂದಿಗಿಂತಲೂ ಈ ಭಾರೀ ಅತೀ ಹೆಚ್ಚು ಮತಗಳಿಂದ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದೆ ಎಂದರು.

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಮಾತನಾಡಿ, ನಗರದ ಬಹುತೇಕ ಎಲ್ಲಾ ಕಡೆ ರಸ್ತೆಗಳನ್ನು ಸಿಸಿ ರಸ್ತೆ ಮಾಡಿದ್ದು, 10% ಮಾತ್ರ ಬಾಕಿ ಇದೆ. ಅದನ್ನೂ ಕೂಡ ಬೇಗ ಕಾಮಗಾರಿ ಮಾಡಲಾಗುವುದು. ನಗರದಲ್ಲೇ 12 ಸಾವಿರ ಕುಟುಂಬಗಳಿಗೆ ಮನೆಗಳೆ ಇಲ್ಲ. ಅವರಲ್ಲಿ 3 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ಕೊಡುತ್ತಿದ್ದೆನೆ. ಅಮೃತ ಯೋಜನೆಯಡಿ ಪ್ರತಿ ಮನೆಗೆ ನೀರು ಕೊಡುವ ವ್ಯವಸ್ಥೆ ಮಾಡಲಾಗಿದೆ. ಮನೆಗಳಿಗೆ ಗ್ಯಾಸ್ ಪೈಪ್ ಲೈನ್ ಸಂಪರ್ಕ ಕಲ್ಪಿಸಲಾಗುತ್ತಿದೆ. ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲಿ ಸಾಕಷ್ಟು ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆನೆ ಎಂದರು.

ಮೆಡಿಕಲ್ ಕಾಲೇಜು ಟೆಂಡರ್ ಮುಗಿದಿದ್ದು, ಮುಂದಿನ ತಿಂಗಳು ಶಂಕುಸ್ಥಾಪನೆ ಮಾಡುತ್ತೇವೆ. ನೀಡಿದ ಮಾತಿನಂತೆ ನಾವು ನಡೆದುಕೊಂಡು ಜನರ ಕೆಲಾಸಗಳನ್ನು ಮಾಡಿದ್ದೆವೆ. ನಮಗೆ ದೇಶ ಮುಖ್ಯ. ಅಧಿಕಾರ ಮುಖ್ಯ ಅಲ್ಲ ಎಂದು ಹೇಳುವ ಪಕ್ಷದಲ್ಲಿ ಸದಸ್ಯರಾಗಿರುವುದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದರೆ. ಕಳೆದ ಭಾರಿಗಿಂತ ಇಂದು ಕನಿಷ್ಟ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸುತ್ತೇವೆ. ಅಲ್ಲದೆ ಜಿಲ್ಲೆಯ 6 ಕ್ಷೇತ್ರಗಳನ್ನು ಗೆಲ್ಲಲು ಚಿತ್ರದುರ್ಗ ಸ್ಪೂರ್ತಿ ಆಗಲಿದೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಮಾತನಾಡಿ, ಹಿಂದೂ ಎಂಬುದು ಒಂದು ಧರಿದ್ರ ಪದ ಎಂದಿರುವ ಸತೀಶ್ ಅವರದು ಸಿದ್ದರಾಮಯ್ಯ ಅವರ ಸಂತತಿ.  ಸಿದ್ದರಾಮಯ್ಯ ಅವರದು ಟಿಪ್ಪು ಸಂತತಿ. ಆದ್ದರಿಂದಲೇ ಅವರು ಈ ರೀತಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದು ರಾಮಾಯಣ ಬರೆದಿರುವಂತಹ ವಾಲ್ಮಿಕಿ ಮಹರ್ಷಿ ಅವರಿಗೆ ಮಾಡಿರುವ ಅಪಮಾನ. ಇದನ್ನು ಜನರ ಮುಂದಿಟ್ಟು ಅವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಗಣಿ ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್, ಚಾಲುಕ್ಯ ನವೀನ್ ಸೇರಿದಂತೆ ಇತರರು ಹಾಜರಿದ್ದರು. ಜಯಪಾಲಯ್ಯ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಚಿತ್ರದುರ್ಗ ತಾಲ್ಲೂಕು ಪಂಚಾಯಿತಿಯ ಮಾಜಿ ಆಧ್ಯಕ್ಷರಾದ ವೇಣುಗೋಪಾಲ್ ರೆಡಿ ಮತ್ತು ಬೆಂಬಲಿಗರು ಕಾಂಗ್ರೇಸ್ ಪಕ್ಷವನ್ನು ತೋರೆದು ಬಿಜೆಪಿಯನ್ನು ಸೇರಿದರು ಅರುಣ್ ಸಿಂಗ್ ಪಕ್ಷದ ಶಾಲನ್ನು ಹಾಕುವುದರ ಮೂಲಕ ಬರ ಮಾಡಿಕೊಂಡರು.

Leave a Reply

Your email address will not be published. Required fields are marked *

error: Content is protected !!