ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 16 : ನಗರದ ಜಗಳೂರು ಮಹಾಲಿಂಗಪ್ಪ ಟವರ್ಸ್ ನಲ್ಲಿ ಚಿತ್ರದುರ್ಗ ಜಿಲ್ಲಾ ಖಾಸಗಿ ದಂತ ವೈದ್ಯರ ಸಂಘದ (ರಿ.) ವತಿಯಿಂದ cde ಅಂದರೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಖಾಸಗಿ ದಂತ ವೈದ್ಯರಿಗೆ ಒಂದು ವಿಶೇಷ ಕಾರ್ಯಕ್ರಮ ಹಾಗೂ ವಸಡು ಚಿಕಿತ್ಸೆ ಹಾಗೂ ಕೃತಕ ಹಲ್ಲಿನ ಕೆಲಸ ನಿರ್ವಹಿಸುವ ಇಂಪ್ಲಾಂಟ್ ದೃಢತೆಯಲ್ಲಿ ವಸಡುಗಳ ಪಾತ್ರದ ಕುರಿತು ನಿನ್ನೆ (ಮಾರ್ಚ್. 15 ) ರಂದು ಒಂದು ದಿನದ ವಿಶೇಷ ಕಾರ್ಯಗಾರ ನಡೆಯಿತು.
ಈ ಕಾರ್ಯಕ್ರಮವನ್ನು ಖ್ಯಾತ ವಸಡು ರೋಗ ತಜ್ಞರು ಹಾಗೂ ಕಳೆದ 30 ವರ್ಷಗಳಿಂದ ವಿಶೇಷ ಅನುಭವ ಪಡೆದ ಡಾ.ವಾದಿರಾಜ ಇವರು ನಡೆಸಿಕೊಟ್ಟರು. ಅವರು ವಸಡು ರೋಗ, ಹಲ್ಲಿನ ಆರೋಗ್ಯ,ಉಳಿಸುವ ಹಾಗೂ ಅದರ ಪರ್ಯಾಯವಾಗಿ ಇಂಪ್ಲಾಂಟ್ ಚಿಕಿತ್ಸೆಗಳಲ್ಲಿ ಆಗುತ್ತಿರುವ ನೂತನ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದರು.

ಸಂಘದ ಕಾರ್ಯದರ್ಶಿ ಡಾ. ಸುನಿಲ್ ರವರು ಮಾತನಾಡಿ ಪ್ರತಿ ತಿಂಗಳು ದಂತವೈದ್ಯರಿಗೆ ಬೇರೆ ಬೇರೆ ಊರುಗಳಿಂದ ಖ್ಯಾತ ಹಿರಿಯ ದಂತ ವೈದ್ಯರನ್ನು ಕರೆಸಿ ಚಿತ್ರದುರ್ಗದಲ್ಲಿ ಅವರಿಂದ ವಿಶೇಷ ಉಪನ್ಯಾಸ ಹಾಗೂ ತರಬೇತಿಗಳನ್ನು ನಡೆಸಲಾಗುತ್ತಿದೆ. ಬದಲಾಗುತ್ತಿರುವ ಜಾಗತಿಕ ಸವಾಲುಗಳು ಹಾಗೂ ದಂತ ವೈದ್ಯಕೀಯದಲ್ಲಿ ಆಗುತ್ತಿರುವ ಆವಿಷ್ಕಾರಗಳು ಹಾಗೂ ಅನ್ವೇಷಣಾಗಳಾದ AI ಕೃತಕ ಬುದ್ಧಿಮತ್ತೆ ಹಾಗೂ ರೋಬೋಟಿಕ್ ಚಿಕಿತ್ಸೆಗಳ ಬಗ್ಗೆ ಮುಂದಿನ ದಿನಗಳಲ್ಲಿ ತರಬೇತಿ ಕೊಡುವ ಬಗ್ಗೆ ತಿಳಿಸಿದರು.
ಜಿಲ್ಲೆಯಲ್ಲಿ 10-12 ವರ್ಷಗಳ ಹಿಂದೆ ದಂತ ವೈದ್ಯಕೀಯ ಚಿಕಿತ್ಸೆ ಪಡೆಯಲು ಅಕ್ಕಪಕ್ಕದ ಜಿಲ್ಲೆ ಊರುಗಳಿಗೆ ಸ್ಥಳೀಯ ಜನರು ಹೋಗಬೇಕಾಗಿತ್ತು. ಆದರೆ ಸ್ಥಳೀಯ ದಂತ ವೈದ್ಯರನ್ನು ನೂತನ ಸವಾಲುಗಳಿಗೆ ತರಬೇತಿ ಮೂಲಕ ನೂತನ ಚಿಕಿತ್ಸಾ ಪದ್ಧತಿ ಗಳನ್ನು ಚಿತ್ರದುರ್ಗದಲ್ಲಿಯೇ ದೊರಕುವಂತೆ ಮಾಡಲಾಗುತ್ತಿತ್ತು. ಇಲ್ಲಿನ ಜನರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಂಜೆ ಐದಕ್ಕೆ ಪ್ರಾರಂಭವಾಗಿ 7ರ ತನಕ ವಿಶೇಷ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ನಡೆಯಿತು. ವಸಡು ರೋಗ ಹಾಗೂ ಇಂಪ್ಲಾಂಟ್ ಚಿಕಿತ್ಸೆ ಕುರಿತು ಡಾ.ವಾದಿರಾಜ ಹೊಸಪೇಟೆ ರವರು ಉಪನ್ಯಾಸ ನೀಡಿದರು. ಚಿತ್ರದುರ್ಗ ಜಿಲ್ಲಾ ದಂತ ವೈದ್ಯರ ಸಂಘದಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ 25 ದಂತವೈದ್ಯರು ಭಾಗವಹಿಸಿ ತರಬೇತಿ ಪಡೆದರು.
ಇದೇ ವೇಳೆ ಸಂಘದ ನಡಾವಳಿಕೆ ಹಾಗೂ ಮುಂದಿನ ಕಾರ್ಯ ರೂಪುರೇಷೆಗಳನ್ನು ಚರ್ಚಿಸಿ ಅನುಮೋದಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷರಾದ ಡಾ.ರಾಮಲಿಂಗ ಶೆಟ್ಟಿ ಹಾಗೂ ಖಜಾಂಚಿಗಳಾದ ಡಾ. ಗೋವರ್ಧನ್ ರವರು ಉಪಸ್ಥಿತರಿದ್ದರು.








ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್