Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿಸಿಬಿ ಪೊಲೀಸರಿಂದ ಅರೆಸ್ಟ್: ವಿಚಾರಣೆ ಬಳಿಕ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್

---Advertisement---

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಲಂಚದ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣರನ್ನ ಸಿಸಿಬಿ ಪೊಲೀಸರು ನಿನ್ನೆ ಅರೆಸ್ಟ್ ಮಾಡಿದ್ದರು. ವಿಚಾರಣೆಯ ಬಳಿಕ ಈ ಬಗ್ಗೆ ಸ್ನೇಹಮಯಿ ಕೃಷ್ಣ ಮಾತನ್ನಾಡಿದ್ದಾರೆ. ನನ್ನನ್ನ ಅರೆಸ್ಟ್ ಮಾಡಿರಲಿಲ್ಲ. ಕೇವಲ ವಿಚಾರಣೆಗಾಗಿ ಕರೆಯಲಾಗಿತ್ತು ಅಷ್ಟೇ ಎಂದಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತರಾದ ನಟೇಶ್ ಅವರು ನನ್ನ ವಿರುದ್ಧ ಒಂದು ಸುಳ್ಳು ದೂರನ್ನ ಕೊಟ್ಟಿದ್ದರು. ಅಂದ್ರೆ ನಾನು ಆಡಿಯೋವನ್ನ, ಸುಳ್ಳು ಸೃಷ್ಟಿ ಮಾಡಿ ನನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದೀನಿ, ಶಾಲಿನಿ ರಜನೀಶ್ ಅವರ ವಿರುದ್ಧ ಸುಳ್ಳು ಆರೋಪ ಮಾಡಿದ್ದೀನಿ ಅಂತ ದೂರು ನೀಡಿದ್ದರು. ಆ ದೂರಿಗೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ನಿನ್ನೆ ಕರೆದುಕೊಂಡು ಬಂದಿದ್ದರು ಹೊರತು, ಯಾವುದೇ ರೀತಿಯ ಅರೆಸ್ಟ್ ಅಲ್ಲ ಅದು.

ವಿಚಾರಣೆ ಮಾಡುವಾಗ ಮೊಬೈಲ್ ಕೂಡ ತಪಾಸಣೆ ಮಾಡಿದರು‌. ನಾನು ಯಾವುದೇ ಆಡಿಯೋಗಳನ್ನ ಸೃಷ್ಟಿ ಮಾಡಿಲ್ಲ. ನನಗೆ ವಾಟ್ಸಾಪ್ ಮುಖಾಂತರ ಬಂದಿದೆ ಅನ್ನೋದು ಗೊತ್ತಾಯ್ತು. ವಿನೋದ್ ಮಾಹಿತಿ ಕೊಟ್ಟಿದ್ದರಲ್ಲ ಅವರನ್ನು ಕರೆದುಕೊಂಡು ಬಂದು, ನನ್ನ ಮುಂದೆ ವಿಚಾರಣೆ ಮಾಡಿದರು. ನಟೇಶ್ ಮಾಡಿರುವಂತ ಆಡಿಯೋ ಆರೋಪ, ಲೋಕಾಯುಕ್ತಕ್ಕೆ ಹಣಕಾಸು ಕೊಟ್ಟಿರುವ ಬಗ್ಗೆ ಕೊಟ್ಟಿರುವ ದಾಖಲಾತಿಗಳು ಅದು ನಿಜ ಅಂದುಕೊಂಡು ಬಿಟ್ಟಿದ್ದರು. ನಟೇಶ್ ಹಾಗೂ ವಿನೋದ್ ನಡುವೆ ಹಣಕಾಸು ವಿಚಾರ ನಡೆದಿತ್ತು. ನಟೇಶ್ ದುಡ್ಡು ಕೇಳಬಾರದು ಅಂತ ಈ ರೀತಿ ಮಾಡಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...