ರಾಜ್ಯದ ಅಡಿಕೆ ಬೆಳೆಗಾರರು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ದಿನೇ ದಿನೇ ಅಡಿಕೆಯ ಬೆಲೆ ಏರಿಕೆಯಾಗುತ್ತಲೆ ಇದೆ. ಮುಂದೆ ಸುಮಾರು 65 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಇದು ಬೆಳೆಗಾರರಿಗೆ ಹೆಚ್ಚು ಸಂತಸವಾಗಿದೆ. ಸದ್ಯ ಅಡಿಕೆಧಾರಣೆ ಇಂದು ಎಷ್ಟಿದೆ ಎಂಬುದನ್ನು ನೋಡೋಣಾ.
ಇಳಿಕೆಯತ್ತ ಸಾಗಿದ್ದ ಅಡಿಕೆ ದರ ಕಳೆದ ಕೆಲವು ದಿನಗಳಿಂದ ಏರಿಕೆಯತ್ತ ಮುಖ ಮಾಡಿದೆ. ಇಂದಿನ ಮಾರುಕಟ್ಟೆಯಲ್ಲಿ 57,500 ರೂಪಾಯಿಗೆ ಕ್ವಿಂಟಾಲ್ ಅಡಿಕೆ ಮಾರಾಟವಾಗಿದೆ. ಚನ್ನಗಿರಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 57,500 ರೂಪಾಯಿ, ಕನಿಷ್ಠ ದರ 53,679 ರೂಪಾಯಿ ಇದ್ದು, ಸರಾಸರಿ ಬೆಲೆ 56,368 ರೂಪಾಯಿ ಇದೆ. ಕಳೆದ ಕೆಲ ದಿನಗಳ ಹಿಂದೆ 55,000 ರೂಪಾಯಿಗಿಂತ ಕೆಳಗಿಳಿದಿತ್ತು.
ಇಂದಿನ ಮಾರುಕಟ್ಟೆಯ ಬೆಲೆಯನ್ನು ಕಂಡು ಬೆಳೆಗಾರರು ಖುಷಿಯಾಗಿದ್ದಾರೆ. ಚನ್ನಗಿರಿ, ದಾವಣಗೆರೆ, ಹೊನ್ನಾಳಿ ಭಾಗದಲ್ಲಿ ಅಡಿಕೆ ಬೆಳೆಯುವವರು ಹೆಚ್ಚಾಗಿದ್ದಾರೆ. ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆ 50,109 ರೂಪಾಯಿ ಇದೆ. ರಾಶಿ ಅಡಿಕೆ ₹45,009 ಇದೆ. ಗೊರಬಲು ₹17,890 ಇದೆ. ಹಾಗೇ ಸಾಗರದ ರಾಶಿ ಅಡಿಕೆಗೆ ₹48,959 ಇದ್ದರೆ, ಚಾಲಿ ₹34,369 ಇದೆ. ಸಿಪ್ಪೆಗೋಟು ₹16,899, ಬಿಳೆಗೋಟು ಅಡಿಕೆ ₹27,299. ಇನ್ನು ಇವತ್ತಿನ ಕೊಬ್ಬರಿ ಬೆಲೆಯನ್ನು ನೋಡುವಿದಾದರೆ ದಾವಣಗೆರೆಯಲ್ಲಿ ₹18,500 ರೂಪಾಯಿ ಆಗಿದೆ. ಮೊದಲೆ ಅಡಿಕೆ ಹಾಗೂ ತೆಂಗಿನ ಬೆಳೆಯನ್ನು ಕಾಪಾಡಿಕೊಳ್ಳುವುದೇ ರೈತರಿಗೆ ದೊಡ್ಡ ಸಮಸ್ಯೆ. ರೋಗಗಳಿಂದೆಲ್ಲಾ ಅವುಗಳನ್ನು ಕಾಪಾಡಿಕೊಂಡು, ಫಸಲು ಉತ್ತಮವಾಗಿ ಬರುವಂತೆ ನೋಡಿಕೊಳ್ಳಬೇಕಿರುತ್ತದೆ. ಆ ಎಲ್ಲಾ ಸವಾಲನ್ನು ಗೆದ್ದು ಉತ್ತಮ ಬೆಳೆ ಬಂದಾಗ ಉತ್ತಮ ಬೆಲೆ ಬರದೆ ಹೋದಾಗ ರೈತರಿಗೆ ಎಷ್ಟು ನೋವಾಗಬೇಡ. ಆದರೆ ಈ ಬಾರಿ ಖುಷಿಯಾಗಿದ್ದಾರೆ.



