ಕೆಲವೊಬ್ಬರಿಗೆ ಕೆಮ್ಮು ಸಿಕ್ಕಾಪಟ್ಟೆ ಹಿಂಸೆ ಕೊಡುತ್ತದೆ. ಎಷ್ಟೆ ಔಷಧ ತೆಗೆದುಕೊಂಡರೂ ಅದಕ್ಕೆ ಪರಿಹಾರ ಸಿಗುವುದಿಲ್ಲ. ಕೆಮ್ಮು ಹೆಚ್ಚಾದರೆ ಈ ಮನೆಮದ್ದುಗಳನ್ನು ಬಳಸಿ ನೋಡಿ.
* ಕೆಮ್ಮು ಮತ್ತು ನೆಗಡಿ ಇದ್ದಾಗ ಒಂದು ಬಟ್ಟಲು ಹಾಲಿಗೆ ಒಂದು ಟೀ ಸ್ಪೂನಿನಷ್ಟು ಅರಿಶಿನ ಪುಡಿ ಹಾಗೂ ಕರಿಮೆಣಸಿನ ಪುಡಿ ಸೇರಿಸಿ, ಕುದಿಸಿ ದಿನವೂ ಒಂದೆರಡು ಬಾರಿ ಕುಡಿಯುತ್ತಿದ್ದರೆ ಕೆಲವೇ ದಿನದಲ್ಲಿ ಕೆಮ್ಮು ನಿಂತುಹೋಗುವುದು.
* ಜೇನುತುಪ್ಪಕ್ಕೆ ಮೂಲಂಗಿ ರಸವನ್ನು ಸಮತೂಕದಲ್ಲಿ ಸೇರಿಸಿ, ಒಂದು ಟೀ ಸ್ಪೂನಿನಷ್ಟು ದಿನವೂ ಮೂರು ಬಾರಿ ಸೇವಿಸುತ್ತಿದ್ದರೆ ಕೆಮ್ಮು ಕಡಿಮೆ ಆಗುವುದು.
* ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಶೀತದ ಕೆಮ್ಮು ನಿವಾರಣೆ ಆಗುವುದು.
*ದಿನಕ್ಕೊಂದು ಸೇಬನ್ನು ವಾರದವರೆಗೆ ತಿನ್ನುತ್ತಿದ್ದರೆ ಒಣ ನಿಂತು ಹೋಗುವುದು.
* ಮಜ್ಜಿಗೆ ಅನ್ನಕ್ಕೆ ಹಸಿ ಈರುಳ್ಳಿ ನೆಂಜಿಕೊಂಡು ತಿನ್ನುತ್ತಿದ್ದರೆ ಉಷ್ಣದ ಕೆಮ ನಿಲ್ಲುವುದು.
* ಶ್ರೀಗಂಧದ ಚೂರ್ಣವನ್ನು ಜೇನುತುಪ್ಪದೊಂದಿಗೆ ಬೆರೆಸಿ ದಿನವೂ ನಾಲೈದು ಬಾರಿ ಮಗುವಿನ ನಾಲಿಗೆಯ ಮೇಲೆ ಲೇಪಿಸುತ್ತಿದ್ದರೆ ನಾಯಿ ಕೆಮ್ಮು ನಿಂತು ಹೋಗುವುದು.
* ಲವಂಗವನ್ನು ಉಪ್ಪಿನ ಹರಳಿನೊಂದಿಗೆ ಚಪ್ಪರಿಸುತ್ತಿದ್ದರೆ ದೀರ್ಘ ಕಾಲದ ಕೆಮ್ಮು ಕಡಿಮೆ ಆಗುತ್ತಾ ಹೋಗುವುದು.
* ಮಕ್ಕಳಿಗೆ ಕೆಮ್ಮು ಬಂದಾಗ ಒಂದು ಟೀ ಸ್ಪೂನಿನಷ್ಟು ಕತ್ತೆಯ ಹಾಲಿಗೆ ಸಕ್ಕರೆ ಬೆರೆಸದೇ ಕುಡಿಸಿದರೆ ಕೆಮ್ಮು ನಿಲ್ಲುವುದು.
* ಬಿಸಿ ಮಾಡಿದ ಹುರಿಗಡಲೆಯನ್ನು ಆಗಾಗ ಮೂಸಿ ನೋಡುವುದರಿಂದಲೂ ಕೆಮ್ಮು ನಿಲ್ಲುವುದು ಈ ರೀತಿ ಮನೆ ಮದ್ದುಗಳನ್ನು ಮಾಡುವುದರಿಂದ ಕೆಮ್ಮು ಬೇಗನೆ ವಾಸಿಯಾಗುತ್ತದೆ. ಮಾತ್ರೆ, ಟಾನಿಕ್ ತೆಗೆದುಕೊಳ್ಳುವುದಕ್ಕಿಂತ ಈ ರೀತಿಯ ಮನೆ ಮದ್ದುಗಳು ತುಂಬಾ ಉತ್ತಮ. ಮತ್ತೆ ಬೇಗನೇ ಅನಾರೋಗ್ಯ ಕಾಡುವುದಿಲ್ಲ. ಈ ಮನೆ ಮದ್ದುಗಳು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.






