Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅರಸು ಅವರ ದಾಖಲೆ ಬ್ರೇಕ್ : ಖುಷಿಯಲ್ಲಿ ಹೇಳಿದ್ದೇನು ಸಿದ್ದರಾಮಯ್ಯ..?

---Advertisement---

ಬೆಂಗಳೂರು: ಬಹಳ ಕಾಲದಿಂದಾನೂ ಕಾಯ್ತಾ ಇದ್ದಂತ ದಿನ ಇಂದು ಬಂದೇ ಬಿಟ್ಟಿದೆ. ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಎಂಎಲ್ಎ ಆಗ್ಬೇಕು ಅಂದ್ರೇನೆ ಜನರ ಆಶೀರ್ವಾದ ಸ್ಟ್ರಾಂಗ್ ಆಗಿರ್ಬೇಕು. ಇನ್ನು ಸಿಎಂ ಆಗ್ಬೇಕು ಅಂದ್ರೆ ಜನರ ಆಶೀರ್ವಾದದ ಜೊತೆಗೆ ಹೈಕಮಾಂಡ್, ಪಾರ್ಟಿ ನಾಯಕರೆಲ್ಲಾ ಒಟ್ಟಾಗಬೇಕು. ಸಿಎಂ ಆಗುವುದು ಅಷ್ಟು ಸುಲಭದ ಟಾಸ್ಕ್ ಕೂಡ ಅಲ್ಲ. ಆದ್ಮೇಲೆ ಮುಖ್ಯಮಂತ್ರಿ ಸ್ಥಾನವನ್ನ ಭದ್ರ ಪಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಇದೀಗ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಲ್ಲದೆ, ಹೊಸ ದಾಖಲೆಯನ್ನು ಬರೆದಿದ್ದಾರೆ ಸಿದ್ದರಾಮಯ್ಯ ಅವರು.

ಈ ದಾಖಲೆಯ ಬಗ್ಗೆ ಮಾತನ್ನಾಡಿದ್ದಾರೆ. ನಂಗೆ ಗೊತ್ತೆ ಇಲ್ಲ. ಬಹಳ ಹೆಚ್ಚು ಅಂದ್ರೆ ಎಂಎಲ್ಎ ಆಗ್ಬೇಕು ಅಂದ್ಕೊಂಡಿದ್ದೆ. ಅವಕಾಶ ಸಿಕ್ತು ಇಲ್ಲಿವರೆಗೂ ಬಂದೆ. ಅವರು ಮೈಸೂರು ನಾನು ಮೈಸೂರು. ಆದರೆ ಕಾಲಘಟ್ಟ ಬೇರೆ ಬೇರೆ. ಅವರಿದ್ದದ್ದು 72 ರಿಂದ 80ರವರೆಗೂ ಇದ್ದರು. ನಾನು ಎರಡು ಟರ್ಮ್ ಇದ್ದೀನಿ. ಮುಂದೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ನೋಡೋಣಾ.

ಸಮಾಜದಲ್ಲಿ ಇನ್ನು ಅಸಮಾನತೆ ಇದೆ. ಅಸಮಾನತೆ ಹೋಗುವವರೆಗೂ, ನ್ಯಾಯ ಸಿಗುವ ತನಕ ಹೋರಾಟ ಮಾಡ್ತಾ ಇರ್ತೀನಿ. ನಾನು ಯಾವುದೋ ದಾಖಲೆಗಳನ್ನ ಮುರಿಬೇಕು ಅಂತ ರಾಜಕೀಯ ಮಾಡಲಿಲ್ಲ. ಇವತ್ತು ದೇವರಾಜ್ ಅರಸು ಅವರ, ಜನರ ಆಶೀರ್ವಾದದಿಂದ ಅದನ್ನ ಮುರಿಯುವಂತ, ಸಮ ಮಾಡುವಂತ ಅವಕಾಶ ಸಿಕ್ಕಿದೆ. ನಾಳೆಗೆ ಬ್ರೇಕ್ ಆಗುತ್ತೆ. ಹೈಕಮಾಂಡ್ ಯಾವಾಗ ತೀರ್ಮಾನ ಮಾಡುತ್ತೆ ಅನ್ನೋದು ಗೊತ್ತಿಲ್ಲ. ಹೈಕಮಾಂಡ್ ಮೇಲೆ ವಿಶ್ವಾಸವಿದೆ. ವಿಶ್ವಾಸ ಇಲ್ಲದೆ ಸಿಎಂ ಆಗುವುದಕ್ಕೆ ಸಾಧ್ಯವಾ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now