ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಬೆಂಗಳೂರು: ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 51ನೇ ಹುಟ್ಟುಹಬ್ಬ. ಹೀಗಾಗಿ ಅಪ್ಪು ಸ್ಮಾರಕ ಹೂಗಳ ಅಲಂಕಾರದಿಂದ ಕಂಗೊಳಿಸ್ತಾ ಇತ್ತು. ದೂರದೂರಿನಿಂದೆಲ್ಲಾ ಅಭಿಮಾನಿಗಳು ಬಂದು ಅಪ್ಪು ಸಮಾಧಿಗೆ ನಮಸ್ಕರಿಸಿ ಹೋಗುತ್ತಿದ್ದಾರೆ. ಗುಲಾಬಿ ಹೂಗಳನ್ನ ಹಿಡಿದು, ಅಪ್ಪು ಫೋಟೋಗಳ ಜೊತೆಗೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದಾರೆ.
ಅಪ್ಪು 51ನೇ ಹುಟ್ಟುಹಬ್ಬದ ಪ್ರಯುಕ್ತ ಕುಟುಂಬ ಸದಸ್ಯರು ಸ್ಮಾರಕದ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ. ಬೆಳಗ್ಗೆಯೇ ರಾಘವೇಂದ್ರ ರಾಜ್‍ಕುಮಾರ್, ಪತ್ನಿ ಮಂಗಳಾ, ಯುವ ರಾಜ್‍ಕುಮಾರ್, ವಿನಯ್ ರಾಜ್‍ಕುಮಾರ್ ಬಂದು ಪೂಜೆ ಸಲ್ಲಿಸಿದ್ದಾರೆ. ಹಾಗೇ ಅಪ್ಪು ದೊಡ್ಡ ಅಕ್ಕ ಲಕ್ಷ್ಮೀ ಅವರು ಪತಿ ಗೋವಿಂದ ರಾಜು ಅವರ ಜೊತೆಗೆ ಬಂದು ಪೂಜೆ ಸಲ್ಲಿಸಿ, ತಮ್ಮನಿಗೆ ಏನೆಲ್ಲಾ ಇಷ್ಟವೋ ಅದೆಲ್ಲವನ್ನು ತಂದು, ಪ್ರಸಾದದ ರೀತಿ ಇಟ್ಟು ನಮಸ್ಕರಿಸಿದ್ದಾರೆ.
ಎಲ್ಲೆಲ್ಲಿಂದಲೋ ಬಂದಂತ ಅಭಿಮಾನಿಗಳು ಅಪ್ಪು ಅವರನ್ನ ನೆನೆದಿದ್ದಾರೆ. ಅವರ ಸಿನಿಮಾಗಳನ್ನ ಅದೆಷ್ಟು ಪ್ರಿತೀಸುತ್ತಿದ್ದೆವು ಎಂಬುದನ್ನ ಹೇಳಿದ್ದಾರೆ. ಅಪ್ಪು ಅಗಲಿ ಐದು ವರ್ಷಗಳಾಗೋಯ್ತಾ ಅಂತ ಎಲ್ಲರಿಗೂ ಆಶ್ಚರ್ಯವಾಗ್ತಿದೆ. ಇತ್ತೀಚೆಗಷ್ಟೇ ಆಕಾಶ್ ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾ ನೋಡಿದ ಅದೆಷ್ಟೋ ಜನ ಕಣ್ಣಲ್ಲಿ ನೀರು ಹಾಕಿದ್ರು. ಅಪ್ಪು ತುಂಟಾಟ, ಆ ಮಾತು, ಫೈಟ್, ಡ್ಯಾನ್ಸ್ ಈಗಲೂ ಕಣ್ಣಮುಂದೆಯೇ ಇದೆ. ಅವರು ದೈಹಿಕವಾಗಿ ಇಲ್ಲ ಅನ್ನೋದನ್ನ ನಂಬೋದಾದ್ರು ಹೇಗೆ. ಸಹಸ್ರಾರು ಅಭಿಮಾನಿಗಳು ಈಗಲೂ ಅವರು ಬಿಟ್ಟು ಹೋದ ಹಳೆಯ ಸಿನಿಮಾಗಳಲ್ಲಿಯೇ ಅವರನ್ನ ನೋಡಿ ಖುಷಿ ಪಡುತ್ತಾ ಇದ್ದಾರೆ. ಅಪ್ಪು ಫಾರೆವರ್ ಅಂತಿದ್ದಾರೆ.


ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.







ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್