Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಅಪ್ಪು 4ನೇ ವರ್ಷದ ಪುಣ್ಯಸ್ಮರಣೆ : ಅಶ್ವಿನಿ, ಶಿವಣ್ಣ ಸೇರಿ ಕುಟುಂಬಸ್ಥರಿಂದ ಪೂಜೆ

---Advertisement---

ಬೆಂಗಳೂರು: ಅಪ್ಪು ಎಂಬ ಬೆಲೆ ಕಟ್ಟಲಾಗದ ಬೆಟ್ಟದ ಹೂ ಎಲ್ಲರನ್ನು ಅಗಲಿ ನಾಲ್ಕು ವರ್ಷವಾಯ್ತು. ಅಭಿಮಾನಿಗಳು ಈಗಲೂ ಅವರನ್ನ ಜೀವಂತವಾಗಿದ್ದಾರೆಂಬಂತೆಯೇ ಆರಾಧಿಸುತ್ತಿದ್ದಾರೆ. ನಗುವಿನ ಒಡೆಯನ ನಗುವನ್ನ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ದೈಹಿಕವಾಗಿ ದೂರಾದ ಅಪ್ಪುವನ್ನ ಪ್ರತಿದಿನ ಪೂಜಿಸುತ್ತಾ, ನಮ್ಮ ಜೊತೆಗೆ ಇದ್ದಾರೆಂದು ಬದುಕುತ್ತಿರುವ ಸಾವಿರಾರು ಜೀವಗಳು ಇಂದು ಅಪ್ಪು ಸ್ಮಾರಕದ ಬಳಿ ಬಂದು, ಹೂ ನೀಡಿ ದರ್ಶನ ಪಡೆದು ಹೋಗುತ್ತಿದ್ದಾರೆ.

ಕುಟುಂಬಸ್ಥರು ಕೂಡ ಅಪ್ಪು ಸ್ಮಾರಕದ ಬಳಿ ಬಂದು, ಪೂಜೆ ಸಲ್ಲಿಸಿ, ಅವರಿಗೆ ಇಷ್ಟವಾದಂತ ಆಹಾರಗಳನ್ನೆಲ್ಲಾ ಎಡೆ ಇಟ್ಟು, ಪೂಜೆ ಮಾಡಿದ್ದಾರೆ. ಅಶ್ವಿನಿ ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಶಿವಣ್ಣ, ಯುವ ರಾಜ್‍ಕುಮಾರ್, ವಿನಯ್ ರಾಜ್‍ಕುಮಾರ್ ಸೇರಿದಂತೆ ಕುಟುಂಬಸ್ಥರೆಲ್ಲಾ ಬಂದು ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಶಿವಣ್ಣ, ಅಪ್ಪು ತಂದೆಗೆ ತಕ್ಕ ಮಗ 100%. ಅವನು ಇಲ್ಲ ಅಂತ ಅನ್ಕೊಂಡ್ರೆ ಕಷ್ಟ ಆಗುತ್ತೆ ಅವನ ನೆನಪಲ್ಲಿ ಬಾಳಬೇಕು. ನಮ್ಮಲ್ಲಿ ಅವನನ್ನ ತೋರ್ಸೋಕೆ ಪ್ರಯತ್ನ ಪಡ್ತಿದೀವಿ. ಯಾವಾಗ್ಲೂ ಅವನ ಮೇಲೆ ಪ್ರೀತಿ ಇರುತ್ತೆ. ಅವನ ನಡುವಳಿಕೆನೆ ಹಾಗೆ ಎಲ್ಲರೂ ಇಷ್ಟ ಪಡ್ತಾರೆ. ಅಪ್ಪಾಜಿ.. ಅಪ್ಪು ಬಗ್ಗೆ ಮಾತಾಡ್ದೆ ಇರೋ ದಿನನೇ ಇಲ್ಲ. ಅವ್ನು ಇದ್ದಾನೆ ಅಂತ ಅನ್ಕೊಂಡೆ ಮಾತಾಡ್ತೀನಿ. ನಮಗೆ ಹೆಲ್ಫಿಂಗ್ ನೇಚರ್ ದೊಡ್ಡೋರಿಂದ ಬಂದಿದ್ದು. ಯಾರಿಗೂ ಗೊತ್ತಾಗಲ್ಲ ಹಾಗೆ ಸಹಾಯ ಮಾಡಬೇಕು. AI ಯಿಂದ ಸಿನಿಮಾ ಮಾಡೋದಾದ್ರೆ ಅಚ್ಚುಕಟ್ಟಾಗಿ ಬರ್ಬೇಕು ಆರ್ಟಿಫಿಷಿಯಲ್ ಅನ್ನಿಸಬಾರದು. ಹಾಗಿದ್ದಾಗ ಮಾಡೋಣ ಎಂದಿದ್ದಾರೆ ಶಿವಣ್ಣ.

ಯುವ ರಾಜ್‍ಕುಮಾರ್ ಮಾತನಾಡಿ, ನಾನು ಹೊಸ ಸ್ಟಂಟ್ಸ್ ಪ್ರಾಕ್ಟೀಸ್ ಮಾಡಿದ್ರೆ ಅಪ್ಪು ಚಿಕ್ಕಪ್ಪನು ಮಾಡ್ತಿದ್ರು. ಅವ್ರಿಗೆ ಎಲ್ಲಾ ಗೋತ್ತಿದ್ರು ನನ್ನ ಕೇಳ್ತಿದ್ರು ಹೇಗೆ ಮಾಡ್ದೆ ಹೇಗೆ ಕಲಿತೆ ಅಂತ. ವರ್ಕೌಟ್ ಬಗ್ಗೆ ತುಂಬಾ ಮಾತಾಡ್ತಿದ್ವಿ ಇಬ್ಬರು. ಚಿಕ್ಕಪ್ಪನ ನನ್ನಲ್ಲಿ ನೋಡ್ತಾರೆ ಅದೆಲ್ಲ ಆಗಲ್ಲ, ಸುಮ್ನೆ ಇರಿ. ಜೂ.ಅಪ್ಪು ಅಂತಾರೆ ಅದೆಲ್ಲ ಜನರ ಪ್ರೀತಿ ಅಷ್ಟೇ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...