Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಪ್ಪು 11 ಕ್ರಿಕೆಟ್ ಕಪ್ – 2025 : ವಿಜೇತರಾಗಿ ರಾಹುಲ್ ತಂಡ

---Advertisement---

ಸುದ್ದಿಒನ್, ಚಿತ್ರದುರ್ಗ, ಫೆ.23: ಚಿತ್ರದುರ್ಗ ಅಪ್ಪು ಗೆಳೆಯರ ಬಳಗ ವತಿಯಿಂದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವಕ ಸ್ವಾಮೀಜಿರವರ ನೇತೃತ್ವದಲ್ಲಿ, ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಜರುಗಿದ ಅಪ್ಪು 11 ಕ್ರಿಕೇಟ್ ಕಪ್ -2025ರ ವಿಜೇತ ತಂಡವಾಗಿ ರಾಹುಲ್ ತಂಡ ಹೊರಹೊಮ್ಮಿದೆ.

ಕಳೆದ ಮೂರುದಿನಗಳಿಂದ ಚಿತ್ರದುರ್ಗ ನಗರದಲ್ಲಿ ಕ್ರಿಕೆಟ್ ಜಾತ್ರೆ ನಡೆಯುತ್ತಿದ್ದು ನಗರವಾಸಿಗಳು ಸುಮಾರು 24 ತಂಡಗಳಾಗಿ ಸೆಣಸಾಡಿದ್ದಾರೆ. ಅಂತಿಮವಾಗಿ ಮೂರನೇ ರನ್ನರ್ ಅಪ್ ಆಗಿ ಸುವರ್ಣ ತಂಡ, ಎರಡನೇಯ ರನ್ನರ್ ಅಪ್ ಆಗಿ ಎವರಿಗ್ರಿನ್ ತಂಡ ಹೊರಹೊಮ್ಮಿದೆ.

ಮೊದಲನೇ ರನ್ನರ್ ಅಪ್ ಆಗಿ ಚಾಣಕ್ಯ ತಂಡ ಪಾರಿತೋಷಕ ಹಾಗೂ 25.000 ರೂಪಾಯಿಗಳ ಬಹುಮಾನ ಪಡೆದಿದೆ. ಅಪ್ಪು 11 ಕಪ್ ವಿಜೇತರಾಗಿ ರಾಹುಲ್ ತಂಡವು ಹೊರಹೊಮ್ಮಿದೆ. ತಂಡವು ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿಗುರುಪೀಠದ ಕ್ರೀಡಾಪ್ರೋತ್ಸಾಹ ನಿಧಿಯಿಂದ ನೇರವಿನಿಂದ 50.000 ರೂಪಾಯಿಗಳ ನಗದು ಪಾರಿತೋಷಕವನ್ನು ಪಡೆದಿದೆ.

ಮಂಜುನಾಥ್ ಚಾರಿ ಅವರು ಮ್ಯಾನ್ ಆಫ್ ದಿ ಮ್ಯಾಚ್ ಸ್ವಿಕರಿಸಿದರು. ಚಾಣಕ್ಯ ತಂಡದ ಶಿವುಕುಮಾರ ಮ್ಯಾನ್ ಆಫ್ ದಿ ಸಿರಿಸ್ ಪಡೆದರು. ರಾಹುಲ್ ತಂಡದ ಲಿಂಗರಾಜು ಬೆಸ್ಟ್ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿ ಸ್ವೀಕರಿಸಿದರು. ರಾಹುಲ್ ತಂಡ ರಂಗಸ್ವಾಮಿ ಬೆಸ್ಟ್ ಭೋಲರ್ ಪ್ರಶಸ್ತಿ ಸ್ವೀಕರಿಸಿದರು.

ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಸಮಾರಂಭವನ್ನು ಕೆ.ಎನ್.ರಾಜಣ್ಣ ಉದ್ಘಾಟಿಸಿದರು. ಉದ್ಯಮಿ ಸಮರ್ಥ ಹಾಗೂ ಮೇದೆಹಳ್ಳಿ ವಿಜಯಕುಮಾರ ಅಪ್ಪು ಬಳಗದ ಪ್ರಾಸದ, ಇಂಧು, ನಾಗರಾಜ ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...