ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 28 : ನಗರದ ವಿದ್ಯಾ ವಿಕಾಸ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರು, ಅಕೌಂಟೆಂಟ್, HR ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದು ಭರ್ತಿಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನರ್ಸರಿ, ಪ್ರಾಥಮಿಕ ಶಾಲೆ, ಹಾಗೂ ಪ್ರೌಢಶಾಲೆಯ ಶಿಕ್ಷಕರು, ಅಕೌಂಟೆಂಟ್, HR, ಸ್ವಾಗತಕಾರರು, ಮೇಲ್ವಿಚಾರಕರು, ಆರ್ಟ್ ಅಂಡ್ ಕ್ರಾಫ್ಟ್, ದೈಹಿಕ ಶಿಕ್ಷಣ, ಸಂಗೀತ, ನೃತ್ಯ, ಟಾಯ್ ಕ್ವಾಂಡೋ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇವೆ.

ಅರ್ಜಿ ಸಲ್ಲಿಸುವ ವಿಧಾನ :
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸ್ವ-ಪರಿಚಯ ಪತ್ರ ಮತ್ತು ಅಗತ್ಯ ಪ್ರಮಾಣಪತ್ರಗಳ ದೃಢೀಕೃತ ಪ್ರತಿಗಳೊಂದಿಗೆ ಚಿತ್ರದುರ್ಗ ನಗರದ ಬಸವೇಶ್ವರ ಟಾಕೀಸ್ ರಸ್ತೆಯಲ್ಲಿರುವ ವಿದ್ಯಾಸಂಸ್ಥೆಯ ಕಚೇರಿಗೆ ಜನವರಿ 3 ಮತ್ತು 4 ನೇ ತಾರೀಖಿನಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯೊಳಗೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬೇಕು.
ಅರ್ಹ ಅಭ್ಯರ್ಥಿಗಳು ತಮ್ಮ- ಸ್ವ ವಿವರಗಳನ್ನು
E-mail:- jobs.vvvs@gmail.com ಅಥವಾ 7090808194 ಮೊಬೈಲ್ ಸಂಖ್ಯೆಗೆ ವ್ಯಾಟ್ಸಪ್ ಮುಖಾಂತರ ಕಳುಹಿಸಲು ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















