Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧರ್ಮಸ್ಥಳದ ಧರ್ಮಾಧಿಕಾರಿಗೆ ಡಿಕೆಶಿ ಕಡೆಯಿಂದ ಮನವಿ

ಡಿಕೆ ಶಿವಕುಮಾರ್
---Advertisement---

 

ಬೆಂಗಳೂರು: ಧರ್ಮಸ್ಥಳದಲ್ಲಿ ನಾನಾ ಘಟನೆಗಳು ಸಂಭವಿಸಿವೆ. ಸದ್ಯ ಎಲ್ಲವೂ ಅಂತ್ಯ ಕಾಣುವಂತ ಬೆಳವಣಿಗೆಯೂ ನಡೆಯುತ್ತಿದೆ. ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಮನವಿಯೊಂದನ್ನ ಮಾಡಿದ್ದಾರೆ.

ಬಿಜೆಪಿಯವರೇನು ಧರ್ಮಯುದ್ಧ ಮಾಡ್ತಾ ಇಲ್ಲ. ಧರ್ಮದಲ್ಲಿ ರಾಜಕೀಯ ಮಾಡ್ತಾ ಇದ್ದಾರೆ. ಬಾಯಿ ಮುಚ್ಕೊಂಡು ಸುಮ್ನೆ ಇದ್ದರು. ಅವರ ಪಾರ್ಟಿ ಲೀಡರ್ಸ್ ಎಲ್ಲಾ ನಮ್ಮ ಎಸ್ಐಟಿನ ಸ್ವಾಗತ ಮಾಡಿದ್ರು. ಅವರ ಕುಟುಂಬದವರು ಎಸ್ಐಟಿನ ಸ್ವಾಗತ ಮಾಡಿದ್ರು‌. ಸತ್ಯ ಏನಿದೆ ಅದನ್ನ ತರ್ಬೇಕು ಅಂತ ಪ್ರಯತ್ನ ಮಾಡ್ತಾ ಇದ್ದೀವಿ. ಈಗ ಅವ್ರಿಗೆಲ್ಲಾ ಗೊತ್ತಾಗಿ, ಧರ್ಮಸ್ಥಳವನ್ನು ಅಶುದ್ಧ ಮಾಡೋದಕ್ಕೆ ಹೊರಟಿದ್ದಾರೆ.

 

ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ಮನವಿ ಮಾಡ್ತೀನಿ. ರಾಜಕೀಯ ಕುತಂತ್ರಕ್ಕೆ ತಾವೂ ತಮ್ಮ ಕ್ಷೇತ್ರ ಬಲಿಯಾಗಬಾರದು. ಎಲ್ಲಾ ಭಕ್ತರು ಇದಾರೆ. ಈ ರಾಜಕೀಯಕ್ಕೆ ತಮ್ಮ ಕಗಷೇತ್ರವನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಕೊಡಬಾರದು ಅನ್ನೋದು ನನ್ನ ಸಂಪೂರ್ಣ ಅ ಮನವಿ. ಇವತ್ತೇನಾದ್ರೂ ಕುತಂತ್ರ ನಡೀತಾ, ಷಡ್ಯಂತ್ರ ನಡೀತಾ ಇದೆ ಅಂದ್ರೆ ಬಿಜೆಪಿಯ ಎರಡು ಗುಂಪಿನ ಇರುವ ಒಳಗಿನ ಫೈಟ್ ನಿಂದ ನಡೀತಾ ಇದೆ. ಯಾರ್ಯಾರು ಅರೆಸ್ಟ್ ಆಗಿದ್ದಾರೆ, ಯಾರ್ಯಾರದ್ದು ಹೇಳಿಕೆ ಇದೆ ಇದೆಲ್ಲವನ್ನು ಯಾರು ಕೊಟ್ಟಿದ್ದು. ಅರೆಸ್ಟ್ ಆಗಿದ್ದು ನಮ್ಮ ಶಾಸಕ ಅಂತಾರೆ. ಅವರ ಶಾಸಕ ಏನು ಹೇಳಿದ್ದರು. ಅವರ ಪಾರ್ಟಿಯವರೇ ಧರ್ಮಸ್ಥಳದವರ ಮೇಲೆ ಮಸಿ ಬಳಿಯುವುದಕ್ಕೆ ಪ್ರಯತ್ನಿಸಿದ್ದೇ ಬಿಜೆಪಿ.

ಈಗ ಅದನ್ನ ಮುಚ್ಚಾಕುವುದಕ್ಕೆ ಪ್ರಯತ್ನ ಪಡುತ್ತಾ ಇದ್ದಾರೆ. ಹೆಸರುಗಳನ್ನೆಲ್ಲಾ ಎಲ್ಲಿ ಹೊರಗೆ ತಂದು ಬಿಡ್ತೀವೋ ಎಂಬ ಭಯದಿಂದ ಹೀಗೆ ಮಾಡ್ತಾ ಇದ್ದಾರೆ. ನಾನು ಹೇಳ್ತಾ ಇದ್ದೀನಿ ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಅಂತ ಹಿಂದೆನೂ ಹೇಳಿದ್ದೀನಿ, ಈಗಲು ಹೇಳ್ತಾ ಇದ್ದೀನಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment