ತುಮಕೂರು: ಸಹಕಾರ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಿಕೆಯಾಗಿದೆ. ಚುನಾವಣೆ ಅನೌನ್ಸ್ ಆದಾಗಲೇ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಕಣವಾಗಿತ್ತು. ಸಿದ್ದರಾಮಯ್ಯ ಅವರಿಗೆ ಕೆ.ಎನ್.ರಾಜಣ್ಣ ಆಪ್ತರಾಗಿದ್ದಾರೆ. ಮತ್ತೊಮ್ಮೆ ತಾವೇ ಅಧ್ಯಕ್ಷರಾಗಬೇಕೆಂದು ಬಯಸಿದ್ದರು. ಅತ್ತ ಡಿಕೆ ಶಿವಕುಮಾರ್ ಬಣದ ನಾಯಕರು ಸಹ ನಾವೂ ಅಧ್ಯಕ್ಷರಾಗಬೇಕೆಂದು ಪಟ್ಟು ಹಿಡಿದಿದ್ದರು. ಇದ್ದಕ್ಕಿದ್ದ ಹಾಗೇ ಇಂದು ನಡೆಯಬೇಕಿದ್ದ ಚುನಾವಣೆ ರದ್ದಾಗಿದೆ.
ಈ ಬಗ್ಗೆ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹೈಕಮಾಂಡ್ ಗೆ ಕರೆ ಮಾಡಿ ಮಾತನ್ನಾಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಯಾಕೆ ಮುಂದೂಡಿಕೆ ಮಾಡಿದ್ದಾರೆ ಅಂತ ಸುರ್ಜೆವಾಲ ಅವರು ಹೇಳಿದ್ದಾರೆ ಎಂಬ ಮಾಹಿತಿ ನಮ್ಮಲ್ಲಿ ಇಲ್ಲ. ಏನೇ ತೀರ್ಮಾನ ಮಾಡಿದರು ಅದು ಮುಖ್ಯಮಂತ್ರಿಗಳೇ ಮಾಡಿರೋದು ಎಂಬುದನ್ನ ಹೇಳಿದ್ದಾರೆ.
ಮುಂದೂಡುವಂತ ಪ್ರಶ್ನೆ ಕೋರಂ ಸಮಸ್ಯೆ ಇದ್ದಾಗ ಬರುವಂತಹದ್ದು. ಆ ಸಮಸ್ಯೆ ಇರುವ ಕಾರಣ ಮುಂದೂಡಿಕೆ ಮಾಡಲಾಗಿದೆ. ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನನಗೆ ಮಾಹಿತಿ ಇಲ್ಲ. ನಾಮಿನೇಷನ್ ಹಾಕಬೇಕು ಅಂದ್ರುನು ಕೋರಂ ಬೇಕಲ್ಲ. ಮೀಟಿಂಗ್ ಮಾಡ್ತಾರೆ ಆಗಲೂ ಕೋರಂ ಬೇಕು. ನಿರ್ದೇಶಕರ ಸೈನ್ ಬೇಕು ಅಂದ್ರು ಹತ್ತು ಜನ ಇರಬೇಕು. ಮತ್ತೆ ಎಲೆಕ್ಷನ್ ದಿನಾಂಕ ಘೋಷಣೆ ಆಗಲಿ. ಸುರ್ಜೆವಾಲ ಅವರು ನಮ್ಮ ಪಕ್ಷದ ಮುಖಂಡರಿದ್ದಾರೆ. ನಮ್ಮ ರಾಜ್ಯದ ಉಸ್ತುವಾರಿ ಇದ್ದಾರೆ. ಕೋರ್ಪೇಷನ್ ವಿಚಾರ ಅಂತ ಬಂದ್ರೆ ಅವರಿಗೆ ಮಾಹಿತಿ ಇನ್ನು ಕಡಿಮೆ ಅಂದುಕೊಳ್ಳುತ್ತೀನಿ. ಇಲ್ಲಿ ಪಕ್ಷವಾಗಿ ನಡೆಯೋದಲ್ಲ. ಎಲ್ಲಾ ಪಕ್ಷದವರು ಇರ್ತಾರೆ. ಹೀಗಾಗಿ ಸುರ್ಜೆವಾಲ ಅವರಿಗೆ ಸಹಕಾರಿ ಇಲಾಖೆ ಮಾಹಿತಿ ಕಡಿಮೆ ಇರಬಹುದು ಎಂದಿದ್ದಾರೆ.






