Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಳ್ಳಾರಿ ಬೀಮ್ಸ್ ನಲ್ಲಿ ಮತ್ತೆ ಸಾವು : ಸಿಎಂ ಸಿದ್ದರಾಮಯ್ಯ ಏನಂದ್ರು..?

---Advertisement---

ಬೆಂಗಳೂರು: ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಸೇರಿದಂತೆ ಹಲವು ಸಚಿವರು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.

ಈ ವೇಳೆ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದಾರಿಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನ ಎಂದು ನಾವೆಲ್ಲ ಭಾವಿಸಿದ್ದೇವೆ. ನಮ್ಮ ಸರ್ಕಾರ ಆ ನಿಟ್ಟಿನಲ್ಲಿ ಸಂವಿಧಾನ ರಕ್ಷಣೆ ಮಾಡುವಂತ, ಪ್ರಜಾಪ್ರಭುತ್ವ ಉಳಿಸುವಂತ, ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಡುವಂಥ ಪ್ರಯತ್ನ ಮಾಡ್ತಾ ಇದೆ ಎಂದರು.

ಇನ್ನು ಬಳ್ಳಾರಿಯಲ್ಲಿ ಐದು ಜನ ಬಾಣಂತಿಯರು ಸಾವನ್ನಪ್ಪಿದ್ದರು. ಈಗ ಅಲ್ಲಿನ ಗರ್ಭಿಣಿಯರು ಬೀಮ್ಸ್ ನಲ್ಲಿ ಸಿಜೆರಿಯನ್ ಮಾಡಿಸಿಕೊಳ್ಳುವುದಕ್ಕೇನೆ ಹೆದರುತ್ತಿದ್ದಾರೆ. ಈ ಬೆನ್ನಲ್ಲೆ ನಿನ್ನೆ ಶಿಶುವೊಂದು ಸಾವನ್ನಪ್ಪಿದೆ. ಸಿಜೆರಿಯನ್ ಆದ ಅರ್ಧ ಗಂಟೆಗೆ ಸಾವನ್ನಪ್ಪಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಬಾಣಂತಿಯರು ಅನೇಕ ಕಡೆ ಸಾವನ್ನಪ್ಪುತ್ತಾರೆ. ಆದರೆ ಇದ್ಯಾಕೆ ಸಾವನ್ನಪ್ಪಿದರು ಎಂಬುದರ ಮಾಹಿತಿ ಕಲೆ ಹಾಕಬೇಕಿದೆ. ಈ ಸಂಬಂಧವೇ ಮೊನ್ನೆ ಮೀಟಿಂಗ್ ಮಾಡಿದ್ದೀವಿ. ಡ್ರಗ್ಸ್ ಕಂಟ್ರೋಲರ್ ನ ಅಮಾನತು ಕೂಡ ಮಾಡಿದ್ದೀವಿ. ಇಲ್ಲೊಬ್ಬರಿಗೆ ನೋಟೀಸ್ ಕೂಡ ಕೊಟ್ಟಿದ್ದೀನಿ. ಈ ಸಾವಿನ ಸಂಬಂಧವೂ ವಿಚಾರ ಮಾಡ್ತೀನಿ. ಅದು ನಮ್ಮ ಔಷಧಿಯಿಂದ ಆಗಿದೆಯಾ..? ಡಾಕ್ಟರ್ ಯಡವಟ್ಟು ಮಾಡಿದ್ದಾರಾ..? ಎಂಬುದು ಗೊತ್ತಿಲ್ಲ. ಹೋಗಿ ನೋಡಿ, ಆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೀನಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment