Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರೀತಿಸಿದ ಹುಡುಗಿಗಾಗಿ ಹೆಂಡತಿಗೆ ಅನಸ್ತೇಶಿಯಾ : ವಿಕ್ಟೋರಿಯಾ ವೈದ್ಯೆ ಸಾವಿನ ಕರಾಳ ಸತ್ಯ..!

---Advertisement---

 

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೇ ಚರ್ಮರೋಗ ವೈದ್ಯೆಯಾಗಿದ್ದ ಕೃತಿಕಾ ಅವರ ಸಾವು ಇಡೀ ರಾಜ್ಯವೇ ಮಾತನಾಡುವಂತೆ ಮಾಡಿದೆ. ಯಾಕಂದ್ರೆ ಆಕೆಯ ತಂದೆ ತಾಯಿ ಕೋಟಿ ಕೋಟಿ ಖರ್ಚು ಮಾಡಿ, ಮಗಳ ಮದುವೆಯನ್ನ ಅದ್ದೂರಿಯಾಗಿ ಮಾಡಿದ್ದರು. ಪ್ರೀತಿಯಿಂದ ಮದುವೆಯಾದ ನಾಟಕವಾಡಿದ್ದ ಪತಿರಾಯ ಅಂದ್ರೆ ಮಹೇಂದ್ರ ರೆಡ್ಡಿ ಹೆಂಡತಿಯನ್ನೇ ಗೊತ್ತಾಗದಂತೆ ಸಹಜವಾದ ಸಾವಿನಂತೆ ಕೊಂದು ಬಿಟ್ಟ. ಸದ್ಯ ಪೊಲೀಸರ ಅತಿಥಿಯಾಗಿರುವ ಮಹೇಂದ್ರ ಸತ್ಯ ಬಾಯ್ಬಿಟ್ಟಿದ್ದಾನೆ. ತನ್ನ ಪ್ರೇಯಸಿಗಾಗಿ ಹೆಂಡತಿಯನ್ನೇ ಕೊಂದಿದ್ದಾನೆ.

ನನಗೆ ಒಂದೊಳ್ಳೆ ಹುಡುಗಿ ಮದುವೆಯಾಗಿ, ಅದ್ಭುತವಾದ ಜೀವನ ನಡೆಸುವ ಕನಸಿತ್ತು. ಆದರೆ ರೋಗಿಷ್ಠೆಯನ್ನು ತಂದು ಮದುವೆ ಮಾಡಿದರು. ಆಕೆ ಏನೇ ತಿಂದರೂ ವಾಂತಿ ಮಾಡಿಕೊಳ್ಳುತ್ತಿದ್ದಳು. ಪಾರ್ಟಿಗೆ ಹೋದಾಗಲೂ ಏನಾದರೂ ತಿಂದರೆ ವಾಂತಿ ಮಾಡಿಕೊಳ್ಳುತ್ತಿದ್ದಳು. ಸ್ನೇಹಿತರೆಲ್ಲಾ ಆಗಾಗ ನನ್ನ ವ್ಯಂಗ್ಯ ಮಾಡ್ತಾ ಇದ್ರು. ಹೀಗಾಗಿ ನಾನು ನನ್ನ ಪ್ರೀತಿಯನ್ನ ಹುಡುಕಿದೆ.

ಇವಳು ಸತ್ತರೆ ನಾನು ಆಕೆಯನ್ನ ಮದುವೆ ಮಾಡಿಕೊಳ್ಳಬಹುದು ಎಂದುಕೊಂಡೆ. ಹೀಗಾಗಿ ಕೊಲೆ ಮಾಡಿದೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಕೃತಿಕಾ ಸತ್ತ ಮೇಲೆ ಗೋವಾ ಬೀಚ್ ನಲ್ಲಿ ಮಹೇಂದ್ರ ಜಾಲಿ ಮಾಡಿಕೊಂಡು ಬಂದಿದ್ದ. ಅಷ್ಟೇ ಅಲ್ಲ ಇದೆಲ್ಲಾ ತಣ್ಣಗಾದ ಮೇಲೆ ವಿದೇಶಕ್ಕೆ ತೆರಳಿ ಅಲ್ಲಿಯೇ ಲೈಪೊ್ ಸೆಟಲ್ ಮಾಡಿಕೊಳ್ಳುವುದಕ್ಕೆ ಯೋಜನೆ ರೂಪಿಸಿದ್ದನಂತೆ. ಅಷ್ಟರಲ್ಲಿ ಮಹೇಂದ್ರನ ಎಲ್ಲಾ ಯೋಚನೆಗಳು ತಲೆ ಕೆಳಗಾಗಿದೆ. ಪೊಲೀಸರ ಕೈಗೆ ತಗಲಾಕಿಕೊಂಡು ಈಗ ಕಂಬಿಗಳ ಹಿಂದೆ ಲೈಫ್ ಲೀಡ್ ಮಾಡ್ತಾ ಇದ್ದಾನೆ. ಪೊಲೀಸರ ಅತಿಥಿಯಾಗಿದ್ದಾನೆ. ಪ್ರೇಯಸಿಗಾಗಿ ಮುದ್ದು ಹೆಂಡತಿಯನ್ನೇ ಕೊಂದು ಬಿಟ್ಟಿದ್ದಾನೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...