ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ (Ration Card) ಸರ್ಕಾರ ಸಿಹಿಸುದ್ದಿ ನೀಡಿದ್ದು, ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಇನ್ನಷ್ಟು ಸರಳ ಹಾಗೂ ಜನಸ್ನೇಹಿಗೊಳಿಸಿದೆ.
ಇನ್ಮುಂದೆ ಪಡಿತರ ಚೀಟಿಯ ಇ-ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳು ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಅಲೆಯುವ ಮತ್ತು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ. ಜನರು ತಮ್ಮ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಸುಲಭವಾಗಿ ಇ-ಕೆವೈಸಿ ಪೂರ್ಣಗೊಳಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ‘ಅನ್ನ ಸೇವೆ’ (Anna Seve) ಆ್ಯಪ್ ಅನ್ನು ಪರಿಚಯಿಸಿದೆ.
ಮುಖ ಗುರುತಿಸುವಿಕೆ (Face Authentication) ಸೌಲಭ್ಯ:
ಬೆರಳಚ್ಚು (Fingerprint) ಸರಿಯಾಗಿ ಸಿಗದೆ ತೊಂದರೆ ಅನುಭವಿಸುತ್ತಿದ್ದ ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಅನುಕೂಲವಾಗುವಂತೆ ಈ ಆ್ಯಪ್‌ನಲ್ಲಿ ‘ಫೇಸ್ ಅಥೆಂಟಿಕೇಶನ್’ (ಮುಖ ಗುರುತಿಸುವಿಕೆ) ಆಯ್ಕೆಯನ್ನು ಒದಗಿಸಲಾಗಿದೆ. ಇದರಿಂದಾಗಿ ಯಾವುದೇ ತಾಂತ್ರಿಕ ಅಡೆತಡೆಗಳಿಲ್ಲದೆ ಸುಲಭವಾಗಿ e-KYC ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಅನ್ನ ಸೇವೆ ಆ್ಯಪ್ ಮೂಲಕ ಮನೆಯಲ್ಲೇ ಸುಲಭವಾಗಿ e-KYC ಪೂರ್ಣಗೊಳಿಸಬಹುದು. ಹಿರಿಯರು ಹಾಗೂ ಮಕ್ಕಳಿಗೆ Face Authentication ಸೌಲಭ್ಯವೂ ಲಭ್ಯವಿದೆ. ಜನರ ಸಮಯ ಮತ್ತು ಶ್ರಮ ಉಳಿಸುವ ನಿಟ್ಟಿನಲ್ಲಿ ಈ ಡಿಜಿಟಲ್ ಸೇವೆ ಪರಿಚಯಿಸಲಾಗಿದೆ. ಸರಳ, ಸುಲಭ ಹಾಗೂ ಜನಸ್ನೇಹಿ e-KYC ಸೇವೆಗೆ ಅನ್ನ ಸೇವೆ ಆ್ಯಪ್ ಸಹಾಯಕರವಾಗಲಿದೆ.
— DIPR Karnataka (@KarnatakaVarthe) October 4, 2026
ಮನೆಯಲ್ಲೇ ಇ-ಕೆವೈಸಿ: ‘ಅನ್ನ ಸೇವೆ’ ಮೊಬೈಲ್ ಆ್ಯಪ್ ಮೂಲಕವೇ ಪಡಿತರ ಚೀಟಿಯ e-KYC ಪೂರ್ಣಗೊಳಿಸುವ ಅವಕಾಶ.
ಅಲೆದಾಟಕ್ಕೆ ಮುಕ್ತಿ: ನ್ಯಾಯಬೆಲೆ ಅಂಗಡಿ ಅಥವಾ ಗ್ರಾಮ ಒನ್ ಕೇಂದ್ರಗಳ ಮುಂದೆ ಸರತಿಯಲ್ಲಿ ನಿಲ್ಲುವ ಸಮಸ್ಯೆಯಿಂದ ಜನರಿಗೆ ಮುಕ್ತಿ.

ಹಿರಿಯರು ಮತ್ತು ಮಕ್ಕಳಿಗೆ ಅನುಕೂಲ: ಬಯೋಮೆಟ್ರಿಕ್ ಬದಲಿಗೆ ಮುಖ ಗುರುತಿಸುವಿಕೆ (Face Authentication) ಮೂಲಕ ಇ-ಕೆವೈಸಿ ಸೌಲಭ್ಯ.
ಹಂತ ಹಂತವಾಗಿ ವಿಸ್ತರಣೆ: ಮೊದಲ ಹಂತದಲ್ಲಿ ರಾಜ್ಯದ 8 ಜಿಲ್ಲೆಗಳಲ್ಲಿ ಈ ಸೇವೆ ಆರಂಭವಾಗಿದ್ದು, ಶೀಘ್ರದಲ್ಲೇ ರಾಜ್ಯಾದ್ಯಂತ ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಲಾಗುವುದು.
ಸಾರ್ವಜನಿಕರ ಸಮಯ ಮತ್ತು ಶ್ರಮವನ್ನು ಉಳಿಸಿ, ಪಡಿತರ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಡಿಜಿಟಲ್ ಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ.
ಏಷ್ಯನ್ ಗೇಮ್ಸ್ 2026: 85 ಪದಕಗಳೊಂದಿಗೆ 4ನೇ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಬರೆದ ಭಾರತ!













