ಚಿತ್ರದುರ್ಗ, (ಸುದ್ದಿಒನ್) : ತ್ಯಾಗರಾಜ ಬೀದಿಯಲ್ಲಿರುವ ಆರ್ಯವೈಶ್ಯ ವಿದ್ಯಾಭಿವೃದ್ದಿ ಸಂಘ(ವಾಸವಿ ಹಾಸ್ಟಲ್) ಗೆ 79 ವರ್ಷಗಳಾಗಿರುವುದರಿಂದ ಜೂ.10 ರಿಂದ 12 ರವರೆಗೆ ಅಮೃತ ಮಹೋತ್ಸವ ಕಾರ್ಯಕ್ರಮ ವಾಸವಿ ಹಾಸ್ಟಲ್ ಹಾಗೂ ವಾಸವಿ ಮಹಲ್‌ನಲ್ಲಿ ನಡೆಯಲಿದೆ.
10 ರ ಇಂದು ಸಂಜೆ 4-30 ರಿಂದ 5-30 ರವರೆಗೆ ಕನ್ನಡ ಭಾವಗೀತೆಗಳ ಹಾಡುಗಾರಿಕೆ/ಕರೋಕೆ ನಡೆಯಲಿದೆ. ಸಂಜೆ 5-30 ರಿಂದ ನಡೆಯುವ ಕಾರ್ಯಕ್ರಮವನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಉದ್ಗಾಟಿಸಲಿದ್ದಾರೆ.
ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ್ ಸ್ಮರಣ ಸಂಚಿಕೆ ರಕ್ಷಾ ಪುಟ ಬಿಡುಗಡೆಗೊಳಿಸುವರು.
ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್.ಕಾಶಿ ವಿಶ್ವನಾಥ ಶೆಟ್ಟಿ, ನಗರಸಭಾ ಸದಸ್ಯ ಜಿ.ಹರೀಶ್, ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಸುಧಾ ನಾಗರಾಜ್ ಇವರುಗಳು ಆಗಮಿಸಲಿದ್ದಾರೆ.
ಆರ್ಯವೈಶ್ಯ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಡಾ.ಹೆಚ್.ಎನ್.ರಾಮಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಆರ್ಯವೈಶ್ಯ ವಿದ್ಯಾಭಿವೃದ್ದಿ ಸಂಘದ ನಿರ್ದೇಶಕರುಗಳಾದ ಪಿ.ಎಲ್.ರಮೇಶ್‌ಬಾಬು, ವೈ. ಶಂಕರನಾಥ ಶೆಟ್ಟಿ ಇವರುಗಳು ಉಪಸ್ಥಿತರಿರುವರು.
11 ರಂದು ಬೆಳಿಗ್ಗೆ 7 ಗಂಟೆಗೆ ವಾಸವಿ ಹಾಸ್ಟೆಲ್ ಆವರಣದಲ್ಲಿ ಕನ್ಯಕಾಪರಮೇಶ್ವರಿ ದೇವಿ ಸಹಿತ ಏಕನಾಥೇಶ್ವರಿ, ಬರಗೇರಮ್ಮ, ಕಾಳಿಕಮಠೇಶ್ವರಿ, ಗೌರಸಂದ್ರ ಮಾರಮ್ಮ, ದುರ್ಗಾದೇವಿಯವರ ಮೆರವಣಿಗೆಯ ಉದ್ಘಾಟನೆ ನೆರವೇರಲಿದೆ.
ಎಂ.ವೈ.ಕೆ.ವೆಂಕಟೇಶ್ ಹಾಗೂ ಪಿ.ಎಂ.ಶಶಿಕುಮಾರ್ ಇವರುಗಳ ನೇತೃತ್ವದಲ್ಲಿ ಮಂಗಳವಾದ್ಯಗಳ ಸಹಿತ ಪವಿತ್ರ ಕಳಶದೊಂದಿಗೆ ದೇವಿಯರ ವೈಭವಪೂರ್ಣ ಮೆರವಣಿಗೆ ರಾಜಬೀದಿಯಲ್ಲಿ ಸಾಗಲಿದೆ.
ವಿದ್ವಾನ್ ಎಲ್.ಎಸ್.ರಾಮಪ್ರಸಾದ್ ತಂಡದವರಿಂದ ವಿವಿಧ ಹೋಮಗಳು, ಪೂರ್ಣಾಹುತಿ ನಡೆಯಲಿದೆ. ನಂತರ ತೀರ್ಥಪ್ರಸಾದ ವಿನಿಯೋಗ.
11 ರಂದು ಸಂಜೆ ನಾಲ್ಕು ಗಂಟೆಗೆ ಹಾಗೂ 12 ರಂದು ಬೆಳಿಗ್ಗೆ 9-30 ರಿಂದ ವಾಸವಿ ಮಹಲ್‌ನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಆರ್ಯವೈಶ್ಯ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಡಾ.ಹೆಚ್.ಎನ್.ರಾಮಮೂರ್ತಿ ತಿಳಿಸಿದ್ದಾರೆ.