ರಾಮನಗರ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವ ಬಗ್ಗೆ ವಾಟಾಳ್ ನಾಗರಾಜ್ ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಏನು ಆಗುತ್ತಾ ಇದೆ ಅಂತ ಯಾರು ಊಹಿಸೋದಕ್ಕೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ನಾಲ್ಕು ಜನ ಮುಖಂಡರು ಅವರು ಯಾವ ಮೂಲೆಯಲ್ಲಿ ಹೇಳಿದ್ರೂನು ಅವರದ್ದು ಪವಿತ್ರ ಅಂತ ತೀರ್ಮಾನವಾಗಿದೆ. ನಾನು ಬಹಳ ಗಮನಿಸ್ತಾ ಇದ್ದೀನಿ ಎಂದಿದ್ದಾರೆ.
ಸಿದ್ಧಗಂಗಾ ಮಠಕ್ಕೆ ಅಮಿತ್ ಶಾ ಬಂದಿದ್ದರು. ಯಾಕೆ ಬಂದರು ಅಲ್ಲಿಗೆ. 115ನೇ ಪುಣ್ಯ ದಿನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆಯ್ತು ಬಂದ್ರಿ ನೀವೂ ಅಲ್ಲಿ ಗಂಗಾ ಇಲ್ಲಿ ಸಿದ್ದಗಂಗಾ ಅಂತ ಹೇಳಿ ಹೆಲಿಕಾಪ್ಟರ್ ಹತ್ತಿ ಹೋಗ್ಬಿಟ್ರಿ. ವ್ಯವಸ್ಥೆ ಮಾಡಿದ್ದವರು ಸಂತೋಷವಾಗಿ ಶಬ್ಬಾಶ್ ಗಿರಿ ಕೊಟ್ಡಿದ್ದಾರೆ. ಮುಂದಿನದಲ್ಲಿ ಶಾ ಅವರು ನಾವೂ ಹೇಳಿದಂಗೆ ಕೇಳ್ತಾರೆ ಅನ್ನೋದು ಖಾತ್ರಿ ಆಗೋಯ್ತು.
ನಾನು ಕೇಳೋದು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಯಾಕೆ ಕೊಡಲಿಲ್ಲ. ಕಾರಣ ಏನು. ಅಮಿತ್ ಶಾ ಬಂದ್ರು. ಕೇಂದ್ರದ ಗೃಹ ಮಂತ್ರಿ. ಅವ್ರು ಯಾಕೆ ಹೇಳಲಿಲ್ಲ. ಬರೀ ಸಮಾರಂಭಕ್ಕಷ್ಟೆ ಸೀಮಿತವಾ. ಸಮಾರಂಭ ಮಾಡಿ ಶಬ್ಬಾಶ್ ಗುರಿ ತೆಗೆದುಕೊಳ್ಳೋಕೆ ಮಾತ್ರ ಸೀಮಿತವಾ.. ಬಿಜೆಒಇ ಮುಖಂಡರುಗಳು ನಿಜವಾಗಲೂ ಮಾನ ಮರ್ಯಾದೆ ಗೌರವ ಇದ್ದಿದ್ದರೆ ಭದ್ರವಾಗಿ ಕೇಂದ್ರಸ ರ್ಕಾರದ ಮೇಲೆ ಒತ್ತಡ ಹೇರಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿಸಬೇಕಿತ್ತು. ಮಠದ ಆಶೀರ್ವಾದ ಬೇಕು, ಸಮಾರಂಭ ಬೇಕು ಆದರೆ ಭಾರತ ರತ್ನ ಯಾಕೆ ಕೊಡಿಸಲಿಲ್ಲ ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಸಾಕಷ್ಡು ಜನರಿಗೆ ಭಾರತ ರತ್ನ ಕೊಟ್ಟಿದೆ. ಆದರೇ ಶ್ರೀಗಳಿಗೆ ಯಾಕೆ ಕೊಡುತ್ತಿಲ್ಲ. ಆ ಬಗ್ಗೆ ಕೇಂದ್ರ ಸರ್ಕಾರ ಬಾಯಿ ಬಿಡಬೇಕು. ಇಲ್ಲ ಅಂದ್ರೆ ಬಿಜೆಪಿ ಮುಖಂಡರು ಯಾರ್ ಯಾರಿದ್ದೀರಿ ನೀವೂ ರಾಜೀನಾಮೆ ಕೊಡಿ. ಭಾರತ ರತ್ನ ಕೊಡದೆ ಇರುವ ಕೇಂದ್ರ ಸರ್ಕಾರದ ಧೋರಣೆಯನ್ನ ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.