ಅಮೇಜಾನ್ ಮ್ಯಾನೇಜರ್ ಮೇಲೆ ಗುಂಡಿನ ದಾಳಿ : ಚಿಕಿತ್ಸೆ ಫಲಿಸದೆ ಸಾವು..!

 

ದೆಹಲಿ: ರಾತ್ರಿ ಸಮಯದಲ್ಲಿ ಅಮೇಜಾನ್ ಸಂಸ್ಥೆಯ ಮ್ಯಾನೇಜರ್ ರನ್ನು ಗುಂಡಿಟ್ಟು ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ. ಹರ್ಪೀತ್ ಗಿಲ್ ಗುಂಡೇಟಿಗೆ ಬಲಿಯಾದ ಮ್ಯಾನೇಜರ್ ಆಗಿದ್ದಾರೆ. ದೆಹಲಿಯ ಶುಭಾಶ್ ವಿಹಾರ್ ಪ್ರದೇಶದಲ್ಲಿ ಈ ದುಷ್ಕೃತ್ಯ ನಡೆದಿದೆ.

ಹರ್ಪಿತ್ ಗಿಲ್ ತನ್ನ ಚಿಕ್ಕಪ್ಪನ ಜೊತೆಗೆ ಇದ್ದರು. ಶುಭಾಶ್ ವಿಹಾರ್ ಪ್ರದೇಶದಲ್ಲಿ ಇದ್ದಾಗ ದುಷ್ಕರ್ಮಿಗಳು ಬಂದು ಗುಂಡಿನ ದಾಳು ನಡೆಸಿದ್ದಾರೆ. ಗಿಲ್ ತಲೆಗೆ ಬಲವಾದ ಗುಂಡೇಟು ಬಿದ್ದಿದೆ. ಅವರ ಚಿಕ್ಕಪ್ಪನ ಮೇಲೂ ಗುಂಡಿನ ಸುರಿಮಳೆ ಗೈದಿದ್ದಾರೆ. ತಕ್ಷಣ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಲೆಗೆ ಗಂಭೀರ ಗುಂಡೇಟು ಬಿದ್ದ ಕಾರಣ ಹರ್ಪಿತ್, ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿತ್ತಾದರೂ ಬದುಕುಳಿಯಲಿಲ್ಲ. ಇನ್ನು ಅವರ ಚಿಕ್ಕಪ್ಪನಿಗೂ ದೇಹದ ಮೇಲೆ ಗುಂಡೇಟು ಬಿದ್ದು ಗಂಭೀರ ಗಾಯಗಳಾಗಿವೆ. ಸದ್ಯ ಅವರ ಚಿಕ್ಕಪ್ಪ ಸುಧಾರಿಸಿಕೊಳ್ಳುತ್ತಿದ್ದಾರೆ. ರಾತ್ರಿ ಸುಮಾರು 11.30 ಕ್ಕೆ ಫೈರಿಂಗ್ ನಡೆದಿದೆ. ಯಾರೋ ಐವರು ಬಂದು ಗುಂಡು ಹಾರಿಸಿ, ಪರಾರಿಯಾದರು ಎಂದು ಅವರ ಚಿಕ್ಕಪ್ಪ ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks