ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 27 : ಪಾಠ, ಆಟದ ಜತೆಗೆ ಕರಕುಶಲ ಕಲೆ ಕಲಿತರೆ ಜೀವನಕ್ಕೆ ತುಂಬಾ ಉಪಯೋಗ ಆಗುತ್ತೆ ಎಂದು ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎ. ವೀರಣ್ಣ ಹೇಳಿದರು.

ನಗರದ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಇಂದು ಕರಕುಶಲ ಮೇಳ ಆಯೋಜನೆ ಮಾಡಲಾಗಿತ್ತು ಈ ಮೇಳದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿ. ಕರಕುಶಲ ಕಲೆ ಮೂಲಕ ಪಾಠಪ್ರವಚನ ಹೇಳಿಕೊಡುವುದರಿಂದ ಮಕ್ಕಳಿಗೆ ವಿಷಯಗಳು ಸುಲಭವಾಗಿ ಅರ್ಥವಾಗುತ್ತದೆ. ಆಟ ಮತ್ತು ಕಲೆಯ ಜತೆ ಪಾಠ ಸಹ ಹೇಳಿಕೊಡೋದ್ರಿಂದ ಮಕ್ಕಳಿಗೆ ಪಾಠದ ಬಗ್ಗೆ ಆಸಕ್ತಿ ಹೆಚ್ಚುವುದರ ಜತೆಗೆ ಕಲೆ ಮಕ್ಕಳ ಸೃಜನಶೀಲತೆಯನ್ನು ಬೆಳೆಸುತ್ತೆ, ಹೊಸ ಹೊಸ ವಿಚಾರಗಳನ್ನು ಕಂಡುಹಿಡಿಯುವುದಕ್ಕೆ ಸಹಾಯ ಮಾಡುತ್ತದೆ.
ಕರಕುಶಲ ಕೆಲಸ ಮಾಡೋದ್ರಿಂದ ಮಕ್ಕಳ ಕೈಗಳು ಚುರುಕಾಗುತ್ತವೆ.ಮತ್ತು ಪಾಠಗಳು ಮಕ್ಕಳಿಗೆ ಹೆಚ್ಚು ದಿನ ನೆನಪಿನಲ್ಲಿ ಉಳಿಯುತ್ತದೆ .ಅಷ್ಟೇ ಅಲ್ಲದೆ ಗಣಿತ ಪಾಠಕ್ಕೆ ಜ್ಯಾಮಿತೀಯ ಆಕಾರಗಳನ್ನ ಕರಕುಶಲ ಕಲೆ ಮೂಲಕ ತಯಾರಿ ಮಾಡಿ ಹೇಳಿಕೊಡೋದು.ವಿಜ್ಞಾನ ಪಾಠಕ್ಕೆ ಮಾದರಿಗಳನ್ನ ತಯಾರಿ ಮಾಡಿ ಹೇಳಿಕೊಡೋದು.ಭಾಷಾ ಪಾಠಕ್ಕೆ ಕಥೆಗಳನ್ನ ನಾಟಕ ರೂಪದಲ್ಲಿ ಇವೆಲ್ಲವೂ ಕರಕುಶ ಕಲೆಯಲ್ಲಿ ಕಲಿಯಬಹುದಾಗಿದೆ ಎಂದರು.
ವೃತ್ತಿ ಶಿಕ್ಷಣ ಶಿಕ್ಷಕಿ ಎನ್.ಆರ್.ನಾಗರತ್ನ ಮಾತನಾಡಿ ಕಸದಿಂದ ರಸ ಮಾಡುವ ರೀತಿಯ ನ್ನ ಕರಕುಶಲಕಲೆ ಕಲಿಸುತ್ತದೆ. ಮಕ್ಕಳಿಗೆ ಹೊಲಿಗೆ ಹಾಗೂ ಬಟ್ಟೆ ಕತ್ತರಿಸುವ ವಿಧಾನ. ವಿವಿಧ ಕಚ್ಚಾ ವಸ್ತುಗಳನ್ನ ತಯಾರು ಮಾಡಿ ಮನೆಯ ಗೃಹಬಳಕೆ ಗೃಹಲಂಕಾರ ವಸ್ತುಗಳನ್ನ ತಯಾರು ಮಾಡಲು ಸಹಕಾರಿಯಾಗಲಿದೆ. ನಿಪುಣರಾದರೆ ಸರ್ಕಾರಿ ಹುದ್ದೆ ಸಿಗದೇ ಹೋದರೆ ಕರ ಕುಶಲೆ ವಸ್ತುಗಳನ್ನ ತಯಾರು ಮಾಡಿ ಮಾರಾಟ ಮಾಡಿ ಜೀವನವನ್ನು ಸಾಗಿಸಬಹುದಾಗಿದೆ ಎಂದರು.

ಶಿಕ್ಷಕ ಸುಜಾತ ಮಾತನಾಡಿ, ವಿದ್ಯಾರ್ಥಿ ಸಮಯವನ್ನು ಸದುಪಯೋಗಪಡಿಸಿಕೊಂಡರೆ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನಮಟ್ಟಕ್ಕೆ ಬೇಕಾಗುವಂತಹ ಕರಕುಶಲ ಕಲೆಗಳನ್ನು ಕಲಿಯಬಹುದಾಗಿದೆ.. ವಿದ್ಯಾರ್ಥಿಗಳು ವಿವಿಧ ಅನುಪಯುಕ್ತ ವಸ್ತುಗಳನ್ನು ಬಳಕೆ ಮಾಡಿ. ಉತ್ತಮವಾದ ಚಿತ್ರಗಳನ್ನು, ಗೃಹಲಂಕಾರಿಕ ವಸ್ತುಗಳನ್ನ ತಯಾರು ಮಾಡಿದ್ದಾರೆ ಇದು ಮುಂದಿನ ಜೀವನಮಟ್ಟಕ್ಕೆ ಸಹಕಾರಿಯಾಗಲಿದೆ ಎಂದರು.
ಈ ಸಮಯದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಶಿಕ್ಷಕರು ಬಿ.ರಾಜಕುಮಾರ್, ಶಂಕರ್,
ಪೂರ್ಣಿಮಾ, ಸುಧಾ, ಪ್ರವೀಣ, ಜಮುನಾ, ಗೀತಾ, ಉಮಾ ವೇಣಿ, ರೂಪ, ಸಪೂರ ಶಿವಣ್ಣ ಸೇರಿದಂತೆ ಪ್ರೌಢಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
















