Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಮಕ್ಕಳ ಸರ್ವತೋಮುಖ ವಿಕಾಸ ಶಿಕ್ಷಣದ ಗುರಿಯಾಗಬೇಕು : ಡಾ.ಹೆಚ್.ವಿ.ವಾಮದೇವಪ್ಪ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 09 : ಶಿಕ್ಷಣವೆಂದರೆ ಅಂಕಗಳಷ್ಟೆ ಮಾನದಂಡವಾಗಬಾರದು. ಸಾಮರ್ಥ್ಯಾಧಾರಿತ ಪ್ರಶಿಕ್ಷಣಾರ್ಥಿಗಳು ಇಂದಿನ ಸಮಾಜಕ್ಕೆ ಬೇಕು ಎಂದು ಸಿರಿಗೆರೆ ತರಳಬಾಳು ಜಗದ್ಗುರು ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯರಾದ ಡಾ.ಹೆಚ್.ವಿ.ವಾಮದೇವಪ್ಪ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಬುಧವಾರ ಏರ್ಪಡಿಸಲಾಗಿದ್ದ ಹತ್ತು ಬೆಳದಿಂಗಳ ಕಾರ್ಯಕ್ರಮ ಅಣುಬೋಧನಾ ಕಾರ್ಯಾಗಾರ ಉದ್ಗಾಟಿಸಿ ಮಾತನಾಡಿದರು.

ಒಳ್ಳೆಯ ಶಿಕ್ಷಕನಾಗಬೇಕಾದರೆ ಕಲಾವಿದನಾಗಿರಬೇಕು. ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಮೂಡಿಸುವುದು ಹತ್ತು ಬೆಳದಿಂಗಳ ಕಾರ್ಯಕ್ರಮದ ಉದ್ದೇಶ. ರಂಗ ನಟ ಅಶೋಕ್
ಬಾದರದಿನ್ನಿರವರು ಹತ್ತು ಬೆಳದಿಂಗಳು ಎನ್ನುವ ಪದವನ್ನು ಸೂಚಿಸಿದರೆಂದು ಸ್ಮರಿಸಿಕೊಂಡ ಡಾ.ಹೆಚ್.ವಿ.ವಾಮದೇವಪ್ಪ ಮುಂದೆ ಶಿಕ್ಷಕರಾಗುವ ನೀವುಗಳು ಮಕ್ಕಳಲ್ಲಿರುವ ಅಂತರ್ಗತ ಸಾಮರ್ಥ್ಯವನ್ನು ಗುರುತಿಸಬೇಕು. ಮಕ್ಕಳ ಸರ್ವತೋಮುಖ ವಿಕಾಸ ಶಿಕ್ಷಣದ ಗುರಿಯಾಗಬೇಕೆಂದರು.

ಸಾಮರ್ಥ್ಯಗಳೇ ಬೇರೆ, ಅಂಕಗಳೆ ಬೇರೆ. ಉದ್ಯೋಗ ಪಡೆಯಲು ಅಂಕಗಳಷ್ಟೆ ಮುಖ್ಯವಲ್ಲ. ಸಾಮಥ್ರ್ಯವೂ ಇರಬೇಕು. ಬಿ.ಇ.ಡಿ. ನಂತರ ಶಿಕ್ಷಕರುಗಳೆ ಆಗಬೇಕೆಂದೇನೂ ಇಲ್ಲ. ಸಾಕಷ್ಟು ಕ್ಷೇತ್ರಗಳಿವೆ. ಎಲ್ಲಿಯಾದರೂ ಸಾಧನೆ ಮಾಡಬಹುದು. ಸದೃಢ ಸಮಾಜ ಕಟ್ಟುವಂತ ಸಾಧನೆ ಮಾಡುವ ಶಿಕ್ಷಣ ಇಂದಿನ ಮಕ್ಕಳಿಗೆ ಅತ್ಯವಶ್ಯಕ. ತರಬೇತಿಯಲ್ಲಿ ಸಿಗುವ ಜ್ಞಾನ ಪಡೆದುಕೊಳ್ಳಿ. ನಿರಂತರವಾಗಿ ಯಾರು ಕಲಿಕೆಯಲ್ಲಿ ತೊಡಗಿರುತ್ತಾರೋ ಅವರೆ ನಿಜವಾದ ಶಿಕ್ಷಕರು. ಜ್ಞಾನ ಎನ್ನುವುದು ದೊಡ್ಡ ಸಾಗರವಿದ್ದಂತೆ. ಬಿ.ಇ.ಡಿ. ನಿಮ್ಮ ಜೀವನದಲ್ಲಿ ಮುಖ್ಯ ಹಂತ. ಜ್ಞಾನದ ಜೊತೆ ತಂತ್ರಜ್ಞಾನಕ್ಕೆ ಅಪ್‍ಡೇಟ್ ಆಗಿ ಮನೋಧೋರಣೆಯನ್ನು ಬದಲಾಯಿಸಿಕೊಳ್ಳುವಂತೆ ಪ್ರಶಿಕ್ಷಣಾರ್ಥಿಗಳಿಗೆ ಡಾ.ಹೆಚ್.ವಿ.ವಾಮದೇವಪ್ಪ ಕರೆ ನೀಡಿದರು.

ಬಿ.ಇ.ಡಿ. ಎಂದರೆ ಕೌಶಾಲ್ಯಾಧಾರಿತ ಶಿಕ್ಷಣ. ಅಂಕಗಳ ಹಿಂದೆ ಓಡಬೇಡಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಆತ್ಮವಿಶ್ವಾಸವಿರಬೇಕಾದರೆ ಕೌಶಲ್ಯಾಧಾರಿತ ಶಿಕ್ಷಣ ಮುಖ್ಯ. ತರಗತಿಯಲ್ಲಿ ವಿದ್ಯಾರ್ಥಿಗಳ ಗಮನವನ್ನು ಪಾಠದ ಕಡೆಗೆ ಹಿಡಿದಿಟ್ಟುಕೊಳ್ಳಬೇಕಾದರೆ ಶಿಕ್ಷಕರುಗಳಿಗೆ ಸಂವಹನಾ ಕೌಶಲ್ಯ, ನಿರ್ವಹಣಾ ಕೌಶಲ್ಯ ಬೇಕು. ಒಳ್ಳೆಯ ಶಿಕ್ಷಕ, ಒಳ್ಳೆಯ ಸಂಶೋಧಕನಾಗಿರುತ್ತಾನೆಂದು ತಿಳಿಸಿದರು.

 

ಪ್ರಶಿಕ್ಷಣಾರ್ಥಿಗಳಿಗೆ ಅಣುಬೋಧನೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಪ್ರತಿಯೊಂದು ಅಣುವಿನ ಮೇಲೆ ಪ್ರಭುತ್ವ ಸಾಧಿಸುವುದೇ ಅಣುಬೋಧನೆ. ವಿಮರ್ಶಾತ್ಮಕ ಚಿಂತನಾ ಕೌಶಲ್ಯ ಹಾಗೂ ಸೃಜನಾತ್ಮಕ ಚಿಂತನಾ ಕೌಶಲ್ಯ ಶಿಕ್ಷಕರುಗಳಲ್ಲಿರಬೇಕೆಂದರು.

 

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಂ.ಆರ್.ಜಯಲಕ್ಷ್ಮಿ ಮಾತನಾಡಿ ಅಣುಬೋಧನೆ ಎನ್ನುವುದು ಪ್ರಶಿಕ್ಷಣಾರ್ಥಿಗಳಿಗೆ ಬೇಕು. ಅಣುಬೋಧನೆ ಎಂದರೆ ಕೌಶಲ್ಯ. ಮೈಕ್ರೋ ಟೀಚಿಂಗ್ ಕಡೆ ಪ್ರಶಿಕ್ಷಣಾರ್ಥಿಗಳು ಗಮನ ಹರಿಸಲು ಅಣುಬೋಧನೆ ಸಹಕಾರಿಯಾಗಲಿದೆಯಲ್ಲದೆ ಬೋಧನೆಗೆ ಅಣಿಗೊಳಿಸುತ್ತದೆ. ಮೈಕ್ರೋ ಟೀಚಿಂಗ್‍ನ ಎಲ್ಲಾ ಕೌಶಲ್ಯಗಳನ್ನು ಕಲಿಯಲು ಮ್ಯಾಕ್ರೋ ಟೀಚಿಂಗ್ ನೆರೆವಾಗುತ್ತದೆಂದು ನುಡಿದರು.

ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಪ್ರೊ.ಹೆಚ್.ಎನ್.ಶಿವಕುಮಾರ್, ಉಪನ್ಯಾಸಕರುಗಳಾದ ಡಾ.ಜಿ.ಹನುಮಂತರೆಡ್ಡಿ, ಪ್ರೊ.ಓ.ಎಂ.ಮಂಜುನಾಥ್ ಇವರುಗಳು ವೇದಿಕೆಯಲ್ಲಿದ್ದರು.

 

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...