ಉಕ್ರೇನ್ ನಿಂದ 219 ಭಾರತೀಯರ ಸ್ಥಳಾಂತರ ; ಇಂದು ರಾತ್ರಿ ಮುಂಬಯಿ ತಲುಪಲಿರುವ ಏರ್ ಇಂಡಿಯಾ ವಿಮಾನ…!

ಉಕ್ರೇನ್ ಮೇಲೆ ರಷ್ಯಾ ಸೇನೆಯ ಬಾಂಬ್ ದಾಳಿ ಮೂರನೇ ದಿನವೂ ಮುಂದುವರಿದಿದೆ. ರಷ್ಯಾದ ಪಡೆಗಳು ರಾಜಧಾನಿ ಕೀವ್ ಮೇಲೆ ಕ್ಷಿಪಣಿಗಳಿಂದ ಬಾಂಬ್ ದಾಳಿ ನಡೆಸುತ್ತಿವೆ.

ಇದರಿಂದ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಅಪಾಯದಲ್ಲಿರುವವರೆಲ್ಲರೂ ಬಾಂಬ್ ಶೆಲ್ಟರ್‌ಗಳು, ಮೆಟ್ರೋ ನಿಲ್ದಾಣಗಳು ಮತ್ತು ಬಂಕರ್‌ಗಳಲ್ಲಿ ಅಡಗಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರು ಮತ್ತು ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ. ಮೊದಲ ಏರ್ ಇಂಡಿಯಾ ವಿಮಾನ ರೊಮೇನಿಯಾದಿಂದ ಹೊರಡಲಿದೆ. ಒಟ್ಟು 219 ಭಾರತೀಯರು ವಿಮಾನದಲ್ಲಿದ್ದರು. ಏರ್ ಇಂಡಿಯಾ ವಿಮಾ್ನ ಇಂದು (ಶನಿವಾರ) ರಾತ್ರಿ 8.45ಕ್ಕೆ ಮುಂಬೈಗೆ ಆಗಮಿಸಲಿದೆ. ಎರಡನೇ ವಿಮಾನ ನಾಳೆ (ಭಾನುವಾರ ಮಧ್ಯ ರಾತ್ರಿ) 2.30 ಕ್ಕೆ ದೆಹಲಿ ತಲುಪಲಿದೆ.

ಉಕ್ರೇನ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರ್ ಟ್ವಿಟ್ಟರ್ ನಲ್ಲಿ ಉಲ್ಲೇಖಿಸಿದ್ದಾರೆ. ತೆರವು ತಂಡಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತಿವೆ ಎನ್ನಲಾಗಿದೆ. ತೆರವು ಪ್ರಕ್ರಿಯೆಯ ಮೇಲುಸ್ತುವಾರಿಯನ್ನು ಸ್ವತಃ ತಾವೇ ನೋಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಒಟ್ಟು 219 ಭಾರತೀಯ ಪ್ರಜೆಗಳೊಂದಿಗೆ ಮುಂಬೈಗೆ ಮೊದಲ ವಿಮಾನ ರೊಮೇನಿಯಾದಿಂದ ಬರಲಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *