ಸ್ವಾವಲಂಬಿ ಜೀವನಕ್ಕೆ ಕೃಷಿ ರೈತರೇ ಮಾದರಿ ; ಕಡಿಮೆ ಖರ್ಚು ಅಧಿಕ ಲಾಭದಲ್ಲಿ ಮಲ್ಲಿಗೆ …!

suddionenews
3 Min Read

ಕುರುಗೋಡು,(ಫೆ.10) : ಸ್ವಾವಲಂಬಿ ಜೀವನಕ್ಕೆ ಈ ರೈತರೇ ಮಾದರಿ.ಹೌದು  25 ಸೆಂಟ್ಸ್ ಜಮೀನು ನಲ್ಲಿ ಮಲ್ಲಿಗೆ ಹೂವಿನ ಗಿಡಗಳು, ಬೆಳೆದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ವರ್ಷಕ್ಕೆ ಮನೆಯ ಖರ್ಚು, ಸಣ್ಣ ಪುಟ್ಟ ಸಾಲ ತೀರಿಸಿಕೊಂಡು 30 ರಿಂದ 40 ಸಾವಿರ ಮಲ್ಲಿಗೆ ಹೂವಿನಿಂದ ಆದಾಯ ಗಳಿಸುತ್ತಿದ್ದಾರೆ.

ರೈತರು ತಮ್ಮ ಭೂಮಿಯಲ್ಲಿ ಒಂದೇ ಬೆಳೆ ಬೆಳೆಯುವ ಕಾಯಕವನ್ನು ಹೊಂದಿರುತ್ತಾರೆ. ಆದ್ರೇ ಇಲ್ಲಿ ಗ್ರಾಮೀಣ ಭಾಗದ ರೈತರು ತಮ್ಮ 25 ಸೆಂಟ್ಸ್ ಭೂಮಿಯಲ್ಲಿ 200 ಮಲ್ಲಿಗೆ ಹೂವಿನ ಗಿಡಗಳನ್ನು ನೆಟ್ಟು, ಅದರೊಂದಿಗೆ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಉತ್ತಮ ಆದಾಯವನ್ನು ಗಳಿಸುತ್ತಾ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಅದಕ್ಕೆ ಈ ರೈತರೆ ಮಾದರಿ.

ಕುರುಗೋಡು ಪಟ್ಟಣ ಸಮೀಪದ ಮಣ್ಣೂರು ಗ್ರಾಮದ  ನಿವಾಸಿಗಳಾದ ಮೂಕಮ್ಮನ ಮಗ ಹನುಮಂತ, ತಳವಾರ ವಿರೂಪಮ್ಮಾ ಎನ್ನುವ ರೈತರು ಸುಮಾರು 2 ವರ್ಷಗಳಿಂದ ಕೃಷಿಯನ್ನು ನಂಬಿ ಜೀವನವನ್ನು ನಡೆಸುತ್ತಿದ್ದಾರೆ. ಅದರಲ್ಲಿ ಮೊದಲಿನಿಂದಲೂ ಭತ್ತ ಬೆಳೆಯುವುದರ ಜೊತೆಗೆ ಮಲ್ಲಿಗೆ ಹೂ ಬೆಳೆಯುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಮಲ್ಲಿಗೆ ಹೂವಿನ ಗಿಡಗಳನ್ನು ನೆಟ್ಟು ಉತ್ತಮ ಆದಾಯವನ್ನು ಪಡೆದಿದ್ದಾರೆ.

ಇವರ ತಮ್ಮ 25 ಸೆಂಟ್ಸ್ ಭೂಮಿಯಲ್ಲಿ 200 ಮಲ್ಲಿಗೆ ಹೂವಿನ ಗಿಡಗಳನ್ನು ನೆಟ್ಟಿದ್ದಾರೆ ಇದರ ಜೊತೆಗೆ ವಿವಿಧ ರೀತಿಯ ಮಿಶ್ರ ಬೇಸಾಯದ ಬೆಳೆಗಳನ್ನು ಬೆಳೆಯಲು ಗುರಿ ಹೊಂದಿದ್ದಾರೆ.

ಭತ್ತಕ್ಕೆ ಸುಮಾರು 1 ಎಕರೆಗೆ 30 ರಿಂದ 40 ಸಾವಿರ ಖರ್ಚು ಮಾಡಿದರು ಇಳುವರಿ ಕುಂಟಿತ ಗೊಂಡು ಹಾಕಿದ ಬಂಡವಾಳ ಪಡೆಯುವುದೇ ಡೌಟ್ ಅದರಲ್ಲಿ ಮಲ್ಲಿಗೆ ಹೂ ಬೆಳೆದಲ್ಲಿ ಎರಡು ವರ್ಷಕ್ಕೆ 20 ಸಾವಿರ ಖರ್ಚು, ಆದಾಯ ಮಾತ್ರ ಮನೆಯ ಸಣ್ಣ ಪುಟ್ಟ ಸಾಲ ತೀರಿಸಿಕೊಂಡು, ನಿತ್ಯ ಮನೆಯ ಖರ್ಚು ನಿಭಾಯಿಸಿಕೊಂಡು ವರ್ಷ ಕ್ಕೆ 30 ರಿಂ 40 ಸಾವಿರ ರೂಪಾಯಿ ಆದಾಯ ಉಳಿತಾಯ ಮಾಡುತ್ತಿದ್ದಾರೆ.

ಕಂಪ್ಲಿ ಹತ್ತಿರ ಬೆಳಗೋಡ್ ಗ್ರಾಮದಲ್ಲಿ ಮಲ್ಲಿಗೆ ಹೂ ಸಸಿಗಳನ್ನು
ಪಡೆದು ಕೊಂಡು ಆರಂಭದಲ್ಲಿ ತಮ್ಮ ಜಮೀನು ನಲ್ಲಿ ಮಾತ್ರ ಹೂವಿನ ಗಿಡ ನೆಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಎಕರೆ ಯಲ್ಲಿ  ಹೂವಿನ ಗಿಡಗಳನ್ನು ಹಾಕಬೇಕು ಎನ್ನುವ ನಿರ್ಧಾರ ಇದೆ, ಇದರಿಂದ ಉತ್ತಮ ಆದಾಯವಿದೆ ಎನ್ನುತಿದ್ದಾರೆ.

ಕಳೆದ ಎರಡು ವರ್ಷದಲ್ಲಿ 25 ಸೆಂಟ್ಸ್ ಎಕರೆ ಭೂಮಿಯಲ್ಲಿ ಮಲ್ಲಿಗೆ ಹೂವಿನ ಗಿಡಗಳಿಗೆ 15 ರಿಂದ 20 ಸಾವಿರ ರೂಪಾಯಿ ಕೂಲಿ, ಗೊಬ್ಬರ, ಕಳೆವು, ಇನ್ನಿತರ ಕ್ಕೆ ಖರ್ಚು ಆಗಿದೆ. ಕಳೆದ ಎರಡು ವರ್ಷ ಗಳಲ್ಲಿ ಅತಿ ಹೆಚ್ಚು ಮಲ್ಲಿಗೆ ಹೂವು ಮಾರಾಟದಿಂದ ಅಧಿಕ ಲಾಭ ಪಡೆದಿದ್ದೆವೆ ಎಂದು ತಿಳಿಸಿದರು.

ಖರ್ಚು :
200 ಮಲ್ಲಿಗೆ ಹೂವಿನ ಗಿಡಗಳಿಗೆ ವಾರಕ್ಕೆ ಒಂದು ಬಾರಿ ಉಳದ್ದು ಮದ್ದು ಸಿಂಪಡಣೆಗೆ 950 ರೂಪಾಯಿ ಮತ್ತು ತಿಂಗಳಿಗೊಂದು‌ ಬಾರಿ ಮಲ್ಲಿಗೆ ಹೂವು ಚಿರುಗಿ ಮದ್ದು ಸಿಂಪಡಣೆಗೆ 1200 ರೂಪಾಯಿ ಖರ್ಚು ಆಗುತ್ತದೆ.

15 ದಿನಗಳಿಗೊಮ್ಮೆ ಕಳೆ ತೆಗಿತಿವಿ. ನಾಲ್ಕು‌ಐದು ಕೂಲಿಗಳು ಬರ್ತಾರೆ ಇಲ್ಲದಿದ್ದರೆ ಮನೆಯವರೆ ನೋಡಿಕೊಂಡು ಹೋಗುತ್ತಾರೆ.

ಒಟ್ಟಾರೆಯಾಗಿ ಭತ್ತ ಬೆಳೆಯುವುದಕ್ಕಿಂತ ಮಲ್ಲಿಗೆ ಹೂವಿನ ಗಿಡಗಳನ್ನು ಹಾಕಿ, ಬೆಳೆಯುವುದರಿಂದ ಉತ್ತಮ ಆದಾಯ ಜೊತೆಗೆ ಉತ್ತಮ ಜೀವನ‌ ನಡೆಸುತ್ತಿದ್ದೆವೆ ಎಂದು ರೈತರು ಸಂತಸ ವ್ಯಕ್ತ ಪಡಿಸಿಕೊಂಡರು.

ಹೇಳಿಕೆ :

ಒಂದು ಎಕರೆ ಭತ್ತ ಬೆಳೆಯಬೇಕಾದ್ರೆ ಎಕರೆಗೆ ಕನಿಷ್ಠ 30 ಸಾವಿರ ರೂಪಾಯಿ ಖರ್ಚು ಆರಂಭದಲ್ಲಿಯೇ ಮಾಡಬೇಕು. ಮಲ್ಲಿಗೆ ಹೂವಿನ ಗಿಡಗಳನ್ನು ಬೆಳೆಯುವುದರಿಂದ ಪ್ರತಿನಿತ್ಯ ಆದಾಯ ಇದೆ. ಕಡಿಮೆ ಖರ್ಚು, ಆದಾಯ ಹೆಚ್ಚು ಇರುತ್ತದೆ. ಮನೆಯ ಸದಸ್ಯರೇ ಕೆಲಸ ಮಾಡಿದ್ರೇ ಉತ್ತಮ, ಹೂವಿನ ಬಿಡುವ ಪ್ರಮಾಣ‌ ಹೆಚ್ಚಾದರೆ‌ ಮಾತ್ರ ಎರಡು ಮೂರು ಕೂಲಿಗಳನ್ನು ಕರೆದುಕೊಂಡು ನಾವು ಸಹ ಕೆಲಸ‌ಮಾಡುತ್ತೇವೆ ಎಂದರು.

ತಳವಾರ ವಿರೂಪಮ್ಮಾ ಹೂ ಬೆಳೆದ ರೈತ ಮಹಿಳೆ  ಮಣ್ಣೂರು
———————————————–

ವರದಿ  : ಸುಧಾಕರ್ ಮಣ್ಣೂರು

Share This Article
Leave a Comment

Leave a Reply

Your email address will not be published. Required fields are marked *