ಶಾಸ್ತ್ರವೆಲ್ಲಾ ಮುಗಿಸಿ, ತಾಳಿ ಕಟ್ಟುವಾಗ ಬೇಡವೆಂದ ವಧು : ಹೊಸದುರ್ಗದಲ್ಲಿ ಇದೆಂಥಾ ಕೇಸ್..?

1 Min Read

ಹೊಸದುರ್ಗ: ಎಲ್ಲಾ ಶಾಸ್ತ್ರಗಳು ಮುಗಿದು, ಮದುವೆಯ ದಿನ ವಧು ಅಥವಾ ವರ ಎಸ್ಕೇಪ್ ಆಗಿರುವಂತ ಅದೆಷ್ಟೋ ಪ್ರಕರಣಗಳನ್ನು ನೋಡಿದ್ದೇವೆ. ಇದೀಗ ಅಂಥದ್ದೇ ಪ್ರಕರಣವೊಂದು ಹೊಸದುರ್ಗದಲ್ಲಿ ನಡೆದಿದೆ. ಹೊಸದುರ್ಗ ತಾಲೂಕಿನ ಚಿಕ್ಕ ಬ್ಯಾಲದಿ ಕೆರೆಯ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದ್ದು, ವಧು ಯಮುನಾ ಎಂಬಾಕೆ ನನಗೆ ಮದುವೆ ಬೇಡ ಎಂದು ಹಠ ಹಿಡಿದಿದ್ದಾರೆ.

ಚಿಕ್ಕಬ್ಯಾಲದಕೆರೆ ಗ್ರಾಮದ ಸಂತೋಷ್ ಹಾಗೂ ತಿಪರಡ್ಡಿಹಳ್ಳಿಯ ಯಮುನಾ ಎಂಬುವವರಿಗೆ ಮದುವೆ ನಿಶ್ಚಯವಾಗಿತ್ತು. ಹಿರಿಯರು ಒಪ್ಪಿ, ಎಲ್ಲಾ ಶಾಸ್ತ್ರಗಳು ನಡೆದಿದ್ದವು. ಗುರುವಾರಕ್ಕೆ ಮುಹೂರ್ತ ನಿಗಧಿಯಾಗಿತ್ತು. ಹಿಂದಿನ ದಿನವೂ ವಧು – ವರರಿಬ್ಬರು ಶಾಸ್ತ್ರದಲ್ಲಿ ಭಾಗಿಯಾಗಿದ್ದರು. ಆದರೆ ಬೆಳಗ್ಗೆ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು, ಸಿನಿಮಾ ಸ್ಟೈಲ್ ನಲ್ಲಿ, ನನಗೆ ಮದುವೆ ಬೇಡ ಎಂದು ರಿಜೆಕ್ಟ್ ಮಾಡಿದ್ದಾರೆ.

ಈ ಘಟ‌ನೆಯ ಬಳಿಕ ಮದುವೆಯ ಮನೆಯಲ್ಲೇ ಇದ್ದ ಸಂಬಂಧಿಕರೆಲ್ಲ ವಧುವಿನ ಮನಸ್ಸು ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಇಂಥ ನಿರ್ಧಾರಕ್ಕೆ ಕಾರಣ ತಿಳಿಯುವುದಕ್ಕೆ ಯತ್ನಿಸಿದ್ದಾರೆ. ಯಾರ ಮಾತಿಗೂ ಕಿವಿಗೊಡದೆ, ಯಾರ ಮನವಿಗೂ ಸ್ಪಂದಿಸದೆ ಮದುವೆ ನನಗೆ ಇಷ್ಟವಿಲ್ಲ. ನಾನು ಮದುವೆ ಆಗಲ್ಲ ಎಂದೇ ವಧು ಹಠ‌ಮಾಡಿದ್ದಾರೆ. ಕೊನೆಗೂ ಮದುವೆ ರದ್ದಾಗಿದ್ದು, ಸಂಬಂಧಿಕರೆಲ್ಲಾ ವಾಪಾಸ್ ಹೋಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *