ತಿರುಪತಿಗೆ ಹೋದರೆ ಅಲ್ಲಿನ ಲಡ್ಡು ಪ್ರಸಾದ ತರದೆ ಯಾರೂ ಬರಲ್ಲ. ಲಡ್ಡು ಪ್ರಸಾದ ಅಂದ್ರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಆ ಲಡ್ಡುಗೆ ಕಳೆದ 20 ವರ್ಷದಿಂದ ಕರ್ನಾಟಕದ ಪ್ಯೂರ್ ನಂದಿನಿ ತುಪ್ಪವನ್ನೇ ಬಳಕೆ ಮಾಡಲಾಗುತ್ತಿದೆ. ಆದರೆ ಇನ್ಮುಂದೆ ನಂದಿನಿ ತುಪ್ಪಕ್ಕೆ ಬ್ರೇಕ್ ಹಾಕಲಾಗುತ್ತಿದೆ. ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಮಾಹಿತಿ ನೀಡಿದ್ದಾರೆ.
ಕಳೆದ 20 ವರ್ಷದಿಂದ ಕೆಎಂಎಫ್ ಗೆ ನಂದಿನಿ ತುಪ್ಪ ಸರಬರಾಜು ಮಾಡಲಾಗುತ್ತಿತ್ತು. 6 ತಿಂಗಳಿಗೆ 14 ಲಕ್ಷ ಕೆಜಿಯಷ್ಟು ತುಪ್ಪವನ್ನು ಸರಬರಾಜು ಮಾಡಲಾಗುತ್ತಿತ್ತು. ರಿಯಾಯಿತಿ ದರದಲ್ಲಿಯೇ ತುಪ್ಪವನ್ನು ನೀಡುತ್ತಿತ್ತು. ಆದರೆ ಈ ಬಾರಿ ರಿಯಾಯಿತಿ ದರದಲ್ಲಿ ತುಪ್ಪ ನೀಡುವುದಕ್ಕೆ ಆಗುತ್ತಿಲ್ಲ ಎಂದು ಟೆಂಡರ್ ಕೈಬಿಡಲಾಗಿದೆ.
ಕರ್ನಾಟಕದಲ್ಲಿ ಸದ್ಯ ಹಾಲಿನ ಕೊರತೆ ಕಾಡುತ್ತಿದೆ. ಹೀಗಾಗಿ ಉಪ ಉತ್ಪನ್ನಗಳ ದರ ಏರಿಕೆ ಮಾಡುವುದು ಕೂಡ ಅನಿವಾರ್ಯತೆಯಾಗಿದೆ. ನಂದಿನಿ ತುಪ್ಪದ ದರವೂ ಹೆಚ್ಚಳವೂ ಆಗಿದೆ. ಹೀಗಾಗಿ ತಿರುಪತಿಗೆ ಸರಬರಾಜು ಮಾಡುವ ತುಪ್ಪದ ಟೆಂಡರ್ ಕೈಬಿಡಲು ಕೆಎಂಎಫ್ ನಿರ್ಧಾರ ಮಾಡಿದೆ.