Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

20 ವರ್ಷದ ಬಳಿಕ ತಿರುಪತಿಗೆ ಸರಬರಾಜು ಆಗುತ್ತಿದ್ದ ನಂದಿನಿ ತುಪ್ಪಕ್ಕೆ ಬ್ರೇಕ್ : ಕಾರಣ ಏನು ಗೊತ್ತಾ..?

Facebook
Twitter
Telegram
WhatsApp

ತಿರುಪತಿಗೆ ಹೋದರೆ ಅಲ್ಲಿನ ಲಡ್ಡು ಪ್ರಸಾದ ತರದೆ ಯಾರೂ ಬರಲ್ಲ. ಲಡ್ಡು ಪ್ರಸಾದ ಅಂದ್ರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಆ ಲಡ್ಡುಗೆ ಕಳೆದ 20 ವರ್ಷದಿಂದ ಕರ್ನಾಟಕದ ಪ್ಯೂರ್ ನಂದಿನಿ ತುಪ್ಪವನ್ನೇ ಬಳಕೆ ಮಾಡಲಾಗುತ್ತಿದೆ. ಆದರೆ ಇನ್ಮುಂದೆ ನಂದಿನಿ ತುಪ್ಪಕ್ಕೆ ಬ್ರೇಕ್ ಹಾಕಲಾಗುತ್ತಿದೆ. ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ‌ನಾಯಕ್ ಮಾಹಿತಿ ನೀಡಿದ್ದಾರೆ.

ಕಳೆದ 20 ವರ್ಷದಿಂದ ಕೆಎಂಎಫ್ ಗೆ ನಂದಿನಿ ತುಪ್ಪ ಸರಬರಾಜು ಮಾಡಲಾಗುತ್ತಿತ್ತು. 6 ತಿಂಗಳಿಗೆ 14 ಲಕ್ಷ ಕೆಜಿಯಷ್ಟು ತುಪ್ಪವನ್ನು ಸರಬರಾಜು ಮಾಡಲಾಗುತ್ತಿತ್ತು. ರಿಯಾಯಿತಿ ದರದಲ್ಲಿಯೇ ತುಪ್ಪವನ್ನು ನೀಡುತ್ತಿತ್ತು. ಆದರೆ ಈ ಬಾರಿ ರಿಯಾಯಿತಿ ದರದಲ್ಲಿ ತುಪ್ಪ ನೀಡುವುದಕ್ಕೆ ಆಗುತ್ತಿಲ್ಲ ಎಂದು ಟೆಂಡರ್ ಕೈಬಿಡಲಾಗಿದೆ.

ಕರ್ನಾಟಕದಲ್ಲಿ ಸದ್ಯ ಹಾಲಿನ ಕೊರತೆ ಕಾಡುತ್ತಿದೆ. ಹೀಗಾಗಿ ಉಪ ಉತ್ಪನ್ನಗಳ ದರ ಏರಿಕೆ ಮಾಡುವುದು ಕೂಡ ಅನಿವಾರ್ಯತೆಯಾಗಿದೆ. ನಂದಿನಿ ತುಪ್ಪದ ದರವೂ ಹೆಚ್ಚಳವೂ ಆಗಿದೆ. ಹೀಗಾಗಿ ತಿರುಪತಿಗೆ ಸರಬರಾಜು ಮಾಡುವ ತುಪ್ಪದ ಟೆಂಡರ್ ಕೈಬಿಡಲು ಕೆಎಂಎಫ್ ನಿರ್ಧಾರ ಮಾಡಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಉದ್ಯೋಗ ವಾರ್ತೆ | ಅತಿಥಿ ಶಿಕ್ಷಕರ, ಉಪನ್ಯಾಸಕರ ನೇಮಕಕ್ಕೆ ಅರ್ಜಿ

  ಚಿತ್ರದುರ್ಗ. ಮೇ.24:  ಚಿತ್ರದುರ್ಗ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜು, ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಅತಿಥಿ ಶಿಕ್ಷಕರು, ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಐಪಿಎಲ್ ನಿಂದ ಹೊರಬಿದ್ದ ಮೇಲೆ ಅಭಿಮಾನಿಗಳಿಗಾಗಿ ಪೋಸ್ಟ್ ಹಾಕಿದ ವಿರಾಟ್ ಕೊಹ್ಲಿ

  ಈ ಬಾರಿಯ ಐಪಿಎಲ್ ನಲ್ಲಿ ಆರ್ಸಿಬಿ ಟೀಂ ಆಡಿದ್ದು ನೋಡಿದ್ರೆ ಖಂಡಿತ ಕಪ್ ಗೆದ್ದು ತಂದೇ ತರುತ್ತಾರೆ ಎಂಬ ವಿಶ್ವಾಸ ಎಲ್ಲರಿಗೂ ಮೂಡಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಸೋತು,

ಚಿತ್ರದುರ್ಗ | ವಿದ್ಯುತ್ ಬಿಲ್ ಪಾವತಿಸುವ ಕಚೇರಿ ಸ್ಥಳಾಂತರ

ಚಿತ್ರದುರ್ಗ. ಮೇ.24: ನಗರದ ಐಶ್ವರ್ಯ ಪೋರ್ಟ್ ಮುಂದಿನ ಹಳೇ ಬೆವಿಕಂ ಕಾಲೋನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಕಚೇರಿಯನ್ನು, ನಗರದ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಆದ್ದರಿಂದ

error: Content is protected !!