ಅಫ್ತಾಬ್ ಕೊಂದೇ ಬಿಡುತ್ತಾನೆ : ಕೊಲೆಗೂ ಕೆಲವು ತಿಂಗಳ ಹಿಂದೆಯೇ ಸ್ನೇಹಿತನಿಗೆ ಮೆಸೇಜ್ ಮಾಡಿದ್ದ ಶ್ರದ್ಧಾ..!

 

ದೆಹಲಿಯನ್ನಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ ಶ್ರದ್ಧಾಳ ಕೊಲೆ. ಅಫ್ತಾಬ್ ನನ್ನು ಪ್ರೀತಿಸಿದ ತಪ್ಪಿಗೆ ಇಂದು ಶ್ರದ್ಧಾ ಸ್ಮಶಾಣ ಸೇರಿದ್ದಾಳೆ. ಅಫ್ತಾಬ್ ತನ್ನನ್ನು ಕೊಲೆ ಮಾಡಬಹುದು ಎಂಬುದು ಶ್ರದ್ಧಾಗೆ ಈ ಮೊದಲೇ ಗೊತ್ತಿತ್ತು. ಹೀಗಾಗಿ ತನ್ನ ಸ್ನೇಹಿತನಿಗೆ ಈ ಬಗ್ಗೆ ಮೆಸೇಜ್ ಕೂಡ ಹಾಕಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಅಫ್ತಾಬ್, ಶ್ರದ್ಧಾ ನನಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಳು. ನನ್ನನ್ನು ಈ ನರಕ ಕೂಪದಿಂದ ಮೊದಲು ಕರೆದುಕೊಂಡು ಹೋಗು. ಇಲ್ಲವಾದಲ್ಲಿ ಈತ ನನ್ನನ್ನು ಕೊಂದು ಬಿಡುತ್ತಾನೆ ಎಂದಿದ್ದಳು. ನಾನು ಆ ಸಮಯದಲ್ಲಿ ಎಚ್ಚರಿಕೆ ಕೊಟ್ಟಿದ್ದೆ. ಮುಂದೆ ಮತ್ತೆ ಇದೇ ರೀತಿ ನಡೆದರೆ ಪೊಲೀಸ್ ಕಂಪ್ಲೈಂಟ್ ಕೊಡುತ್ತೀನಿ ಎಂದಿದ್ದೆ. ಆದ್ರೆ ದೂರು ನೀಡಲು ಹೋಗಿರಲಿಲ್ಲ. ಇಬ್ಬರದ್ದು ಅನ್ಯಜಾತಿಯಾಗಿದ್ದ ಕಾರಣ ಅವರ ಪ್ರೀತಿಗೆ ಅಡ್ಡಿಯಾಗಬಾರದು ಎಂದು ದೂರು ನೀಡಿರಲಿಲ್ಲ. ಆದ್ರೆ ಶ್ರದ್ಧಾ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಕಾಂಟ್ಯಾಕ್ಟ್ ಗೆ ಸಿಕ್ಕಿರಲಿಲ್ಲ ಎಂದಿದ್ದಾರೆ.

ಶ್ರದ್ಧಾ ಮತ್ತು ಅಫ್ತಾಬ್ 2018ರಲ್ಲಿ ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದ್ದರು. ಬಳಿಕ ಇಬ್ಬರು ಒಂದೇ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ಅದಾದ ಬಳಿಕ ಪ್ರೀತಿ, ಪ್ರೇಮ ಅಂತ ಒಂದೇ ಮನೆಯಲ್ಲಿ ವಾಸವಾಗಿದ್ದರು. ಶ್ರದ್ಧಾ ಇದ್ದಾಗಲೂ ಅಫ್ತಾಬ್ ಡೇಟಿಂಗ್ ಆಪ್ ನಲ್ಲಿ ಆಕ್ಟೀವ್ ಆಗಿದ್ದನಂತೆ. ಶ್ರದ್ಧಾ ಅವನ ಫೋನ್ ಜಿಪಿಎಸ್ ಚೆಕ್ ಮಾಡುತ್ತಿದ್ದಳಂತೆ. ಅವನ ಕಳ್ಳಾಟಗಳೆಲ್ಲಾ ತಿಳಿದ ಮೇಲೆ ಮದುವೆಯಾಗು ಎಂದಿದ್ದಕ್ಕೆ ಜಗಳಗಳು ನಡೆಯುತ್ತಿದ್ದವಂತೆ. ಇದೇ ವಿಚಾರಕ್ಕೆ ಜಗಳ ಅತಿರೇಕಕ್ಕೆ ಹೋಗಿ ಕೊಲೆಯೇ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *