ಕಾಬೂಲ್: ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ, ಪಂಜಶಿರ್ ಕಣಿವೆಯ ಮೇಲೆ ಆಕ್ರಮಣ ಮಾಡಿದ್ರು. ಆದ್ರೆ ಅಲ್ಲಿನ ಜನ, ಸೇನೆಯವರು ಪಂಜಶಿರ್ ಕಣಿವೆಯನ್ನ ಉಳಿಸಿಕೊಳ್ಳೋದಕ್ಕೆ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ತಾಲಿಬಾನಿಗಳ ವಿರುದ್ಧ ಹೋರಾಡಿದ್ದಾರೆ.
ಆದ್ರೆ ಎಷ್ಟೇ ಹೋರಾಟ ನಡೆಸಿದ್ರು ತಾಲಿಬಾನಿಗಳು ಕ್ರೌರ್ಯದ ಮುಂದೆ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಸೇನೆಯ ಹಿಡಿತ ತಪ್ಪಿದ್ದು, ಇದೀಗ ಪಂಜಶಿರದಲ್ಲೂ ತಮ್ಮ ಆಕ್ರಮಣ ಶುರು ಮಾಡಿದ್ದಾರೆ. ಇದೀಗ ಪಂಜಶಿರ್ ಸಂಪೂರ್ಣ ನಮ್ಮ ವಶವಾಗಿದೆ ಎಂದು ಘೋಷಿಸುವುದಲ್ಲದೆ, ರಾಜಭವನವನ್ನ ಧ್ವಂಸ ಮಾಡಿ, ರಾಜಭವನದ ಮೇಲೆ ತಮ್ಮ ಬಾವುಟವನ್ನ ಹಾರಿಸಿದ್ದಾರೆ.
ತಾಲಿಬಾನಿಗಳನ್ನ ಬಡಿಯಲು ನಾರ್ಥನ್ ಅಲಯನ್ಸ್ ಸಾಕಷ್ಟು ಶ್ರಮಪಟ್ಟಿತ್ತು. ಆದ್ರೆ ಕಡೆಗೂ ತಾಲಿಬಾನಿಗಳೇ ಪಂಜಶಿರ್ ಪ್ರಾಂತ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದ ನಾರ್ಥನ್ ಅಲಯನ್ಸ್ ಗೆ ದೊಡ್ಡ ಪೆಟ್ಟದಾಂತಾಗಿದೆ. ಪಂಜಶಿರ್ ತಾಲಿಬಾನಿಗಳ ವಶವಾಗಲು ಪಾಕಿಸ್ತಾನ ಕೂಡ ಸಪೋರ್ಟ್ ಮಾಡಿದೆ ಎನ್ನಲಾಗಿದೆ.