ಇಸ್ರೋ ಸಂಸ್ಥೆ ಚಂದ್ರಯಾನ 3ಯಲ್ಲಿ ಸಕ್ಸಸ್ ಕಂಡಿದೆ. ಇದರ ಬೆನ್ನಲ್ಲೇ ಇದೀಗ ಸೂರ್ಯಾಯಾನ ಮಾಡುವುದಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಸೂರ್ಯಯಾನ ಮಾಡುವುದು ಬಹಳ ಮುಖ್ಯವಾಗಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳುತ್ತಾರೆ. ಸೆಪ್ಟೆಂಬರ್ 2ಕ್ಕೆ ಆದಿತ್ಯ ಎಲ್ 1 ಉಡಾವಣೆಯಾಗಲಿದೆ.
🚀PSLV-C57/🛰️Aditya-L1 Mission:
The launch of Aditya-L1,
the first space-based Indian observatory to study the Sun ☀️, is scheduled for
🗓️September 2, 2023, at
🕛11:50 Hrs. IST from Sriharikota.Citizens are invited to witness the launch from the Launch View Gallery at… pic.twitter.com/bjhM5mZNrx
— ISRO (@isro) August 28, 2023
ಈ ಸಂಬಂಧ ಇಸ್ರೋ ಡೆಪ್ಯೂಟಿ ಡೈರೆಕ್ಟರ್ ಎಸ್ ವಿ ಶರ್ಮಾ ಅವರು ಖಾಸಗಿ ವಾಹಿನಿಯೊಂದಕ್ಕೆ ಮಾಹಿತಿ ನೀಡಿದ್ದು, ಭೂಮಿಯಿಂದ ಸೂರ್ಯನೆಡೆಗೆ ಇರುವ ದೂರ ಸುಮಾರು 159 ಮಿಲಿಯನ್ ಕಿಲೋ ಮೀಟರ್. ಅಷ್ಟು ದೂರದಲ್ಲಿದ್ದರು ಸೂರ್ಯನಿಂದ ಭೂಮಿಗೆ ಬೆಳಕು, ಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್ ಸಿಗುತ್ತೆ. ಸೋಲಾರ್ ಸಿಸ್ಟಮ್ ಡಿಪೆಂಡ್ ಆಗಿರುವುದೇ ಸೂರ್ಯನ ಬೆಳಕಿನಿಂದ. ಎಲ್ಲಾ ಗ್ರಹಗಳಿಗೂ ಬೆಳಕು ಮತ್ತು ಏನರ್ಜಿ ಸಿಗೋದು ಕೂಡ ಸೂರ್ಯನಿಂದ. ಇವತ್ತಿನ ಟಿವಿ, ಮೊಬೈಲ್, ಎಲೆಕ್ಟ್ರಾನಿಕ್ ಡಿವೈಸ್ ಗಳು ಡಿಪೆಂಡ್ ಆಗಿರೋದು ಸ್ಯಾಟಲೈಟ್ ನಿಂದ.
ಸ್ಯಾಟಲೈಟ್ ನಿಂದಾಗಿ ನಮಗೆ ಬೇಕಾದ ಕಮ್ಯುನಿಕೇಷನ್ ಮಾಡುತ್ತೇವೆ. ಈ ಸ್ಯಾಟಲೈಟ್ ನಮಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡಬೇಕಾದರೆ, ಸೂರ್ಯನಿಂದ ಬರುವಂತಹ ಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್ಗಳು ಸ್ಯಾಟಲೈಟ್ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದೆಲ್ಲವನ್ನು ತಿಳಿದುಕೊಳ್ಳಬೇಕಿದೆ.
ಆದಿತ್ಯ ಎಲ್ 1 ಉಪಗ್ರಹ7 ಪೆಲೋಡ್ ಹೊತ್ತೊಯ್ಯುತ್ತದೆ. ಇದರಲ್ಲಿ VELC, ಅಂದರೆ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್, ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್, ಪ್ಲಾಸ್ಮಾ ವಿಶ್ಲೇಷಕ ಪ್ಯಾಕೇಜ್, ಸೌರ ಶಕ್ತಿಯ ಅಧ್ಯಯನಕ್ಕಾಗಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಕೂಡ ಇರಲಿದೆ. ಇವು ಸೂರ್ಯನಿಂದ ಹೊರ ಸೂಸುವ ಶಕ್ತಿಶಾಲಿ ಕಿರಣಗಳ ಅಧ್ಯಯನ ಮಾಡಲಿವೆ ಎಂದಿದ್ದಾರೆ.