ನಟಿ ಶ್ರೀಲೀಲಾ ಸ್ಯಾಂಡಲ್ ವುಡ್ ಬಳಿಕ ಬೇರೆ ಭಾಷೆಯಲ್ಲಿಯೇ ಹೆಚ್ಚು ಮಿಂಚುತ್ತಾ ಇದ್ದಾರೆ. ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅರಿಶಿನ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳನ್ನು ನೋಡಿದಾಗ ಮದುವೆ ಕಾರ್ಯಕ್ರಮವೇ ಇರಬಹುದು ಎಂದೇ ಎಲ್ಲರಿಗೂ ಅನ್ನಿಸಿದ್ದು ಸುಳ್ಳಲ್ಲ. ಇದೇನಿದು ಇದ್ದಕ್ಕಿದ್ದ ಹಾಗೇ ಮದುವೆ ಆಗಿಬಿಟ್ರಾ ಶ್ರೀಲೀಲಾ ಅಂತಾನೂ ಎಲ್ಲರೂ ಮಾತಾಡಿಕೊಂಡಿದ್ದರು. ಇದೀಗ ಅದಕ್ಕೆಲ್ಲ ಶ್ರೀಲೀಲಾನೇ ಉತ್ತರ ನೀಡಿದ್ದಾರೆ.
ಶ್ರೀಲೀಲಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಅರಿಶಿನ ಶಾಸ್ತ್ರದ ಫೋಟೋಗಳು ಸೇರಿದಂತೆ ಒಂದಷ್ಟು ಬೇರೆ ಬೇರೆ ಶಾಸ್ತ್ರ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಬಗ್ಗೆ ಶ್ರೀಲೀಲಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆ ಫೋಟೋಗಳ ಹಿಂದಿನ ಸಂಪ್ರದಾಯವೇನು..? ಯಾವ ಉದ್ದೇಶಕ್ಕಾಗಿ ಮಾಡಿದ್ದು ಎಂಬುದನ್ನು ತಿಳಿಸಿದ್ದಾರೆ.
ಈ ಆರಿಶಿನ ಶಾಸ್ತ್ರದ ಸಂಪ್ರದಾಯವೆಲ್ಲಾ ಅವರ ಮನೆಯಲ್ಲಿ ಹುಟ್ಟುಹಬ್ಬದ ಹಿಂದಿನ ದಿನ ನಡೆಯೋದಂತೆ. ಜೂನ್ 14ರಂದು ಶ್ರೀಲೀಲಾ ಹುಟ್ಟುಹಬ್ಬವಿದೆ. ಅದಕ್ಕೂ ಮೊದಲೇ ಮನೆಯಲ್ಲಿ ಜೋರು ಸೆಲೆಬ್ರೇಷನ್ ಮಾಡಿದ್ದಾರೆ. ಈಗ ಶ್ರೀಲೀಲಾ ಮನೆಯಲ್ಲಿ ಆಗಿರೋದು ಅದೇ ನೋಡಿ. ಸೆಲೆಬ್ರೇಷನ್ ಜೊತೆಗೆ ಶ್ರೀಲೀಲಾ ಅವರನ್ನು ಹೊತ್ತು ಮೆರೆಸಿದ್ದಾರೆ. ಇದೆಲ್ಲಾ ಶ್ರೀಲೀಲಾ ಅವರ ತಾಯಿಯ ಪ್ಲ್ಯಾನ್ ಆಗಿದೆ. ಅದರ ಕ್ರೆಡಿಟ್ ಅನ್ನು ಶ್ರೀಲೀಲಾ ಅವರ ತಾಯಿಗೇನೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶ್ರೀಲೀಲಾ ಕ್ಲಾರಿಟಿ ಕಂಡು ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಹುಟ್ಟುಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಯಾಕಂದ್ರೆ ಆ ಫೋಟೋಗಳನ್ನ ಹಾಕಿ ಕಮಿಂಗ್ ಸೂನ್ ಅಂತ ಬೇರೆ ಹಾಕಿದ್ದರು. ಹೀಗಾಗಿ ಅಭಿಮಾನಿಗಳೆಲ್ಲಾ ನಮಗೆ ಗೊತ್ತಿಲ್ಲದೆ ಮದುವೆ ಆಗಿ ಬಿಟ್ರಾ ಅಂತ ಬೇಸರದಲ್ಲಿದ್ರು.















