IVF ಮೂಲಕ ತಾಯಿಯಾಗಿದ್ದ ನಟಿ ಭಾವನ ಮಗು ನಿಧನ..!

1 Min Read

ಬೆಂಗಳೂರು : ಮದುವೆಯಾಗದೆ ಐವಿಎಫ್ ಮೂಲಕ ಗರ್ಭಿಣಿಯಾಗುವ ಮೂಲಕ ನಟಿ ಭಾವನ ರಾಮಣ್ಣ ಸಾಕಷ್ಟು ಸುದ್ದಿಯಾಗಿದ್ದರು. ಈ ಬೆನ್ನಲ್ಲೇ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಈ ಮೊದಲೇ ಅವಳಿ ಜವಳಿ ಮಕ್ಕಳು ಎಂಬುದು ಮೊದಲೇ ತಿಳಿದಿತ್ತು. ತಾನ್ಯಾಕೆ ಐವಿಎಫ್ ಮೂಲಕ ಗರ್ಭೀಣಿಯಾದೆ ಎಂಬ ವಿಚಾರವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದರು. ಶಾಸ್ತ್ರೋಕ್ತವಾಗಿ ಸೀಮಂತವನ್ನು ಮಾಡಿಕೊಂಡಿದ್ದರು. ಇದೀಗ ಮಗು ನಿಧನವಾಗಿದೆ ಎನ್ನಲಾಗಿದೆ.

ಕಳೆದ ವಾರವಷ್ಟೇ ಭಾವನೆಗೆ ಇಬ್ಬರು ಹೆಣ್ಣು ಮಕ್ಕಳ ಜನನವಾಗಿತ್ತು. ಅದರಲ್ಲಿ ಒಂದು ಮಗು ಅಸುನೀಗಿದೆ ಎನ್ನಲಾಗಿದೆ. ತಿಂಗಳು ಪೂರ್ತಿಯಾಗುವುದಕ್ಕೂ ಮುನ್ನವೇ ಸಮಸ್ಯೆ ಕಾಣಿಸಿಕೊಂಡಿತ್ತಂತೆ. ಹೀಗಾಗಿ ಎಂಟು ತಿಂಗಳಿಗೇನೆ ಹೆರಿಗೆ ಮಾಡಿಸಲಾಗಿದೆ. ವೈದ್ಯರ ಸಲಹೆಯಂತೆಯೇ ಭಾವನಾ ಎಲ್ಲಾ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಆದರೂ ಭಾವನಾರ ಒಂದು ಮಗು ಉಳಿದಿಲ್ಲ. ಇದರಿಂದ ಸಹಜವಾಗಿಯೇ ಆ ತಾಯಿ ಮನಸ್ಸಿಗೆ ನೋವಾಗಿರುತ್ತದೆ.

ಸದ್ಯ ಒಂದು ಹೆಣ್ಣು ಮಗು ಹಾಗೂ ತಾಯಿ ಭಾವನಾ ಸುರಕ್ಷಿತವಾಗಿದ್ದಾರೆ. ಎರಡು ಕೂಡ ಹೆಣ್ಣು ಮಕ್ಕಳೇ ಜನಿಸಿದ್ದವು. ಆದರೆ ಈಗ ಒಂದೇ ಮಗು ಉಳಿದಿದೆ. ಐವಿಎಫ್ ಮೂಲಕ ಗರ್ಭಿಣಿಯಾದ ಬಳಿಕ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ಮಾಡ್ತಾ ಇದ್ರು. ಮಾಮೂಲಿಯ ಜೀವನಕ್ಕೆ ಸಂಬಂಧಿಸಿದಂತೆ ಯೋಗ ಮಾಡ್ತ, ಪುಸ್ತಕಗಳನ್ನು ಓದುತ್ತಾ, ಮಕ್ಕಳ ಆರೋಗ್ಯದ ಕಡೆಗೂ ಗಮನ ಹರಿಸಿದ್ದರು. ಆದರೆ ವಿಧಿ ಹುಟ್ಟುತ್ತಲೇ ಒಂದು ಮಗುವನ್ನ ಕರೆದುಕೊಂಡು ಹೋಗಿದೆ. ಸದ್ಯ ತಾಯಿಯಾಗಿರುವ ಭಾವನ, ತನ್ನೊಂದೆ ಮಗುವಿನ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಒಂದು ಮಗುವಿನ ಸಾವು ನೋವನ್ನ ಕೊಟ್ಟರು, ಉಳಿದ ಮಗುವಿನ ಆರೋಗ್ಯದತ್ತ ಗಮನ ಹರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks