ವಯೋಸಹಜ ಕಾಯಿಲೆಯಿಂದನಟ ರವಿಚಂದ್ರನ್ ಅವರ ತಾಯಿ ನಿಧನ..!

suddionenews
1 Min Read

ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ನಟ ರವಿಚಂದ್ರನ್ ಅವರ ತಾಯಿ ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಶ್ರೀಮತಿ ಪಟ್ಟಮ್ಮಾಳ್ ವೀರಸ್ವಾಮಿ ಅವರಿಗೆ 83 ವರ್ಷ ವಯಸ್ಸಾಗಿತ್ತು.

ಇಂದು ಬೆಳಗ್ಗೆ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿದೆ. ಇಂದು ಸಂಜೆಯೇ ಅಂತ್ಯ ಸಂಸ್ಕಾರವೂ ನೆರವೇರಲಿದೆ. ಪಟ್ಟಮ್ಮಾಳ್ ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ.

ಕಳೆದ ಕೆಲವು ದಿನಗಳಿಂದಲೂ ಪಟ್ಟಮ್ಮಾಳ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ನಟ ರವಿಚಂದ್ರನ್ ಅವರು ಅಮ್ಮನನ್ನ ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದರು. ಸಾಕಷ್ಟು ವೇದಿಕೆಗಳಲ್ಲಿ ಅಮ್ಮ ಬೇಗ ಹುಷಾರಾದರೆ ಸಾಕು, ನನ್ನ ಆಯಸ್ಸು ಕೊಟ್ಟು ಬಿಡ್ತೇನೆ ಅಂತ ಹಲವು ಬಾರಿ ನಟ ರವಿಚಂದ್ರನ್ ಹೇಳಿ, ತುಂಬಾ ದುಃಖತಪ್ತರಾಗಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *